November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ,ಬೆಳ್ತಂಗಡಿ ಘಟಕದ ಸಹಯೋಗದಲ್ಲಿ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಕ್ರಮ

ಧರ್ಮಸ್ಥಳ : ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ವತಿಯಿಂದ ಬೆಳ್ತಂಗಡಿ ಘಟಕದ ಸಹಯೋಗದಲ್ಲಿ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಕ್ರಮ ನ. 24 ರಂದು ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಅಟಲ್‌ಜಿ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯರು ನಾರಾಯಣ ಭಟ್ ವಹಿಸಿ ಪ್ರಸ್ತಾವನೆಯೊಂದಿಗೆ ಮಾತನಾಡಿ ಹಿರಿಯರು ಸಮಾಜದಲ್ಲಿ ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾಡುವ ದೃಷ್ಟಿಯಿಂದ ಪ್ರಾರಂಭ ಮಾಡಿದ ಸಂಘಟನೆ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ಕಾರ್ಯಕ್ರಮವನ್ನು ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ. ಉದ್ಘಾಟಿಸಿ ಮಾತನಾಡಿ ಹಿರಿಯರ ಸಮಾಜ ಮುಖಿ ಕಾರ್ಯಕ್ರಮ ಇದಾಗಿದ್ದು ನಮ್ಮ ಸಹಕಾರ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಧರ್ಮಸ್ಥಳ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಾರ್ಯಕ್ರಮದ ಪ್ರಯೋಜಕ ಬಿ. ಭುಜಬಲಿ ಶುಭ ಹಾರೈಸಿದರು. ಸಹಕಾರ ಸಂಘದ ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸುಂದರ ಗೌಡ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಕಾರ್ಯದರ್ಶಿ ಗಣೇಶ ಭಟ್ ಉಪಸ್ಥಿತರಿದ್ದರು.ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನಾದ ಉಪಾಧ್ಯಕ್ಷ ಎಂ. ಜಯರಾಮ ಭಂಡಾರಿ ಸ್ವಾಗತಿಸಿ, ಸಂಚಾಲಕ ವಸಂತ ಸುವರ್ಣ ಲಾಯಿಲ ವಂದಿಸಿದರು.ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

ನಂತರ ನಶಾ ಮುಕ್ತ ಸಮಾಜ ನಿರ್ಮಾಣ ವಿಷಯದ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಅಧಿಕಾರಿ ಮತ್ತು ಶ್ರೀ ಹರಿ ಧರ್ಮಸ್ಥಳ, ಮತ್ತು ಕೌಟುಂಬಿಕ ಸಮಸ್ಯೆಗಳ ಪರಿಹಾರ ವಿಷಯದ ಕುರಿತು ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಂ. ವಿಶ್ವೇಶ್ವರ ಶೆಟ್ಟಿ ತರಬೇತಿ ನೀಡಿದರು.ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಪ್ರಯೋಜಕ ಬಿ. ಭುಜಬಲಿ ಧರ್ಮಸ್ಥಳ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನಾ ಅಧ್ಯಕ್ಷ ಕೆಯ್ಯರು ನಾರಾಯಣ ಭಟ್, ಉಪಾಧ್ಯಕ್ಷ ಎಂ. ಜಯರಾಮ ಭಂಡಾರಿ, ತರಬೇತುದಾರರಾದ ಎಂ. ವಿಶ್ವೇಶ್ವರ ಶೆಟ್ಟಿ, ಶ್ರೀಹರಿ ಧರ್ಮಸ್ಥಳ ಇವರನ್ನು ಗೌರವಿಸಲಾಯಿತು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.-

Related posts

ವೇಣೂರು: ಅಕ್ರಮವಾಗಿ ಸಾಗಿಸುತ್ತಿದ್ದ 125 ಕೆ‌ಜಿ ರಕ್ತ ಚಂದನ: ವಾಹನ ಸಮೇತ ರಕ್ತ ಚಂದನ ವಶಕ್ಕೆ ಪಡೆದ ವೇಣೂರು ಅರಣ್ಯಧಿಕಾರಿಗಳು

Suddi Udaya

ಉಜಿರೆ ಬಾರ್ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ

Suddi Udaya

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ಗಡಿಪಾರು ವಿಷಯದಲ್ಲಿ ಷಡ್ಯಂತ್ರ ಎಂದು ಸುಳ್ಳು ಸುದ್ದಿಯನ್ನು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿದ ಜಯಂತ್ ಟಿ ವಿರುದ್ಧ ಪ್ರಕರಣ ದಾಖಲು

Suddi Udaya

ಪಡ್ಯಾರಬೆಟ್ಟು ಕ್ಷೇತ್ರಕ್ಕೆ ಬೇಟಿ ನೀಡಿದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ

Suddi Udaya

ಕೊಕ್ಕಡ: ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಸೇವಾ ಕೌಂಟರ್ ಉದ್ಘಾಟನೆ

Suddi Udaya
error: Content is protected !!