November 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯ

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದಿ| ಇಂದಿರಾ ಗಾಂಧಿ ಯವರ 113 ನೇ ಹುಟ್ಟುಹಬ್ಬ ಆಚರಣೆ

ಬೆಳ್ತಂಗಡಿ: ಉಕ್ಕಿನ ಮಹಿಳೆ, ದೇಶದ ಪ್ರಥಮ ಮಹಿಳಾ ಪ್ರಧಾನಿ, ದಿ| ಇಂದಿರಾ ಗಾಂಧಿ ಯವರ 113 ನೇ ಹುಟ್ಟು ಹಬ್ಬವನ್ನು ನ.19ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗ್ರಾಮೀಣ ಘಟಕ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

ಪಕ್ಷದ ಹಿರಿಯ ಮುಖಂಡೆ ಹಾಗೂ ಸೌತಡ್ಕ ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಸದಸ್ಯೆ ಲೋಕೇಶ್ವರಿ ವಿನಯಚಂದ್ರ ಪುಷ್ಪಾರ್ಚನೆ ಮಾಡಿ ಇಂದಿರಾ ಗಾಂಧಿಯವರ ಮುಖಂಡತ್ವವನ್ನು ಕೊಂಡಾಡಿದರು. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತ ಸಮಯದಲ್ಲಿ ಲೋಕೇಶ್ವರಿಯವರನ್ನು ಇಂದಿರಾ ಗಾಂಧಿಯವರು ತನ್ನ ಹತ್ತಿರ ಕುಳಿತುಕೊಳ್ಳಿಸಿದನ್ನು ನೆನಪಿಸಿಕೊಂಡರು.

ಪಕ್ಷದ ಮುಖಂಡರುಗಳಾದ, ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ, ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ನಾರಾಯಣ ಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜೀನತ್ ಉಜಿರೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಪುಷ್ಪ ನೆರಿಯ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಸೌತಡ್ಕ ದೇವಸ್ಥಾನದಲ್ಲಿ ಪುಷ್ಕರಣಿ ಕೆರೆ, ರಕ್ತೇಶ್ವರಿ ಗುಡಿ, ನಾಗಾಲಯಕ್ಕೆ ಶಿಲಾನ್ಯಾಸ

Suddi Udaya

ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಹುದ್ದೆಯಿಂದ ಕೊಕ್ಕಡ ಕೊಲ್ಲಾಜೆ ನಿವಾಸಿ ಪವನ್ ಸಾಲ್ಯಾನ್ ಗೆ ಮುಕ್ತಿ

Suddi Udaya

ಶ್ರೀ ಕ್ಷೇ. ಧ. ಗ್ರಾ. ಯೋ. ವತಿಯಿಂದ ಮುಂಗಾರು ಯಾಂತ್ರಿಕ್ರತ ಭತ್ತ ಬೇಸಾಯ ಕ್ಕೆ ಚಾಲನೆ

Suddi Udaya

ಮದಕುಡೆ ಕುಟುಂಬಸ್ಥರಿಂದ ಪೆರಿಂಜೆ ಸ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಕರಾಯ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ವೇಣೂರು: ವಿ.ಕೆ. ಟ್ರೇಡರ್‍ಸ್ ನೂತನ ಕಾಡುತ್ಪತ್ತಿ ವ್ಯಾಪಾರ ಮಳಿಗೆ ಉದ್ಘಾಟನೆ

Suddi Udaya
error: Content is protected !!