November 22, 2026
ಗ್ರಾಮಾಂತರ ಸುದ್ದಿಸಂಘ-ಸಂಸ್ಥೆಗಳು

ಉಜಿರೆ ವರ್ತಕರ ಸಂಘದಿಂದ ಶ್ರೀ ಸಾಯಿ ಕೆಫೆ ಹೋಟೆಲ್‌ಗೆ ರೂ. 50,000 ಸಹಾಯಧನ ಹಸ್ತಾಂತರ

ಉಜಿರೆ: ಶ್ರೀ ಸಾಯಿ ಹೋಟೆಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡದಿಂದ ಹೋಟೆಲ್ ಮಾಲೀಕರು ಅಪಾರ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಉಜಿರೆ ಉಜಿರೆ ವಾಣಿಜ್ಯ ಮತ್ತು ಕೈಗರಿಕಾ ಸಂಘದ ವತಿಯಿಂದ ಮಾನವೀಯತೆ ನೆಲೆಯಲ್ಲಿ ಸಹಾಯಧನ ನೀಡಲಾಯಿತು.

ವರ್ತಕರ ಸಹಕಾರದಿಂದ ಸಂಗ್ರಹವಾದ ಒಟ್ಟು ರೂ. 50,000 ಮೊತ್ತದ ಚೆಕ್ ಅನ್ನು ಸಂಘದ ಗೌರವ ಅಧ್ಯಕ್ಷರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರ ಮುಖಾಂತರ ಹಸ್ತಾಂತರಿಸಲಾಯಿತು. ಚೆಕ್ ಸ್ವೀಕರಿಸಿದ ಸಾಯಿ ಹೋಟೆಲ್ ಮಾಲೀಕರು ಸಂಘದ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಡೆದ ಸಭೆಯ ಸ್ವಾಗತವನ್ನು ಕಾರ್ಯದರ್ಶಿ ಅಬ್ಬುಬಕರ್* ಅವರು ನೆರವೇರಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಧ್ಯಕ್ಷರಾದ ಪ್ರಸಾದ್ ಬಿ.ಎಸ್.* ಅವರು, ಎಲ್ಲಾ ವರ್ತಕರು ಸಂಘದ ಸದಸ್ಯತ್ವ ಪಡೆಯಬೇಕು, ಆಗ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು.

ಸದಸ್ಯರಲ್ಲದಿದ್ದರೂ ಈ ಬಾರಿ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಮಾತ್ರ ನಿಯಮಾವಳಿ ಪ್ರಕಾರ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ ಸದಸ್ಯತ್ವ ಅಭಿಯಾನ ನಡೆಸಲು ಹಾಗೂ *2027 ರಿಂದ ಸದಸ್ಯತ್ವ ಶುಲ್ಕವನ್ನು ರೂ. 500/- ಎಂದು ನಿಗದಿಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ಉಪಸ್ಥಿತರಿದ್ದರು.

Related posts

ಕೊಕ್ಕಡ : ನಿವೃತ್ತ ಅಂಚೆ ಪಾಲಕ  ಬಾಲಕೃಷ್ಣ ನಿಧನ

Suddi Udaya

ಲಾಯಿಲ : ಪ್ರಸನ್ನ ಸಿ.ಬಿ.ಎಸ್.ಸಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಧರ್ಮಸ್ಥಳ: ಕಂಚಿಮಾರು ನಿವಾಸಿ ರತ್ನಮ್ಮ ಜೈನ್ ನಿಧನ

Suddi Udaya

ಯುವವಾಹಿನಿ ವೇಣೂರು ಘಟಕ ಹಾಗೂ ಶ್ರೀ.ಗು.ನಾ. ಸ್ವಾ.ಸೇ. ಸಂಘ ಕೊಕ್ರಾಡಿ ಇದರ ಜಂಟಿ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ ಹಾಗೂ ನಾಟಿ ವೈದ್ಯರಿಗೆ ಸನ್ಮಾನ

Suddi Udaya

ಉಜಿರೆಯಲ್ಲಿ ಹಲಸು ಮತ್ತು ಹಣ್ಣಿನ ಮೇಳದ ಉದ್ಘಾಟನೆ

Suddi Udaya

ಆಲಡ್ಕ ಹಿಂದು ಯುವಶಕ್ತಿ ಸಂಘಟನೆಯ 44 ನೇ ಸೇವಾಯೋಜನೆಯ ವೈದ್ಯಕೀಯ ನೆರವು ಹಸ್ತಾಂತರ

Suddi Udaya
error: Content is protected !!