November 20, 2026
ಕರಾವಳಿ

ಉಜಿರೆಯಲ್ಲಿ ಟಿ.ಎನ್. ತುಳಪುಳೆ ದತ್ತಿ ಉಪನ್ಯಾಸ

‘ ಟಿ.ಎನ್. ತುಳಪುಳೆ ದತ್ತಿ ಉಪನ್ಯಾಸ ನಿಜಕ್ಕೂ ಶ್ಲಾಘನೀಯ. ಅವರನ್ನು ಸ್ಮರಿಸಿಕೊಂಡು ವಿದ್ಯಾರ್ಥಿಗಳಿಗೆ ಕನ್ನಡದ ಸಾಹಿತ್ಯದ ಬಗೆಗಿನ ಸೊಬಗನ್ನು ತಿಳಿಸಲು ಸಹಾಯಕ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿದೆ. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನಿಷ್ಠ ಎಲ್ಲ ವಿದ್ಯಾರ್ಥಿಗಳು ಒಂದಾದರೂ ಕನ್ನಡ ದಿನಪತ್ರಿಕೆಯನ್ನು ಓದಬೇಕು. ಸಾಹಿತ್ಯ ಎಂಬುದು ಅಂತರಂಗದ ಶ್ರೀಮಂತಿಕೆ .‌


ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಬೇಕಾದ ವೃತ್ತಿಯನ್ನು ಆಯ್ಕೆಮಾಡಬಹುದು . ಯಾವ ಹಿನ್ನೆಲೆಯಲ್ಲೂ ಸಾಹಿತ್ಯದ ಓದನ್ನು ಬಿಡಬಾರದು . ಏಕೆಂದರೆ ಅಂತರಂಗದ ನೆಮ್ಮದಿಗೆ ಸಾಹಿತ್ಯದ ಅಗತ್ಯವಿದೆ. ಕನ್ನಡದ ಅನೇಕ ಕವಿಗಳ ಸಂವೇದನೆಯನ್ನು ಈ ಮೂಲಕ ಅರ್ಥ ಮಾಡಿಕೊಳ್ಳಬೇಕು ‘ ಎಂದು ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಬಿ.ಪಿ ಸಂಪತ್ ಕುಮಾರ್ ಹೇಳಿದರು.

ಇವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಡಾ. ಟಿ. ಎನ್. ತುಳಪುಳೆ ದತ್ತಿ ಉಪನ್ಯಾಸ ಮತ್ತು ಸನ್ಮಾನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಳದಂಗಡಿಯ ಖ್ಯಾತ ವೈದ್ಯರಾಗಿರುವ ಡಾ. ಎನ್.ಎಂ ತುಳಪುಳೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಹಿತ್ಯದ ಸೊಗಡು ಎಲ್ಲೆಡೆ ಇಂತಹ ಕಾರ್ಯಕ್ರಮಗಳಿಂದ ಪಸರಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಅವರು ಡಾ. ಟಿ. ಎನ್. ತುಳಪುಳೆ ಅಂತಹ ಸಾಹಿತ್ಯ ಪರಿಚಾರಕರ ಸಾಹಿತ್ಯ ಪ್ರೀತಿ ವಿವರಿಸಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಹಾಗೂ ಈ ಮೂಲಕ ಸಾಹಿತ್ಯದ ಕಂಪನ್ನು ಎಲ್ಲೆಡೆಗೆ ಪಸರಿಸಲು ಸಾಧ್ಯ ಎಂದು ಹೇಳಿದರು. ಹಾಗೆಯೇ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಶ್ರೀ ಧಂ.ಮಂ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಉಪಸ್ಥಿತರಿದ್ದು ಶುಭ ಹಾರೈಸಿದರು. ಕನ್ನಡ ಭಾಷಾ ಉಪನ್ಯಾಸಕರಾದ ಸುಭಾಷ್ ರಾವ್ ಬೋಳೂರು ಹಾಗೂ ವಿಶ್ವನಾಥ ಎಸ್ ಅವರು ಅಭ್ಯಾಗತರನ್ನು ಗೌರವಿಸಿದರು.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಯದುಪತಿ ಗೌಡ ಇವರು ಸ್ವಾಗತ ಮತ್ತು ಆಶಯ ನುಡಿಗಳನ್ನಾಡಿದರು. ಶ್ರೀ ಧಂ.ಮಂ ಪ.ಪೂ ಕಾಲೇಜಿನ ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ. ವಂದಿಸಿದರು. ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ನಿರೂಪಿಸಿದರು.

Related posts

ಧರ್ಮಸ್ಥದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹ75 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ

Suddi Udaya

ನಂದಿನಿ ಹಾಲಿನ ದರ 8ರೂ. ಹೆಚ್ಚಳ

Suddi Udaya

ಭಾರೀ ಮಳೆ ಹಿನ್ನೆಲೆ: ಇಂದು (ಮೇ 30) ದ.ಕ.ಜಿಲ್ಲೆಯ ಶಾಲೆಗಳಿಗೆ ರಜೆಘೋಷಣೆ

Suddi Udaya

ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಉದ್ಘಾಟನೆ

Suddi Udaya

ಶಿಶಿಲ ಸೀಮಾ ಚಿತ್ಪಾವನ ಬ್ರಾಹ್ಮಣ ಸಮಾಜದಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಉಜಿರೆ ಪರಿಸರದ ಕೆಲ ಲಾಡ್ಜಗಳಿಗೆ
ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ, ನೇತೃತ್ವದಲ್ಲಿ ದಾಳಿ: ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಸೂಚನೆ

Suddi Udaya
error: Content is protected !!