ಉಜಿರೆ: ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನ ಸಂಪರ್ಕ ಕಲ್ಪಿಸುವ ರೂ.20 ಲಕ್ಷ ವೆಚ್ಚದಲ್ಲಿ ಕಿರಿಯಾಡಿ – ಭೀಮಗುಡ್ಡೆ – ಅರಳಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹರೀಶ್ ಪೂಂಜರವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶವಂತ್ ಗೌಡ ಪುದುವೆಟ್ಟು , ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಲ್ಮಂಜ, ಶಕ್ತಿ ಕೇಂದ್ರ ಪ್ರಮುಖರಾದ ಶಶಿಕಲಾ ದೇವಪ್ಪ ಗೌಡ ಸಾಯಿಕೃಪಾ, ಉಜಿರೆ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ರವಿ ಕುಮಾರ್ ಬರಮೇಲು, ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್, ಬೂತ್ ಅಧ್ಯಕ್ಷರುಗಳಾದ ದೇವಪ್ಪಗೌಡ ಸಾಯಿಕೃಪಾ, ಅಶ್ವಿನಿ ಬಂಗೇರ, ಕಾರ್ಯದರ್ಶಿಗಳಾದ ಪರಮೇಶ್ವರ ಗೌಡ ಅರಳಿ, ದಿನೇಶ್ ಗಾಂಧಿನಗರ, ದೇವಸ್ಥಾನದ ಆಡಳಿತ ಮುಕ್ತೇಸರರಾದ ವಾಸುದೇವ ಸಂಪಿಗೆತ್ತಾಯ, ಬ್ರಹ್ಮಕಲಶದ ಕಾರ್ಯಾಧ್ಯಕ್ಷರಾದ ಮಧುಸೂದನ್ , ಗಿರಿರಾಜ ಬಾರಿತ್ತಾಯ, ರಮೇಶ್ ಮಯ್ಯ, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಪಕ್ಷದ ಪ್ರಮುಖರು, ಜನಪ್ರತಿನಿದಿನಗಳು, ಮಾಜಿ ಗ್ರಾ.ಪಂ ಸದಸ್ಯರುಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.














