November 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಪಪೂ ಕಾಲೇಜು : ಬೃಹತ್ ವ್ಯಾಪಾರ ಮೇಳ – ವಿದ್ಯಾರ್ಥಿಗಳಿಂದ 30ಕ್ಕೂ ಹೆಚ್ಚಿನ ವಿನೂತನ ಮಳಿಗೆಗಳು- ವ್ಯಾಪಾರ ಉತ್ಸವದಲ್ಲಿ 4000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ: ಉದ್ಯಮ ಆರಂಭಿಸಲು ಹಿಂಜರಿಕೆ ಬೇಡ, ಸಾಧನೆಗೆ ಪರಿಶ್ರಮವೇ ಬಂಡವಾಳ: ರಾಜೇಶ್ ಪೈ

ಉಜಿರೆ,ದಿ.ನ.23 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಹಾಬಿ ಕ್ಲಬ್ ವತಿಯಿಂದ ವಾಣಿಜ್ಯ, ಸಂಖ್ಯಾಶಾಸ್ತ್ರ, ಇಕಾನಾಮಿಕ್ಸ್ ಹಾಗು ಇಂಗ್ಲಿಷ್ ವಿಭಾಗಗಳ ಸಹಯೋಗದೊಂದಿಗೆ ಕಾಲೇಜಿನ ಹೊರ ಆವರಣದಲ್ಲಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಿದ್ದ ಒಂದು ದಿನದ ವ್ಯಾಪಾರ ಹಾಗು ವ್ಯಾವಹಾರ ಮೇಳಕ್ಕೆ ಚಾಲನೆ ನೀಡಲಾಯಿತು.

ಉಜಿರೆಯ ಸಂಧ್ಯಾ ಟ್ರೇಡರ್ಸ್ ಸಂಸ್ಥೆಯ ಮುಖ್ಯಸ್ಥ ಹಾಗು ಉದ್ಯಮಿ ವ್ಯಾಪಾರ ಮತ್ತು ವ್ಯವಹಾರ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು, ವ್ಯಾಪಾರ ಎನ್ನುವುದು ಒಂದು ಪ್ರತಿಭೆ ಮತ್ತು ಕೌಶಲ್ಯ. ಆಸಕ್ತಿ, ದೃಢತೆ ಹಾಗೂ ನಿರಂತರ ಪರಿಶ್ರಮದಿಂದ ಯಾವುದೇ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅನೇಕ ಜನರು ಶೂನ್ಯದಿಂದ ಆರಂಭಿಸಿ ಇಂದು ಯಶಸ್ವಿ ಉದ್ಯಮಿಗಳಾಗಿ ಬೆಳೆದ ಉದಾಹರಣೆಗಳಿವೆ. ಉದ್ಯಮ ಆರಂಭಿಸಲು ವಿದ್ಯಾರ್ಥಿಗಳು ಹಿಂಜರಿಯಬಾರದು. ವ್ಯಾಪಾರದ ಗಳಿಕೆ ಮತ್ತು ವಿಸ್ತರಣೆಗೆ ಯಾವುದೇ ಪರಿಮಿತಿಯಿಲ್ಲ. ಕಾಲೇಜು ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮೌಲ್ಯ ಮತ್ತು ಗುರಿಗಳನ್ನು ಬೆಳೆಸುತ್ತಿದೆ. ವಿದ್ಯಾರ್ಥಿಗಳು ಉದ್ಯಮದ ಹೆಸರಿನಲ್ಲಿ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ತಂದೆ-ತಾಯಿಯ ಗೌರವ ಮತ್ತು ಕುಟುಂಬದ ಘನತೆಯನ್ನು ಸದಾ ಕಾಪಾಡಬೇಕು. ವಿದ್ಯಾರ್ಥಿಗಳು ಉತ್ತಮ ಸ್ನೇಹವಲಯವನ್ನು ಬೆಳೆಸಿಕೊಂಡು, ನಕಾರಾತ್ಮಕ ಚಟುವಟಿಕೆಗಳು ಮತ್ತು ದುಶ್ಚಟಗಳಿಂದ ದೂರವಿರಬೇಕು. ಇಂತಹ ಕೆಟ್ಟ ಅಭ್ಯಾಸಗಳು ಜೀವನದ ಗುರಿಗಳನ್ನು ನಶಿಸುವಂತೆ ಮಾಡುತ್ತದೆ. ತಂದೆ-ತಾಯಿ ಹಾಗೂ ಶಿಕ್ಷಕರನ್ನು ಗೌರವಿಸುವುದರ ಜೊತೆಗೆ ಅವರ ಆಶೀರ್ವಾದ ಮತ್ತು ಬೆಂಬಲವನ್ನು ಜೀವನದ ಬೆಳವಣಿಗೆಗೆ ಶಕ್ತಿಯಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಮಾತನಾಡಿ, ವ್ಯಾಪಾರ ವ್ಯವಹಾರ ಎಂಬುದು ನಮ್ಮನ್ನು ವಾಣಿಜ್ಯ ಕ್ಷೇತ್ರದಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ‌ ಪ್ರೇರೆಪಿಸುತ್ತದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ. ಇದರ ಭಾಗವಾಗಿ ಇಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಾಪಾರದ ಪ್ರಾಯೋಗಿಕ ಜಾಗೃತಿ ಮತ್ತು ಅನುಭವವನ್ನು ಮೂಡಿಸಲು ವ್ವಹಾರ ಮೇಳವನ್ನು ಬಹಳ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಳಿಗೆಯನ್ನು ಹರಾಜು ಮೂಲಕ ಕೊಂಡು ಕೊಳ್ಳುವುದರಿಂದ ಹಿಡಿದು ಒಟ್ಟು ವ್ಯಾಪಾರದ ಲಾಭಾಂಶವನ್ನು ಹಂಚಿಕೊಳ್ಳುವ ವರೆಗೂ ಎಲ್ಲಾ ತರಹದ ವ್ಯಾವಹಾರಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಉದ್ಯಮಿ, ಉಜಿರೆಯ ಸಂಧ್ಯಾ ಟ್ರೇಡರ್ಸ್ ಸಂಸ್ಥೆಯ ಸಂಸ್ಥಾಪಕ ರಾಜೇಶ್ ಪೈ ರವರನ್ನು ಪ್ರಾಂಶುಪಾಲ ಪ್ರೊ ಪ್ರಮೋದ್ ಕುಮಾರ್ ಬಿ. ಸ್ಮರಣಿಕೆ ನೀಡಿ ಗೌರವಿಸಿದರು. ಉಪ ಪ್ರಾಚಾರ್ಯರಾದ ಡಾ. ರಾಜೇಶ್ ಬಿ ಉಪಸ್ಥಿತರಿದ್ದರು. ಕಾರ್ಯಕ್ರಮದವನ್ನು ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ವೈದೇಹಿ ನಿರೂಪಿಸಿ ವಂದಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಬೇಬಿ ಹಾಗು ಪದ್ಮ ಶ್ರೀ ಸಹಕರಿಸಿದರು.

” ವ್ಯಾಪಾರ ವ್ಯವಹಾರ ಎಂಬುದು ಒಂದು ಕಲೆ. ಅದರಲ್ಲಿ ತೊಡಗಿಕೊಂಡಷ್ಟು ನಮ್ಮನ್ನು ಉತ್ತಮ ಮತ್ತು ಉನ್ನತ ಮಟ್ಟಕೇರಿಸುತ್ತದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಪಠ್ಯದ ಜೊತೆಗೆ ಪಠ್ಯೇತರ ಮತ್ತು ಪ್ರಾಯೋಗಿಕ ಕಾರ್ಯಕ್ರಮಗಳ ಆಯೋಜನೆಗೂ ಹೆಚ್ಚಿನ ಮಹತ್ವ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಇಂತಹ ವ್ಯವಹಾರ ಮೇಳಗಳು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉನ್ನತ ವ್ಯಾಪಾರ ಮತ್ತು ಉದ್ದಿಮೆದಾರರನ್ನಾಗಿ ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ. “- ರಾಜೇಶ್ ಪೈ ಉದ್ಯಮಿಗಳು, ಸಂಧ್ಯಾ ಟ್ರೇಡರ್ಸ್ ಉಜಿರೆ

” ಕಾಲೇಜಿನ’ ವ್ಯಪಾರ ಮೇಳ – 2026 ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ವಿದ್ಯಾರ್ಥಿ ಜೀವನದಿಂದಲೇ ಉದ್ಯಮವನ್ನು ಸ್ಥಾಪಿಸಲು ವಿಶಿಷ್ಟ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇದು ಹಣಕಾಸು ಯೋಜನೆ ಮತ್ತು ಲೆಕ್ಕಪತ್ರ ನಿರ್ವಹಣೆಯಿಂದ ಹಿಡಿದು ಮಾರುಕಟ್ಟೆ ಮತ್ತು ಮಾರಾಟದ ಸೃಜನಾತ್ಮಕ ಅಂಶಗಳ ಅನುಭವವನ್ನು ನಮಗೆ ನೀಡುತ್ತದೆ. – ಅಭಯ್ ವಿದ್ಯಾರ್ಥಿ, (ಫುಡ್ ,ಮಳಿಗೆ ಮಾಲಿಕ)

30 ಕ್ಕೂ ಹೆಚ್ಚಿನ ವಿನೂತನ ಸ್ಟಾಲ್ ಗಳು : ಒಂದು ದಿನದ ವ್ಯಾಪಾರ ವ್ಯವಹಾರ ಮೇಳದಲ್ಲಿ ಸ್ವತಃ ವಿದ್ಯಾರ್ಥಿಗಳು ವೃತಿಪ್ಪರ ವ್ಯಾಪಾರಿಗಳಿಂದ ಸಹಕಾರ ಮತ್ತು ಮಾಹಿತಿಯನ್ನು ಪಡೆದು ಕಾಲೇಜಿನ ಹೊರ ಆವರಣದಲ್ಲಿ ಒಟ್ಟು 31 ವ್ಯಾಪಾರ ಮಳಿಗೆಗಳನ್ನು ಹಾಕಿದ್ದರು. ತಂಪು ಪಾನೀಯ, ತರಕಾರಿ, ಚಾಟ್ಸ್ , ಸಿಪ್ ಜ್ಯೂಸ್ , ಪೊಟೇಟೋ ಟ್ವಿಸ್ಟರ್, ಚರುಮುರಿ, ಸೋಡಾ ಶರಬತ್ತು, ಪಾನಿಪೂರಿ , ಚಾಟ್ಸ್, ಹೋಮ್ಲಿ ಬೈಟ್ಸ್, ಇತ್ಯಾದಿ ನಾಮ ಫಲಕಗಳ ಮಳಿಗೆಗಳು ಗಮನ ಸೆಳೆದವು.

4000 ಕ್ಕೂ ಅಧಿಕ ಜನ ವ್ಯವಹಾರ ಮೇಳದಲ್ಲಿ ಭಾಗಿ : ವ್ಯವಹಾರ ಮೇಳದಲ್ಲಿ ವ್ಯಾಪಾರದ ಸಂಪೂರ್ಣ ಜವಾಬ್ದಾರಿಯನ್ನು ವಿದ್ಯಾರ್ಥಿಗಳೇ ವಹಿಸಿಕೊಂಡಿದ್ದರು. ಮೇಳದಲ್ಲಿ ಎಸ್.ಡಿ.ಎಂ ಸಂಸ್ಥೆಯ ವಿವಿಧ ಕಾಲೇಜು ಹಾಗು ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು ಹಾಗು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಒಟ್ಟಾರೆಯಾಗಿ 4000 ಕ್ಕೂ ಅಧಿಕ ಜನರು ವ್ಯವಹಾರ ಮೇಳದಲ್ಲಿ ಪಾಲುದಾರರಾದರು.

Related posts

ಕಬಡ್ಡಿ ಪಂದ್ಯಾಟ: ತೋಟತ್ತಾಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪೃಥ್ವಿನಿ ಶೆಟ್ಟಿಗೆ ಆಲ್ ರೌಂಡರ್ ಪ್ರಶಸ್ತಿ

Suddi Udaya

ಸೇವಾಭಾರತಿಯಿಂದ ಈ ವರ್ಷದ “ಸೇವಾ ಶ್ರೇಷ್ಠ -2024” ಪುರಸ್ಕಾರ:

Suddi Udaya

ಅ.10: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ: ವಿವಿಧ ಆಟೋಟ ಸ್ಪರ್ಧೆಗಳು ಮತ್ತು 20 ಬಗೆಯ ವಿವಿಧ ತಿಂಡಿ ತಿನಸುಗಳು

Suddi Udaya

ಜ.29-ಫೆ.2 : ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ

Suddi Udaya

ಇಳಂತಿಲ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಪುಂಜಾಲಕಟ್ಟೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ ಆಯ್ಕೆ

Suddi Udaya
error: Content is protected !!