November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆದ್ರಬೆಟ್ಟು ಶ್ರೀ ವಿಘ್ನೇಶ್ವರ ಭಜನಾ ಸೇವಾ ಟ್ರಸ್ಟ್ ನಿಂದ ಭಜಕರಿಗೆ ಮೌಲ್ಯಾಧಾರಿತ ಪುಸ್ತಕ ವಿತರಣೆ

ಬೆದ್ರಬೆಟ್ಟು: ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಮಯ ಸಿಕ್ಕಿದಾಗ ಉತ್ತಮ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಓದುವಂತಹ ಹವ್ಯಾಸವನ್ನು ಬಿಟ್ಟು ಮೊಬೈಲ್ ನೋಡುವಂತಹ ಹವ್ಯಾಸವನ್ನು ರೂಡಿಸಿಕೊಳ್ಳುವತ್ತ ದಾಪುಗಾಳಿಡುತ್ತೀದ್ದಾರೆ. ನಾವು ಮಕ್ಕಳಿಗೆ ವ್ಯಕ್ತಿತ್ವ ವಿಕಾಸನ, ನೈತಿಕ ಶಿಕ್ಷಣ, ಅಥವಾ ಉತ್ತಮ ಮೌಲ್ಯಾಧಾರಿತ ಪುಸ್ತಕಗಳನ್ನು ಓದಲು ಕೊಟ್ಟರೆ ಅವರಿಗೆ ಜ್ಞಾನ ವೃದ್ಧಿಯಾಗುತ್ತದೆ. ಅದಕ್ಕಾಗಿ ನಾವು ಧರ್ಮಸ್ಥಳದ ಶಾಂತಿವನ ಟ್ರಸ್ಟಿನ ಸಹಕಾರದೊಂದಿಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ನೇತೃತ್ವದಲ್ಲಿ ಜ್ಞಾನ ದರ್ಶಿನಿ ಎನ್ನುವ ಪುಸ್ತಕವನ್ನು ಭಜಕ ಮಕ್ಕಳಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಶ್ರೀ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ತಿನ ಅಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ರವರು ಹೇಳಿದರು.

ಅವರು ಬೆದ್ರಬೆಟ್ಟು ಶ್ರೀ ವಿಘ್ನೇಶ್ವರ ಭಜನಾ ಸೇವಾ ಟ್ರಸ್ಟಿನಲ್ಲಿ ನಡೆದ ವಾರದ ಭಜನಾ ಕಾರ್ಯಕ್ರಮದ ನಂತರ ಭಜಕರಿಗೆ ಮೌಲ್ಯಾಧಾರಿತ ಪುಸ್ತಕಗಳನ್ನು ವಿತರಿಸುತ್ತ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿಯಾದ ಚಂದ್ರಶೇಖರ ಗೌಡ ಇಂದಬೆಟ್ಟು, ಕೋಶಾಧಿಕಾರಿ ಗಣೇಶ್ ಕಣ್ಣಾಜೆ, ವಲಯಾಧ್ಯಕ್ಷ ಶಶಿಧರ ಗೌಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಗೌಡ ಬೆದ್ರಬೆಟ್ಟು ಮತ್ತು ಇತರ ಪದಾಧಿಕಾರಿಗಳು ಹಾಗೂ ಭಜಕರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಭಜನಾ ಪರಿಷತ್ತಿನ ಕಾರ್ಯದರ್ಶಿ ಚಂದ್ರಶೇಖರ ಗೌಡರು ಪ್ರಾಸ್ತಾವಿಕವಾಗಿ ಮಾತನಾಡಿ , ಸ್ವಾಗತಿಸಿ ವಂದಿಸಿದರು.

Related posts

ಪೆರಾಡಿ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಐದು ದಶಕಗಳ ವಿಶ್ವಾಸ, ಬೆಳ್ತಂಗಡಿ ನಗರದ ಮೊಟ್ಟ ಮೊದಲ ಚಿನ್ನಾಭರಣ ಗೀತಾ ಜ್ಯುವೆಲ್ಲರ್ಸ್‌ ನವೀಕೃತ ಮಳಿಗೆ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಮೂಡುಕೋಡಿ: ನಡ್ತಿಕಲ್ಲು ಶ್ರೀ ರಾಮ ಮಹಿಳಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆ

Suddi Udaya

ಸುಲ್ಕೇರಿಮೊಗ್ರು: ಕೇದುಕುಲೆಂಜಿ ನಿವಾಸಿ ಅಪ್ಪಿ ನಿಧನ

Suddi Udaya

ಅಳದಂಗಡಿ: 22ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ: ಧಾರ್ಮಿಕ ಕಾರ್ಯಕ್ರಮ

Suddi Udaya
error: Content is protected !!