November 23, 2026
Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಡಾ. ಜಯಕುಮಾರ್ ಶೆಟ್ಟಿಗೆ ರೋಟರಿಯ ಪ್ರತಿಷ್ಠಿತ ಪ್ರಶಸ್ತಿ

ಬೆಳ್ತಂಗಡಿ: ರೋಟರಿ ಇಂಟರ್‌ನ್ಯಾಷನಲ್‌ನ ಐದು ಪ್ರಮುಖ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿದ ಸಮಗ್ರ ಸೇವೆ ಮತ್ತು ಬದ್ಧತೆಯನ್ನು ಗುರುತಿಸಿ ನೀಡುವ ಪ್ರತಿಷ್ಠಿತ ‘ಫೈವ್ ಅವೆನ್ಯೂಸ್ ಆಫ್ ಸರ್ವೀಸ್ ಅವಾರ್ಡ್’ ಯನ್ನು ಬೆಳ್ತಂಗಡಿ ರೋಟರಿ ಕ್ಲಬ್ಬಿನ ಡಾ. ಎ. ಜಯಕುಮಾರ್ ಶೆಟ್ಟಿ ಅವರಿಗೆ ಮಡಿಕೇರಿಯಲ್ಲಿ ಇತ್ತೀಚೆಗೆ ನಡೆದ ರೋಟರಿ ಫೌಂಡೇಶನ್ (TRF) ವಿಚಾರ ಸಂಕಿರಣದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ರೋಟರಿ ಇಂಟರ್‌ನ್ಯಾಷನಲ್‌ನ 2027–29ನೇ ಸಾಲಿನ ನಿರ್ದೇಶಕರಾಗಿ (RIDE) ಆಯ್ಕೆಯಾಗಿರುವ, ರೋಟರಿ ಜಿಲ್ಲೆ 3070ರ ಪಿಡಿಜಿ ಗುರ್ಜೀತ್ ಸಿಂಗ್ ಸೆಖೋನ್ ಅವರು ಪ್ರಶಸ್ತಿಯ ಪಿನ್ ಪ್ರದಾನ ಮಾಡಿದರು.

ರೋಟರಿ ಜಿಲ್ಲೆ 3170ರ ಕೋಲ್ಹಾಪುರದ ಮಾಜಿ ಜಿಲ್ಲಾ ಗವರ್ನರ್ (PDG) ಸಂಗ್ರಾಮ್ ವಿಷ್ಣು ಪಾಟೀಲ್ ಅವರು ಕ್ರಿಸ್ಟಲ್ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಸಮಾರಂಭದ ವೇದಿಕೆಯಲ್ಲಿ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಹಾಗೂ ನಿಕಟಪೂರ್ವ ಜಿಲ್ಲಾ ಗವರ್ನರ್ (IPDG) ರೊಟೇರಿಯನ್ ಪಿ.ಕೆ. ರಾಮಕೃಷ್ಣ ಉಪಸ್ಥಿತರಿದ್ದರು.ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ. ಜಯಕುಮಾರ್ ಶೆಟ್ಟಿ ಅವರು 2023ರಲ್ಲಿ ನಿವೃತ್ತರಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಸದಸ್ಯರಾಗಿರುವ ಅವರು, ಕ್ಲಬ್ಬಿನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ವಿವಿಧ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಶೈಕ್ಷಣಿಕ, ಸಂಶೋಧನಾ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿರುವ ಅವರು, ರೋಟರಿ ಜಿಲ್ಲೆ 3181ರಲ್ಲಿ 2025-26ನೇ ಸಾಲಿನಲ್ಲಿ ಸಹಾಯಕ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ 2026-27ನೇ ಸಾಲಿನಲ್ಲಿ ಜಿಲ್ಲಾ ಇಂಟರ್ಯಾಕ್ಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ವಿಶೇಷವಾಗಿ ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಇಂಟರ್ಯಾಕ್ಟ್ ಚಟುವಟಿಕೆಗಳನ್ನು ಬಲಪಡಿಸಲು ಹಲವು ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಸೇವಾ ಕಾರ್ಯಗಳ ಮೂಲಕ ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಅವರ ಪ್ರಮುಖ ಆಶಯವಾಗಿದೆ.

ರೋಟರಿಯ ಕ್ಲಬ್ ಸೇವೆ, ವೃತ್ತಿಪರ ಸೇವೆ, ಸಮುದಾಯ ಸೇವೆ, ಅಂತರರಾಷ್ಟ್ರೀಯ ಸೇವೆ ಹಾಗೂ ಯುವಜನ ಸೇವೆ ಎಂಬ ಐದು ಪ್ರಮುಖ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿದ ಕೊಡುಗೆಗೆ ಈ ಪ್ರಶಸ್ತಿ ಸಂದಿದೆ.ಪ್ರಶಸ್ತಿ ಸ್ವೀಕರಿಸಿದ ಡಾ. ಜಯಕುಮಾರ್ ಶೆಟ್ಟಿ ಅವರು, ಈ ಗೌರವವನ್ನು ತಮ್ಮೊಂದಿಗೆ ಸೇವಾ ಚಟುವಟಿಕೆಗಳಲ್ಲಿ ಕೈಜೋಡಿಸಿದ ರೋಟರಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಹಾಗೂ ಸಹಯೋಗಿಗಳಿಗೆ ಸಮರ್ಪಿಸುವುದಾಗಿ ತಿಳಿಸಿದರು. ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿ ಗೌರವಿಸಿದ ಜಿಲ್ಲಾ ಗವರ್ನರ್ ಹಾಗೂ ನಿಕಟಪೂರ್ವ ಜಿಲ್ಲಾ ಗವರ್ನರ್ ಸೇರಿದಂತೆ ಎಲ್ಲ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿರುವ ನಾಗಬನದಲ್ಲಿ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ :ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ಬೆಂಕಿ, ಹೊತ್ತಿ ಉರಿದ ಆಟೋ ಮತ್ತು ಸಾಮಾಗ್ರಿ, ಲಕ್ಷಾಂತರ ನಷ್ಟ

Suddi Udaya

ಉಜಿರೆ: ರಾಷ್ಟ್ರೀಯ ಹೆದ್ದಾರಿಯ ರೂಪುರೇಶೆಗಳ ಬಗ್ಗೆ ಮಾಹಿತಿ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಖಾಸಗಿ ಬಸ್‌; ಡ್ರೈವರ್‌ ಸ್ಥಳದಲ್ಲೇ ಸಾವು

Suddi Udaya

ಧರ್ಮಸ್ಥಳ: ನಾರ್ಯ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಆಟಿದ ಗಮ್ಮತ್

Suddi Udaya

ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ: ಕರಾಟೆ ಶಿಕ್ಷಕ ಶಿಹಾನ್ ಅಬ್ದುಲ್ ರಹ್ಮಾನ್ ಅವರ ಶಿಷ್ಯಂದಿಯರಿಗೆ ಹಲವು ಪದಕ

Suddi Udaya
error: Content is protected !!