ಧರ್ಮಸ್ಥಳ: ಮುನ್ನೂರು ವರ್ಷಗಳ ಐತಿಹ್ಯ ಹೊಂದಿರುವ ದೊಂಡೋಲೆಯ ಶ್ರೀ ಪರಶುರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ವೇಳೆ, ದೊಂಡೋಲೆ ಬ್ರಹ್ಮಕಲಶೋತ್ಸವದ ಅಧ್ಯಕ್ಷ ವೇ| ಮೂ| ಸತ್ಯಪ್ರಿಯ ಕಲ್ಲೂರಾಯ,ಸಂಚಾಲಕರಾದ ಕೆ.ಪುರಂದರ ರಾವ್, ಕಾರ್ಯಾಧ್ಯಕ್ಷರಾದ ಕೆ. ಸೂರ್ಯನಾರಾಯಣ ರಾವ್ ದೊಂಡೋಲೆ, ಗೌರವ ಸಲಹೆಗಾರ ಶ್ರೀನಿವಾಸ ರಾವ್ ಧರ್ಮಸ್ಥಳ, ವೇ|ಮೂ| ಕೃಷ್ಣ ರಾಜ್ ಭಟ್ ಪೊಳಲಿ,ಪ್ರಧಾನ ಕಾರ್ಯದರ್ಶಿ ದಾಮೋದರ ದೊಂಡೋಲೆ, ಕಾರ್ಯದರ್ಶಿಗಳಾದ ಜಯಪ್ರಕಾಶ್ ಮೇಸ್ತ್ರಿ, ರಘು ಪೂಜಾರಿ, ಪ್ರದೀಪ ರೈ,ಮಮತ ಮಾಧವ, ಗೀತಾ ಅಚ್ಚುತ ಅಚಾರ್ಯ, ರಮ್ಯ ಸತೀಶ್ ರಾವ್, ಗಾಯತ್ರಿ ಸೂರ್ಯನಾರಾಯಣ ರಾವ್, ಮನೋಹರ್, ಸುಶೀಲಾ ಅಡಿಗ, ಮಮತಾ ಮೋಹನ್, ಪೂರ್ಣಿಮಾ, ಭಾರತೀ ಗಣೇಶ್, ವಿಜಯ ರೈ, ಶೈಲಜಾ, ಸೀತಾ ದಿವಾಕರ್,ಜಯಂತಿ,ಅನಿತಾ ಸಫಲ್ಯ,ಯಶೋದಾ ಸಫಲ್ಯ, ಜ್ಯೋತಿ ಮನೋಹರ್, ಮಮತಾ ಕೃಷ್ಣ, ಮಂಜುಳಾ ಜಯಣ್ಣ, ರಘು ಸಫಲ್ಯ, ಸುಶೀಲ, ಬೇಬಿಜಯರಾಮ್,ಪ್ರೇಮ,ಸಾತ್ವಿಕ್ ರಾಮ್ ರಾವ್, ದಿಯಾನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ದಾರ ಸಮಿತಿ, ಕಾರ್ಯಕಾರಿ ಸಮಿತಿ, ಅಡಳಿತ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಿಂದ ಕೇವಲ 2.5ಕಿಲೋಮೀಟರ್ ದೂರದಲ್ಲಿರುವ ದೊಂಡೋಲೆ ಪರಶುರಾಮನ ದೇವಾಲಯದ ಬ್ರಹ್ಮಕಲಶೋತ್ಸವ ಜನವರಿ 5ರಿಂದ 10ರವರೆಗೆ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಕನ್ಯಾಡಿಯ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹರಾಜ್ ಸ್ವಾಮೀಜಿಯರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ನೆರವೇರಲಿದೆ.













