26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿ: 22ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ: ಧಾರ್ಮಿಕ ಕಾರ್ಯಕ್ರಮ

ಅಳದಂಗಡಿ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಳದಂಗಡಿ ಇದರ ಆಶ್ರಯದಲ್ಲಿ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಡಗಕಾರಂದೂರು, ಸಾಧನಾ ಜ್ಞಾನವಿಕಾಸ ಕೇಂದ್ರ, ಜನಜಾಗೃತಿ ಗ್ರಾಮ ಸಮಿತಿ ಬಡಗಕಾರಂದೂರು, ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿ ಬಡಗಕಾರಂದೂರು ಇವುಗಳ ಆಶ್ರಯದಲ್ಲಿ 22ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯು ಪ್ರಕಾಶ್ ಭಟ್ ಪೌರೋಹಿತ್ಯದಲ್ಲಿ ಆ.8 ರಂದು ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜನ ಜಾಗೃತಿ ವೇದಿಕೆ ಪ್ರಾದೇಶಿಕ ಕಚೇರಿ ಉಡುಪಿ ಇದರ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪುತ್ತೂರು ಧಾರ್ಮಿಕ ಉಪನ್ಯಾಸವನ್ನು ನೆರವೇರಿಸಿದರು.

ವೇದಿಕೆಯಲ್ಲಿ ಅಳದಂಗಡಿ ಶ್ರೀ ಕ್ಲಿನಿಕ್ ನ ಡಾ। ಎನ್.ಎಮ್. ತುಳುಪುಳೆ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸರಸ್ವತಿ, ಜನಜಾಗೃತಿ ವೇದಿಕೆ ತಾಲೂಕು ಸದಸ್ಯ ಸದಾನಂದ ಪೂಜಾರಿ, ಉಂಗಿಲಬೈಲು, ‘ಎ’ ಒಕ್ಕೂಟದ ಅಧ್ಯಕ್ಷ ಹರೀಶ್ ಸಾಲಿಯಾನ್, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ರೇಖಾ ರಾಜಶೇಖರ್ ಶೆಟ್ಟಿ, ಅಳದಂಗಡಿ ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಯಶೋಧರ ಸುವರ್ಣ, ಅಳದಂಗಡಿ ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಪ್ರಭಾಕರ ಪೂಜಾರಿ ಕೊಡಂಗೆ, ವಲಯ ಮೇಲ್ವಿಚಾರಕಿ ಶ್ರೀಮತಿ ಯಶೋದ ಎಂ., ‘ಎ’ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಶುಭ ಹರೀಶ್ ರೈ ಉಪಸ್ಥಿತರಿದ್ದರು.

‘ಎ’ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಆಚಾರ್ಯ ಅಳದಂಗಡಿ ಸ್ವಾಗತಿಸಿದರು. ಮನೋಹರ ಪ್ರಸಾದ್ ನಿರೂಪಿಸಿದರು. ‘ಬಿ’ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ವಂದಿಸಿದರು.

Related posts

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

Suddi Udaya

ಉಜಿರೆ ಮಲ ತ್ಯಾಜ್ಯ ಘಟಕದ ಬಗ್ಗೆ ಕೇಂದ್ರ ಸಚಿವರ ಸಂವಾದ

Suddi Udaya

ಎಲ್‌.ಸಿ.ಆರ್‌. ಇಂಡಿಯನ್ ಡಿಗ್ರಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

Suddi Udaya

ಬೆಳ್ತಂಗಡಿ: ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ನಾಯಕರ ಆಯ್ಕೆ

Suddi Udaya

ಗೇರುಕಟ್ಟೆಯಲ್ಲಿ ಅಪೂರ್ವವಾಗಿ ನಡೆದ ಮಾತೃ ವಂದನಾ ಕಾರ್ಯಕ್ರಮ

Suddi Udaya

ಮುಡಾ ಹಗರಣದಲ್ಲಿ ಹೈಕೋರ್ಟ್‌ ತೀರ್ಪು ಬಿಜೆಪಿ ಹೋರಾಟಕ್ಕೆ ಸಂದ ಜಯ: ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಶಾಸಕ ಹರೀಶ್ ಪೂಂಜ

Suddi Udaya
error: Content is protected !!