November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಿವಿಎಲ್ ಸೀಸನ್-6 ವಾಲಿಬಾಲ್ ಪಂದ್ಯಾವಳಿ: ಕೋಟ್ಯಾನ್ ರಾಕರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ: ನಾಲ್ಕು ಬಾರಿ ಪ್ರಥಮ,ಒಮ್ಮೆ ರನ್ನರ್ಸ್ ಪ್ರಶಸ್ತಿ – ಸಂತೋಷ್ ಪಿ. ಕೋಟ್ಯಾನ್ ಮಾಲೀಕತ್ವದ ತಂಡದ ಅಮೋಘ ಸಾಧನೆ

ಬಳಂಜ: ಬಳಂಜ ವಾಲಿಬಾಲ್ ಕ್ಲಬ್‌ನ ನೇತೃತ್ವದಲ್ಲಿ ಶಿವಗಿರಿ ತಂಡದ ಆಶ್ರಯದಲ್ಲಿ ನಡೆದ ಬಿವಿಎಲ್ (BVL) ಸೀಸನ್-6 ವಾಲಿಬಾಲ್ ಪಂದ್ಯಾವಳಿಯಲ್ಲಿ ಸಂತೋಷ್ ಪಿ. ಕೋಟ್ಯಾನ್ ಮಾಲೀಕತ್ವದ ಕೋಟ್ಯಾನ್ ರಾಕರ್ಸ್ ತಂಡವು ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಸೀಸನ್‌ನಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದ ತಂಡವು ನಾಲ್ಕು ಬಾರಿ ಪ್ರಥಮ ಸ್ಥಾನ ಹಾಗೂ ಒಂದು ಬಾರಿ ರನ್ನರ್ಸ್ ಸ್ಥಾನ ಪಡೆದು ಈ ಬಾರಿಯ ಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ವಿಶೇಷ.

ಬಳಂಜ ವಾಲಿಬಾಲ್ ಕ್ಲಬ್‌ನಲ್ಲಿ 100ಕ್ಕೂ ಅಧಿಕ ವಾಲಿಬಾಲ್ ಆಟಗಾರರು ಸಕ್ರಿಯರಾಗಿದ್ದು, ಆರು ತಂಡಗಳು ಹಾಗೂ ಆರು ತಂಡಗಳ ಮಾಲೀಕರ ಸಾರಥ್ಯದಲ್ಲಿ ಪ್ರತಿ ತಿಂಗಳು ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಕ್ರೀಡೆಯ ಮೂಲಕ ಯುವಕರನ್ನು ಒಗ್ಗೂಡಿಸಿ, ಕ್ರೀಡಾಸಕ್ತಿಯನ್ನು ಬೆಳೆಸುವುದರ ಜೊತೆಗೆ ಯುವ ಸಮುದಾಯಕ್ಕೆ ಹೊಸ ಶಕ್ತಿಯಾಗಿ ಬಳಂಜ ವಾಲಿಬಾಲ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ.ಸೀಸನ್-6ರಲ್ಲಿ ಕೋಟ್ಯಾನ್ ರಾಕರ್ಸ್ ತಂಡವು ನಿರಂತರ ಉತ್ತಮ ಆಟದ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ತಂಡದ ಸಂಘಟಿತ ಪ್ರಯತ್ನ, ಆಟಗಾರರ ಶ್ರಮ ಹಾಗೂ ಮಾಲೀಕ ಸಂತೋಷ್ ಪಿ. ಕೋಟ್ಯಾನ್ ಅವರ ಪ್ರೋತ್ಸಾಹ ತಂಡದ ಈ ಸಾಧನೆಗೆ ಪ್ರಮುಖ ಶಕ್ತಿಯಾಗಿದೆ.

ಪಂದ್ಯಾವಳಿಯ ಸಮಾರೋಪ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ಹಾಗೂ ಇಕೋಪ್ರೆಶ್ ತಂಡದ ಮಾಲೀಕ ರಾಕೇಶ್ ಹೆಗ್ಡೆ ಬಳಂಜ, ಶಿವಗಿರಿ ಕಾಪಿನಡ್ಕ ತಂಡದ ಮಾಲೀಕ ಸಂತೋಷ್ ಕುಮಾರ್ ಕಾಪಿನಡ್ಕ, ಮಜ್ಜೇನಿಬೈಲು ಬ್ರದರ್ಸ್ ತಂಡದ ಮಾಲೀಕ ವಿಶ್ವನಾಥ ಹೊಳ್ಳ, ಅನಂತರಾಮ ಹೊಳ್ಳ, ಶ್ರೀಮಾತ ತಂಡದ ಮಾಲೀಕ ಸಚಿನ್ ಶೆಟ್ಟಿ ಕುರೆಲ್ಯ ಹಾಗೂ ದಿಮಿಸೋಲೆ ತಂಡದ ಮಾಲೀಕ ವಿನು ಬಳಂಜ ಉಪಸ್ಥಿತರಿದ್ದರು. ಇವರು ಚಾಂಪಿಯನ್ ಕೋಟ್ಯಾನ್ ರಾಕರ್ಸ್ ತಂಡ ಹಾಗೂ ದ್ವಿತೀಯ ಸ್ಥಾನ ಪಡೆದ ಮಜ್ಜೇನಿಬೈಲು ಬ್ರದರ್ಸ್ ತಂಡಕ್ಕೆ ಪ್ರಶಸ್ತಿ ವಿತರಿಸಿ ಅಭಿನಂದಿಸಿದರು.

ಚಾಂಪಿಯನ್ ಕೋಟ್ಯಾನ್ ರಾಕರ್ಸ್ ತಂಡದ ಸಾರಥಿಗಳು ಹಾಗೂ ಆಟಗಾರರು: ಮಾಲೀಕ ಸಂತೋಷ್ ಪಿ. ಕೋಟ್ಯಾನ್, ಮ್ಯಾನೇಜರ್ ಶರತ್ ಅಂಚನ್, ನಾಯಕ ಸುರೇಶ್ ಹೇವ, ಉಪನಾಯಕ ನಿತೇಶ್ ಹುಂಬೆಜೆ, ಆಟಗಾರರಾದ ಪುರಂದರ ಪೂಜಾರಿ ಪೆರಾಜೆ, ಭಾಸ್ಕರ ಶೆಟ್ಟಿ, ರಂಜಿತ್ ಬಳಂಜ, ಅನಿತ್ ಹೇವ, ರಾಜೇಶ್ ಯೈಕುರಿ ಹಾಗೂ ಪ್ರವೀಣ್ ದೇವಾಡಿಗ ಗಾಂದೋಟ್ಟು,ಪ್ರವೀಣ್ ತೋಟದಪಲ್ಕೆ,ಕೀರ್ತಿ ಬಳಂಜ,ತಂಡದ ಪ್ರಮುಖರಾದ ರಂಜಿತ್ ಮಜಲಡ್ಡ, ಅಶ್ರಫ್ ಬಳಂಜ, ದಿನೇಶ್ ಅಂತರ, ದಿನೇಶ್ ನಿಟ್ಟಡ್ಕ, ಸಂಪತ್ ಕೋಟ್ಯಾನ್ ಹಾಗೂ ಇತರರು ಸಹಕರಿಸಿದರು.

Related posts

ಕೊಕ್ಕಡ: ಸಂಗಮ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ಮಹಾಸಭೆ ಹಾಗೂ ಪದಾಧಿಕಾರಿಗಳ ಪದಗ್ರಹಣ

Suddi Udaya

ಗುರುವಾಯನಕೆರೆ: ಎಕ್ಸೆಲ್ ಸಮೂಹ ಸಂಸ್ಥೆಗಳಲ್ಲಿ ಗೋಕುಲದ ಗೋಪಾಲ ಬೃಂದಾವನದ ರಾಧೆ ಸ್ಪರ್ಧೆ

Suddi Udaya

ಜೇಸಿಐ ವಲಯ ಸಮ್ಮೇಳನ: ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಸಮಗ್ರ ಪ್ರಶಸ್ತಿ

Suddi Udaya

ನಾಳ: ಶ್ರೀ ದುರ್ಗಾ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ಫೆ15-28: ಮುಳಿಯ ಜುವೆಲ್ಸ್‌ನ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ನವರತ್ನ ಆಭರಣಗಳ ಅಮೋಘ ಸಂಗ್ರಹ,

Suddi Udaya

ಉಜಿರೆಯಿಂದ ಪೆರಿಯಶಾಂತಿಯ ರಸ್ತೆ ಕಾಮಗಾರಿ ಕೇಂದ್ರದ ಯೋಜನೆ ಮುಗ್ರೋಡಿ ಕನ್ಸ್ ಟ್ರಕ್ಷನ್ ಗೆ ಟೆಂಡರ್

Suddi Udaya
error: Content is protected !!