ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು ಬೆಂಗಳೂರು ವತಿಯಿಂದ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಜಿಲ್ಲಾ ಸಮಿತಿಯ ಸದಸ್ಯರಾದ ಕುಶಾಲಪ್ಪ ಗೌಡ ಗೇರುಕಟ್ಟೆ ಇವರಿಗೆ ಕರುನಾಡ ಕೌಸ್ತುಭ ಪ್ರಶಸ್ತಿ ಪ್ರದಾನ ಸಮಾರಂಭವು ನ.೨೨ರಂದು ವೀರಶೈವ ಕಲ್ಯಾಣ ಮಂಟಪ ಪಬ್ಲಿಕ್ ಗಾರ್ಡನ್ ಕಲಬುರಗಿಯಲ್ಲಿ ನಡೆಯಿತು.

ಇವರು ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್‌ನಲ್ಲಿ ೨೬ ವರ್ಷಗಳಿಂದ ತೊಡಗಿಸಿಕೊಂಡು ಜಿಲ್ಲಾ ಪದಾಧಿಕಾರಿಯಾಗಿ ತಾಲೂಕು ಅಧ್ಯಕ್ಷರಾಗಿ ತಮ್ಮ ಅವಧಿಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ಆಸಕ್ತರಿಗೆ ಧನಸಹಾಯ ಮಾಡಿರುವುದರ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಂಡ ಇವರು ಪ್ರಸ್ತುತ ಬೆಳ್ತಂಗಡಿ ಟೈಲರ್ ಸಹಕಾರ ಸಂಘ ಬೆಳ್ತಂಗಡಿ ಉಪಾಧ್ಯಕ್ಷರಾಗಿ ಕಳಿಯ ಕ್ರಿಷಿ ಪತ್ತಿನ ಸಹಕಾರಿ ಸಂಘ ಗೇರುಕಟ್ಟೆ ಇದರ ನಿರ್ದೇಶಕರಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಕ್ತೇಶ್ವರಿ ಪದವು ಇದರ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷರಾಗಿ ಹಲವು ಸಂಘಟನೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.













