November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಡಿ. 19:ವೇಣೂರು ಸೂರ್ಯ-ಚಂದ್ರ ಜೋಡುಕರೆ ಕಂಬಳ: ತುಳುನಾಡಿನ ಸೊಬಗಿನೊಂದಿಗೆ ಈ ಬಾರಿ ಅದ್ದೂರಿ ಕಂಬಳ : ರಕ್ಷಿತ್ ಶಿವರಾಂ

ಬೆಳ್ತಂಗಡಿ: ತುಳುನಾಡಿನ ಜಾನಪದ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ಪ್ರತೀಕವಾದ ಪ್ರತಿಷ್ಠಿತ ವೇಣೂರು ಪೆರ್ಮುಡ ‘ಸೂರ್ಯ-ಚಂದ್ರ’ ಜೋಡುಕರೆ ಕಂಬಳವು ಇದೇ ಡಿಸೆಂಬರ್ 19ರಂದು ನಡೆಯಲಿದೆ.

ಡಿಸೆಂಬರ್ 19ರಂದು ಬೆಳಿಗ್ಗೆ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕಂಬಳಕ್ಕೆ ಚಾಲನೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು, ಕಂಬಳ ಅಭಿಮಾನಿಗಳು ಭಾಗವಹಿಸಲಿದ್ದಾರೆ .

ತುಳುನಾಡಿನ ಸೊಬಗಿನೊಂದಿಗೆ ಈ ಬಾರಿ ಅದ್ದೂರಿಯಾಗಿ ಕಂಬಳ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ರಕ್ಷಿತ್ ಶಿವರಾಂ ಮಾಹಿತಿ ನೀಡಿದರು. ಸಮಿತಿಯ ಅಧ್ಯಕ್ಷರಾದ ನಿತಿಶ್ ಎಚ್, ಕಾರ್ಯಧ್ಯಕ್ಷರಾದ ಶೇಖರ್ ಕುಕ್ಕೆಡಿ, ಕಂಬಳದ ಯಶಸ್ವಿಗೆ ಎಲ್ಲರ ಸಹಕಾರವನ್ನು ಕೋರಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಪಾಪುದಡ್ಕ ಗುತ್ತು, ಕೋಶಾಧಿಕಾರಿ ಅಶೋಕ್ ಪಾಣೂರ್, ಸಂಚಾಲಕರಾದ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ, ಉಪಾಧ್ಯಕ್ಷರುಗಳಾದ ಕರುಣಾಕರ ಸಾಲ್ಯಾನ್, ಸ್ಟೀವನ್ ಮೋನಿಸ್, ಸಲಹೆಗರಾರದ ಹರೀಶ್ ಕುಲಾಲ್ , ಉಮೇಶ್ ಪಾಣೂರು, ಸಿಲ್ವೆಸ್ಟರ್ ಸೇರಾವೊ,ಗ್ಯಾರಂಟಿ ಅನುಷ್ಠಾನ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್, ದೀಪಕ್ ಬಳೆ0ಜ ,ಸಚಿನ್ ದೇವಾಡಿಗ, ಮೇಲ್ವಿನ್ ಸಿಕ್ವೆರ,ಮ್ಯಾಕ್ಸಿಮ್ ಸಿಕ್ವೆರ, ರೂಪರ್ಟ್ ಪಾಯಸ್, ವಿಜಯ್ ಬಜಿರೆ ,ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರುಗಳಾದ ದಯಾನಂದ ದೇವಾಡಿಗ,ಪುರುಷೋತ್ತಮ ಪೂಜಾರಿ ಮಂಗಳತೇರು,ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ಶಿರ್ಲಾಲು ರಮಾನಂದ ಟೈಲರ್ ನಿಧನ

Suddi Udaya

ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಚಾರ್ಮಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ: ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಉಜಿರೆ ಗ್ರಾ.ಪ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya

ಬೆಳ್ತಂಗಡಿ : ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು , ಹಣ್ಣು ಹಂಪಲು ವಿತರಣೆ

Suddi Udaya

ಲಾಯಿಲದಲ್ಲಿ ಕೃಷಿ/ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ಸೆಂಟರ್ ಮಳಿಗೆ ಉದ್ಘಾಟನೆ

Suddi Udaya
error: Content is protected !!