November 24, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಅಂಗಡಿಗೆ ಆಕಸ್ಮಿಕ ಬೆಂಕಿಯಿಂದ ನಷ್ಟ; ಶರೀಫ್ ಬೆಂದ್ರಾಳ ಅವರಿಗೆ ಶಾಸಕರು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ನೆರವು

ಬೆಳ್ತಂಗಡಿ; ಬೆಂಕಿ ಆಕಸ್ಮಿಕದಿಂದ ಅಂಗಡಿ ಉರಿದು ಭಾರೀ ನಷ್ಟ ಉಂಟಾಗಿದ್ದ ತೋಟತ್ತಾಡಿ ಸನಿಹದ ಬೆಂದ್ರಾಳ ನಿವಾಸಿ ಶರೀಫ್ ಅವರಿಗೆ ಶಾಸಕ‌ ಹರೀಶ್ ಪೂಂಜ ಆರ್ಥಿಕ ನೆರವು ನೀಡಿ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ವತಿಯಿಂದಲೂ ಆರ್ಥಿಕ ಸಹಕಾರ ಒದಗಿಸಕೊಡಲಾಗಿದೆ.

ಬಿಜೆಪಿ‌ ಶಕ್ತಿ‌‌ ಕೇಂದ್ರದ ಪ್ರಮುಖರಾದ ಓಬಯ್ಯ ಗೌಡ, ಚಾರ್ಮಾಡಿ‌ ಗ್ರಾ.ಪಂ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಮಾಜಿ ಸದಸ್ಯರಾದ ಫ್ರಾನ್ಸಿಸ್ ವಿ.ಡಿ, ಅಲ್ಪಸಂಖ್ಯಾತ ಮೋರ್ಚಾದ ತಾಲೂಕು ಅಧ್ಯಕ್ಷ ಪಿ.ಸಿ‌ ಸೆಬಾಸ್ಟಿಯನ್, ತಾಲೂಕು ಸಮಿತಿ ಸದಸ್ಯ ಪ್ರಿನ್ಸ್ ಥೋಮಸ್, ಪ್ರಮುಖರಾದ ಗೋಪಾಲಕೃಷ್ಣ ಮಡೀರ್, ಪಿ.ಜೆ ಆಂಟನಿ, ಬೂತ್ ಸಮಿತಿ ಅಧ್ಯಕ್ಷ ದಿವಾಕರ ಗೌಡ ಬಾರೆ, ಥೋಮಸ್ ಕಾಂಜಾಲ್, ಅಬ್ದುಲ್‌ಖಾದರ್ ಬೆಂದ್ರಾಳ ಮೊದಲಾದವರು‌ ಉಪಸ್ಥಿತರಿದ್ದರು.

ಶಾಸಕರ ಪರವಾಗಿ ನಿಯೋಗ ಶರೀಫ್ ಅವರ ಅಂಗಡಿಗೇ ತೆರಳಿ ಸಾಂತ್ವಾನ ಮೊತ್ತವನ್ನು ಹಸ್ತಾಂತರಿಸಿ ಧೈರ್ಯ ತುಂಬಿದರು. ಅಗ್ನಿ ಅವಘಡದಿಂದ ಬದುಕಿನ ದಾರಿ ದೀಪವಾಗಿದ್ದ ಅಂಗಡಿಯಲ್ಲಿ ಭಾರೀ ನಷ್ಟವಾಗಿದ್ದು, ಶರೀಫ್ ಅವರು ಮತ್ತೆ ಅದನ್ನು ಮರುಸ್ಥಾಪಿಸಿದ್ದಾರೆ. ತಾನು ಕಷ್ಟದಲ್ಲಿರುವಾಗ ಕೈ ಹಿಡಿದ ಶಾಸಕರು ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸಹಾಯವನ್ನು ಎಂದೂ ಮರೆಯಲಾರೆ ಎಂದು ಶರೀಫ್ ಭಾವುಕರಾಗಿ ಪ್ರತಿಕ್ರಿಯಿಸಿದರು.

Related posts

ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರಿಗೆ ನುಡಿನಮನ

Suddi Udaya

ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಚ್ಚಿನ ಘಟಕ ಹಾಗೂ ವಿವಿಧ ಸಂಘಗಳಿಂದ ರಾಮ ದೀಪೋತ್ಸವ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಭೇಟಿ

Suddi Udaya

ಮಿತ್ತಬಾಗಿಲು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಶಿಬರಾಜೆ ಪರಪ್ಪು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಮಕ್ಕಳಿಗೆ ದಾನಿಗಳಿಂದ ಶಾಲು ಮತ್ತು ತಾಳ ವಿತರಣೆ

Suddi Udaya

ಮಾಲಾಡಿ ಗ್ರಾ.ಪಂ. ಮತ್ತು ಗ್ರಾ.ಪಂ. ಗ್ರಂಥಾಲಯದ ಆಶ್ರಯದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!