24.5 C
ಪುತ್ತೂರು, ಬೆಳ್ತಂಗಡಿ
September 10, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಖಾಸಗಿ ಬಸ್‌; ಡ್ರೈವರ್‌ ಸ್ಥಳದಲ್ಲೇ ಸಾವು

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಘಟನೆ ಅ.11 ರಂದು ತಡರಾತ್ರಿ 11.30ರ ಸಮಯ ದುರ್ಘಟನೆ ಸಂಭವಿಸಿದೆ.


ಬಸ್‌ನ ಡ್ರೈವರ್‌ ಬಸ್‌ನ ಚಕ್ರದಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಮೈಸೂರು ಮೂಲದ ಭರತ್(28) ಎಂದು ಗುರುತಿಸಲಾಗಿದೆ.


ಬೆಂಗಳೂರಿನಿಂದ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿ, ಬಳಿಕ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಪಿಕ್‌-ಅಪ್‌ ಮಾಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬಸ್ ನಲ್ಲಿ ಚಾಲಕ ಹಾಗೂ ಸಹ ಚಾಲಕರಿಬ್ಬರೂ ಮಾತ್ರ ಪ್ರಯಾಣಿಸುತ್ತಿದ್ದು ಸಹ ಚಾಲಕ ಅವಿನಾಶ್ ಎಂಬುವವರು ಅಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಹೆಚ್ಚಿನ ಸಾವು ನೋವು ಸಂಭವಿಸಲಿಲ್ಲ.
ಮೃತ ದೇಹವನ್ನು ಪುತ್ತೂರಿನ ಸರಕಾರಿ ಶವಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

ಗಡಾಯಿಕಲ್ಲು ಚಾರಣ: ತಾತ್ಕಾಲಿಕ ನಿಷೇಧ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಯಕ್ರಮ

Suddi Udaya

ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಬಳಂಜ:ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ದೀಪಾವಳಿ ಸಂಭ್ರಮ

Suddi Udaya

ಜಿಲ್ಲಾಧಿಕಾರಿಗಳ ಆದೇಶ: ತುರ್ತು ಪಾಲನೆ ನೋಟೀಸು ಜಾರಿ

Suddi Udaya

ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya
error: Content is protected !!