November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಜ್ಞಾನಚಂದನ ಮತ್ತು ಜ್ಞಾನನಂದನ ಪುಸ್ತಕಗಳ ಆಧಾರಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಹಲವಾರು ವರ್ಷಗಳಿಂದ ರಾಜ್ಯಾದ್ಯಂತ ಶಾಲೆಗಳಿಗೆ ಮೌಲ್ಯಾಧಾರಿತ ಪುಸ್ತಕಗಳನ್ನು ವಿತರಿಸಿ, ಅವುಗಳ ಆಧಾರದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಜ್ಞಾನ ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಉತ್ತಮ ಓದುಗರಾಗುವುದರ ಜೊತೆಗೆ ಭವಿಷ್ಯದಲ್ಲಿ ಉತ್ತಮ ಸಾಧಕರಾಗಬೇಕು ಎಂದು ಪತ್ರಕರ್ತ ಮನೋಹರ್ ಬಳಂಜ ಹೇಳಿದರು.

ಅವರು ನ 20ರಂದು ಗುರುವಾಯನಕೆರೆಯ ನಮ್ಮೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ.), ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಜ್ಞಾನಚಂದನ ಮತ್ತು ಜ್ಞಾನನಂದನ ಪುಸ್ತಕಗಳ ಆಧಾರಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಮಾತನಾಡಿ, ಇಂದು ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಲವಾರು ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಂಕ ಗಳಿಕೆಯ ಜೊತೆಗೆ ಜೀವನವನ್ನು ರೂಪಿಸುವ ಶಿಕ್ಷಣ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳುವುದಕ್ಕೂ ಗಮನಹರಿಸಬೇಕು ಎಂದರು.ಎಸ್‌ಡಿಎಂ ಕಾಲೇಜಿನ ನಿವೃತ್ತ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಹಾಗೂ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಶಶಿಕಾಂತ್ ಐ. ಶುಭ ಹಾರೈಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಪದ್ಮಲತಾ ಉಪಸ್ಥಿತರಿದ್ದರು.ಶಿಕ್ಷಕ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧಾ ವಿಜೇತರು:ಪ್ರೌಢಶಾಲಾ ವಿಭಾಗ-ಭಾಷಣ ಸ್ಪರ್ಧೆ:ಪ್ರಥಮ: ಧನುಶ್ರೀ ಎಸ್. ಕುಲಾಲ್ – ಸರ್ಕಾರಿ ಪ್ರೌಢಶಾಲೆ, ವೇಣೂರು,ದ್ವಿತೀಯ: ಅಮಿತ್ – ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ,ತೃತೀಯ: ಶ್ರೀಪ್ರದಾ ಕೆ.ಸರ್ಕಾರಿ ಪ್ರೌಢಶಾಲೆ, ಕೊಕ್ರಾಡಿ.ಪ್ರಬಂಧ ಸ್ಪರ್ಧೆ:ಪ್ರಥಮ: ಸೃಜನ್ಯ – ಎಸ್‌ಡಿಎಂ ಹೈಸ್ಕೂಲ್, ಬೆಳಾಲು.ದ್ವಿತೀಯ: ಲಿಶಾ ಪಾಯ್ಸ್ – ಸರ್ಕಾರಿ ಪ್ರೌಢಶಾಲೆ, ಗುರುವಾಯನಕೆರೆ.ತೃತೀಯ: ಲಿಖಿತಾ – ಸರ್ಕಾರಿ ಪ್ರೌಢಶಾಲೆ, ಗೇರುಕಟ್ಟೆ.ಕಂಠಪಾಠ ಸ್ಪರ್ಧೆ:ಪ್ರಥಮ: ಸಾನಿಧ್ಯ ಕೆ. – ಎಸ್‌ಡಿಎಂ (ಸಿಬಿಎಸ್‌ಇ), ಉಜಿರೆ.ದ್ವಿತೀಯ: ರಿಷಿಕಾ – ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ, ಉರುವಾಲು.ತೃತೀಯ: ಪ್ರಣಮ್ಯ ಎಂ.ಎಸ್. – ಎಕ್ಸೆಲ್ ಟೆಕ್ನೋ ಸ್ಕೂಲ್, ವೇಣೂರು.ಚಿತ್ರಕಲಾ ಸ್ಪರ್ಧೆ:ಪ್ರಥಮ: ಲತೇಶ್ – ಸರ್ಕಾರಿ ಪ್ರೌಢಶಾಲೆ, ಗುರುವಾಯನಕೆರೆ.ದ್ವಿತೀಯ: ಯಶಿಕಾ – ಎಸ್‌ಡಿಎಂ, ಬೆಳ್ತಂಗಡಿ.ತೃತೀಯ: ಅನ್ವಿತ್ – ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ.

Related posts

ಬಳಂಜ: ನಾಲ್ಕೂರು ಕೃಷಿಕ ಕರಿಯ ಪೂಜಾರಿ ಅನಾರೋಗ್ಯದಿಂದ ನಿಧನ

Suddi Udaya

ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭ ಧನ್ಯೋಸ್ಮಿ

Suddi Udaya

ಪುಂಜಾಲಕಟ್ಟೆ : ಭರತನಾಟ್ಯ ತರಗತಿ ಉದ್ಘಾಟನೆ

Suddi Udaya

ಉಜಿರೆ: ಅರಳಿ ಮಿತ್ರ ಯುವಕ ಮಂಡಲದ ಅಧ್ಯಕ್ಷರಾಗಿ ಅಶೋಕ್, ಕಾರ್ಯದರ್ಶಿಯಾಗಿ ಅನಿಲ್‌ ಆಯ್ಕೆ

Suddi Udaya

ಬೆಳ್ತಂಗಡಿ ಟೈಲರ್ ಅಸೋಸಿಯೇಷನ್ ಹಾಗೂ ಸಂದೀಪ್ ಕ್ರಿಯೇಶನ್ ರವರ ‘ಭರವಸೆಯ ಸೂಜಿದಾರ’ ಕಿರುಚಿತ್ರಕ್ಕೆ ಮುಹೂರ್ತ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಉದ್ಯಮಿ ಸತೀಶ್ ಪೂಜಾರಿ ಬೆಳಪು ಮತ್ತು ಪ್ರಭಾಕರ ಸುವರ್ಣ ಕರ್ನಿರೆ ಭೇಟಿ

Suddi Udaya
error: Content is protected !!