ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ವತಿಯಿಂದ ನಡೆಸಿದ 2026ನೇ ಸಾಲಿನ ಭರತನಾಟ್ಯ ಸೀನಿಯರ್ ವಿಭಾಗದ ಪರೀಕ್ಷೆಯಲ್ಲಿ ಅದಿತಿ ಎನ್ ಉಳಿಯ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬೆಳ್ತಂಗಡಿ ನಿವಾಸಿ ಯಾದವ ಗೌಡ ಹಾಗೂ ಲವೀನಾ ಎನ್ ಇವರ ಪುತ್ರಿಯಾಗಿರುವ ಇವರು ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.ಪ್ರಸ್ತುತ ಇವರು ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಇವರ ಶಿಷ್ಯೆಯಾದ ನೃತ್ಯ ಗುರು ವಿದುಷಿ ಡಿಂಪಲ್ ಶಿವರಾಜ್ ಇವರಲ್ಲಿ ಶ್ರೀ ಶಾರದ ಕಲಾ ಶಾಲೆ ಪದ್ಮುಂಜ ಶಾಖೆಯಲ್ಲಿ ನೃತ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.













