July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮದಕುಡೆ ಕುಟುಂಬಸ್ಥರಿಂದ ಪೆರಿಂಜೆ ಸ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಪೆರಿಂಜೆ : ಸಮಾಜದಲ್ಲಿರುವ ವಿದ್ಯಾಭಿಮಾನಿಗಳು, ದಾನಿಗಳಿಂದ ಸರಕಾರಿ ಶಾಲೆಗಳಿಗೆ ಪ್ರೋತ್ಸಾಹ, ಕೊಡುಗೆಗಳು ಸಿಗುವಂತಾಗಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪೆರಿಂಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರುಮಾತುಗಳನ್ನಾಡಿದರು. ದಿವಂಗತ ಕೊರಗಪ್ಪ ಶೆಟ್ಟಿ, ದಿ. ಸಂಜೀವ ಶೆಟ್ಟಿ ಹಾಗೂ ದಿ.ವಿಠಲಶೆಟ್ಟಿ ಮದಕುಡೆ ಬರೋಡ ಇವರ ಸ್ಮರಣಾರ್ಥ ಮದಕುಡೆ ಕುಟುಂಬಸ್ಥರಾದ ಗಣೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಶೈಲೇಶ್ ಶೆಟ್ಟಿ, ವಿಕಾಸ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪ್ರೀತಿ ಶೆಟ್ಟಿ, ಪಿಂಕಿ ಹಾಗೂ ಮದಕುಡೆ ಕುಟುಂಬಸ್ಥರ ಸಹಕಾರದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮದಕುಡೆ ಕುಟುಂಬಸ್ಥರಾದ ಅಮ್ಮಿ ಶೆಟ್ಟಿ, ಸುಮತಿ ಶೆಟ್ಟಿ, ದೀಕ್ಷಾ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶಾಂತ, ಶಿಕ್ಷಣ ಪ್ರೇಮಿಗಳಾದ ಆಲಿಯಬ್ಬ, ಶಾಲಾ ಎಸ್ ಡಿ ಎಂ ಸಿ ಯ ದಿನೇಶ್, ರಮ್ಯಾ, ಜಾನಮ್ಮ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ನೀನಾ ಕುವೆಲ್ಲೊ ಸ್ವಾಗತಿಸಿ, ರಾಜೇಶ್ ನೆಲ್ಯಾಡಿ ಧನ್ಯವಾದಗೈದರು. ಶಿಕ್ಷಕರಾದ ವಿಶ್ವನಾಥ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Related posts

ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ನಿರ್ಗಮಿತ ಟ್ರಸ್ಟಿಗಳಿಗೆ ಬೀಳ್ಕೊಡುಗೆ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Suddi Udaya

ಶಿಬಾಜೆ: ಪೆರ್ಲ ಸುಮತಿ ಹೆಬ್ಬಾರ್ ನಿಧನ

Suddi Udaya

ಶಿಶಿಲ ಗ್ರಾಮ ಪಂಚಾಯತ್‌ ಗ್ರಾಮ ಸಭೆ

Suddi Udaya

ಇಂದು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಆರೋಪಿ ಕಿಲ್ಲೂರು ನಿವಾಸಿ ಮೊಹಮ್ಮದ್ ಕೈಫ್ ತಮಿಳುನಾಡಿನಲ್ಲಿ ಬಂಧನ

Suddi Udaya
error: Content is protected !!