November 24, 2026
Uncategorized

ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ಅಳದಂಗಡಿ ಉದ್ಘಾಟನೆ ಹಾಗೂ ‘ಸಿಂಧೂರ’ ನೂತನ ಕಥಾ ಪ್ರಸಂಗ ಬಿಡುಗಡೆ

ಅಳದಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ಅಳದಂಗಡಿ ಇದರ ಉದ್ಘಾಟನಾ ಸಮಾರಂಭ ಹಾಗೂ ನಿತಿನ್ ಕುಮಾರ್ ತೆಂಕಕಾರಂದೂರು ವಿರಚಿತ ಶ್ರೀ ಗೆಜ್ಜೆಗಿರಿ ಮೇಳದ ಈ ವರ್ಷದ ನೂತನ ಕಥಾ ಪ್ರಸಂಗ ‘ಸಿಂಧೂರ’ ಬಿಡುಗಡೆ ಕಾರ್ಯಕ್ರಮವು ನ.23ರಂದು ರಾತ್ರಿ ಅಳದಂಗಡಿ ಗ್ರಾಮ ಪಂಚಾಯತ್ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಅಳದಂಗಡಿಯ ಅರಮನೆಯ ಶಿವಪ್ರಸಾದ್ ಅಜಿಲರು ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ ಅಳದಂಗಡಿಯನ್ನು ಉದ್ಘಾಟಿಸಿ, ಸಮಿತಿಯ ಸಾಂಸ್ಕೃತಿಕ ಕಾರ್ಯಗಳಿಗೆ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆಯವರು ನಿತಿನ್ ಕುಮಾರ್ ತೆಂಕಕಾರಂದೂರು ವಿರಚಿತ ಈ ವರ್ಷದ ನೂತನ ಕಥಾ ಪ್ರಸಂಗ ‘ಸಿಂಧೂರ’*ವನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿರುವ, ಉದ್ಯಮಿಗಳಾದ ಪ್ರಸನ್ನ ಹೆಗ್ಡೆ ಕರಂಬಾರು ಗುತ್ತು, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಮ್, ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷರಾದ ಜಯ ವಿಕ್ರಂ ಕಲ್ಲಾಪು, ಪ್ರಗತಿಪರ ಕೃಷಿಕರಾದ ಗಂಗಾಧರ ಮಿತ್ತಮಾರು, ಶ್ರೀ ಗೆಜ್ಜೆಗಿರಿ ಮೇಳದ ಆಂತರಿಕ ಲೆಕ್ಕ ಪರಿಶೋಧಕರಾದ ಜಯರಾಮ ಪೂಜಾರಿ ಬೆಳುವಾಯಿ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಸಮಿತಿ ಅಳದಂಗಡಿ ಗೌರವಾಧ್ಯಕ್ಷರಾದ ಸುಭಾಶ್ಚಂದ್ರ ರೈ ಪಡ್ಯೋಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟ ಸಮಿತಿಇದರ ಅಧ್ಯಕ್ಷರೂ ಅಳದಂಗಡಿ ನಮನ ಸಭಾಭವನದ ಮಾಲಕರೂ ಆಗಿರುವ ಸತೀಶ್ ಪೂಜಾರಿ ಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಳದಂಗಡಿ ಪರಿಸರದಲ್ಲಿ ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಆಮಂತ್ರಣ ಸೇವಾ ಪ್ರತಿಷ್ಠಾನ (ರಿ.) ಅಳದಂಗಡಿ, ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಅಳದಂಗಡಿ, ಶ್ರೀ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಅಳದಂಗಡಿ, ನಮ್ಮ ಮಾತೆರ್ಲ ಒಂಜೇ ಕಲಾತಂಡ ಅಳದಂಗಡಿ ಹಾಗೂ ಹಿಂದೂ ಯುವಶಕ್ತಿ ಸಮಾಜ ಸೇವಾ ಸಂಘಟನೆ ಅಳದಂಗಡಿ ಸಂಘಟನೆಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ‘ಸಿಂಧೂರ’ ಕಥಾ ಪ್ರಸಂಗದ ರಚನೆಕಾರ ಹಾಗೂ ಶ್ರೀ ಗೆಜ್ಜೆಗಿರಿ ಮೇಳದ ಮ್ಯಾನೇಜರ್ ನಿತಿನ್ ತೆಂಕಕಾರಂದೂರು ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಕುಮಾರ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಗೆಜ್ಜೆಗಿರಿ ಮೇಳದ ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಯಶಸ್ಸಿಗೆ ಪ್ರಧಾನ ಸಂಚಾಲಕರಾದ ವಿಶ್ವನಾಥ ಬಂಗೇರ, ವಿಜಯ್ ಕುಮಾರ್ ಜೈನ್, ಚಂದ್ರಶೇಖರ ಅಳದಂಗಡಿ, ಉಮೇಶ್ ಸುವರ್ಣ ಶಿರ್ಲಾಲು ಹಾಗೂ ಶುಭಕರ ಪೂಜಾರಿ ಕುದ್ಯಾಡಿ ಸಹಕರಿಸಿದರು. ನಮನ ಸಭಾಭವನದಿಂದ ಕುಣಿತ ಭಜನೆಯ ಮೆರವಣಿಗೆಯ ಮೂಲಕ ಮೇಳದ ದೇವರನ್ನು ಅಳದಂಗಡಿ ಪಂಚಾಯತ್ ವಠಾರಕ್ಕೆ ಕರೆತರಲಾಯಿತು.

ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದಿಂದ ಕೂಡಿದ ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿ ಸಾಕ್ಷಿಯಾದರು. ಶ್ರೀ ಗೆಜ್ಜೆಗಿರಿ ಮೇಳದ ಕಲಾವಿದರು ‘ಸಿಂಧೂರ’ ಯಕ್ಷಗಾನ ಪ್ರಸಂಗವನ್ನು ಅದ್ಭುತವಾಗಿ ಪ್ರದರ್ಶಿಸಿ, ಅಳದಂಗಡಿ ಪರಿಸರದ ಪ್ರೇಕ್ಷಕರ ಮನಸೂರೆಗೊಂಡರು. ಕಲಾವಿದರ ಮನೋಜ್ಞ ಅಭಿನಯ, ಉತ್ತಮ ಪ್ರದರ್ಶನ ಹಾಗೂ ಪ್ರಸಂಗದ ನಿರೂಪಣೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಯಕ್ಷಗಾನ ಬಯಲಾಟದ ಬಳಿಕ ಉಪಹಾರದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.ಅಳದಂಗಡಿಯ ಸಾಂಸ್ಕೃತಿಕ ನೆಲದಲ್ಲಿ ಯಕ್ಷಗಾನದ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದ ಈ ಕಾರ್ಯಕ್ರಮ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದ ಪಂಚಮ ಯಾನದ ಮತ್ತೊಂದು ಸ್ಮರಣೀಯ ಮೈಲಿಗಲ್ಲಾಗಿ ಮೂಡಿಬಂದಿತು.

Related posts

ನಾಲ್ಕೂರು ಅಂಗನವಾಡಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಆಯಾನ್ಶ್ ಸುಧಾಮ

Suddi Udaya

ರೀಲ್ಸ್‌ ತಾರೆ ಇದೀಗ ಸೀರಿಯಲ್ ಬೆಡಗಿ: ನಾರಾವಿಯ ಕೃಷ್ಣಪ್ರಿಯಾ ಭಟ್ ನಂದಗೋಕುಲದಲ್ಲಿ ರಕ್ಷಾ

Suddi Udaya

ನ.8: ಬಳಂಜದಲ್ಲಿ ಕೆ. ವಸಂತ ಸಾಲಿಯಾನ್ – ಹೆಚ್. ಧರ್ಣಪ್ಪ ಪೂಜಾರಿಯವರಿಗೆ ಹುಟ್ಟೂರ ಪೌರ ಸನ್ಮಾನ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ:ಬಳಂಜ ಶಾಲೆಯ ಅಮೃತ ಮಹೋತ್ಸವ ಸಮಾರೋಪ, ಅಮೃತ ಸಿಂಧು ಬಿಡುಗಡೆ-ಅದ್ದೂರಿ ಮೆರವಣಿಗೆ, ಸಾಂಸ್ಕೃತಿಕ ವೈಭವ

Suddi Udaya

ಉಜಿರೆ ಅರಿಪ್ಪಾಡಿ ಮಠ ಬಾಲಕೃಷ್ಣ ಅರಿಪ್ಪಾಡಿತ್ತಾಯ ನಿಧನ

Suddi Udaya

ಬೆಳ್ತಂಗಡಿ ಡಿ.ಕೆ.ಆರ್. ಡಿ.ಎಸ್ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀರಾಮ ಪ್ರೌಢ ಶಾಲೆಯ ಬಾಲಕ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!