ಬೆಳ್ತಂಗಡಿ:ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್’ನಿಂದ ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಗಣಕ ವಿಜ್ಞಾನ ಪ್ರಯೋಗಾಲಯಕ್ಕೆ ಪೀಟೋಪಕರಣಗಳನ್ನು ಪದ್ಮಕುಮಾರ್ ಅವರ ಸುಪುತ್ರ ದಿ. ಜಯಂತ ಕುಮಾರ್ ಹೆಚ್’ರವರ ಸ್ಮರಣಾರ್ಥ ನ.21ರಂದು ಹಸ್ತಾoತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಜಾನ್ ಅರ್ವಿನ್ ಡಿಸೋಜರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ಜೈನ್’ರವರು ಪದ್ಮಕುಮಾರ್’ರವರ ಸೇವೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ದಾನಿಗಳಾದ ಪದ್ಮಕುಮಾರ್’ರವರು ವಿದ್ಯಾರ್ಥಿಗಳಿಗೆ ತಮ್ಮ ಕಿವಿಮಾತುಗಳನ್ನು ಹಂಚಿಕೊಂಡರು.
Snr ಎಂ. ಆರ್. ಪ್ರಸನ್ನ’ರವರು ಧ್ಯೇಯವಾಕ್ಯವನ್ನು ಉದ್ಘೋಶಿಸಿದರು.ವೇದಿಕೆಯಲ್ಲಿ ಕಾರ್ಯದರ್ಶಿಗಳಾದ ಶರತ್ ಕುಮಾರ್’ರವರು ಉಪಸ್ಥಿತರಿದ್ದರು.
ಪೂರ್ವಾಧ್ಯಕ್ಷರಾದ ಲ್ಯಾನ್ಸಿ. ಏ. ಪಿರೇರಾರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.














