November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟನೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ನೆರಿಯ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ನೆರಿಯ ಹಾಗೂ ಗಂಡಿಬಾಗಿಲು ಗ್ರಾಹಕರ ಸಹಕಾರಿ ಸಂಘ ನೆರಿಯ ಮತ್ತು ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಹಾಗೂ KVG ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವು ನ 18 ರಂದು ಅಣಿಯೂರಿನ ಸಂಪದ ಸಭಾ ಭವನದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯಲ್ಲಿ RCC ಅಧ್ಯಕ್ಷ ಆನಂದ ರವರು ವಹಿಸಿದ್ದರು, ಸಭೆಯಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮೇ.ಜಿ ಜನರಲ್ ಯಂ,ವಿ, ಭಟ್, ರೋಟರಿ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿ & ಪ್ರೊಫೆಸರ್ ಕೆವಿಜಿ ದಂತ ಮಹಾವಿದ್ಯಾಲಯ ಸುಳ್ಯ ರೋ ಡಾ ರಾಘವೇಂದ್ರ ಪಿದಮಲೆ, RCC ಚೇರ್ಮನ್ ವೆಂಕಟೇಶ್ವರ ಭಟ್ ಕಜೆ ,RCC ಕಾರ್ಯದರ್ಶಿ ಬಾಲಕೃಷ್ಣ, ಹಾಲು ಉತ್ಪಾದಕರ ಸಹಕಾರಿ ಸಂಘ ನೆರಿಯ ಅಧ್ಯಕ್ಷ ಶ್ರೀಮತಿ ಸರಸ್ವತಿ, ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷೆ ಶ್ರೀಮತಿ ಭವಾನಿ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ರಾಮ ಕುಮಾರ್ ಬಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಶ್ರೀಮತಿ ಶೈಲಾ ರವರು ಕಾರ್ಯಕ್ರಮ ನಿರೂಪಿಸಿ, ವೆಂಕಟೇಶ್ವರ ಭಟ್ ಸ್ವಾಗತಿಸಿದರು. ಯೋಗರಾಜ್ ವಂದಿಸಿದರು.ಶ್ರೀಷರೀಫ್ ಹಾಗೂ PACS ನೆರಿಯ ವ್ಯವಸ್ಥಾಪಕ ಸದಾನಂದ ಕಾರ್ಯಕ್ರಮ ಸಂಯೋಜಿಸಿದರು.ಈ ಶಿಬಿರದ ಪ್ರಯೋಜನವನ್ನು 60 ಕ್ಕು ಹೆಚ್ಚು ಜನರು ಪಡೆದುಕೊಂಡರು.

Related posts

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ

Suddi Udaya

ಕಲ್ಪವೃಕ್ಷ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ

Suddi Udaya

ಜೆಸಿಐ ಪುತ್ತೂರಿನಲ್ಲಿ ತರಬೇತಿ ಕಾರ್ಯಗಾರ

Suddi Udaya

ಬೆಳ್ತಂಗಡಿ: ಎಸ್ ಬಿ ಐ ಲೈಫ್ ಇನ್ಸೂರೆನ್ಸ್ ನಿಂದ ವಿಮಾ ಪರಿಹಾರ

Suddi Udaya

ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಕ್ರೀಡೋತ್ಸವ: ನಡ ಸರಕಾರಿ ಪದವಿ ಪೂರ್ವ ಕಾಲೇಜು ರೇಂಜರ್ಸ್ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವ: ರಥೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ

Suddi Udaya
error: Content is protected !!