November 24, 2026
ಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಬೆಳ್ತಂಗಡಿ ತಾಲೂಕಿನ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳ ಅಂತಿಮ ಮೀಸಲಾತಿ ಪ್ರಕಟ: ಸಂಪೂರ್ಣ ವಿವರ ಇಲ್ಲಿದೆ

ಬೆಳ್ತಂಗಡಿ: ರಾಜ್ಯದಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ (ಜಿ.ಪಂ.) ಮತ್ತು ತಾಲೂಕು ಪಂಚಾಯತ್ (ತಾ.ಪಂ.) ಚುನಾವಣೆಗಳಿಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣಾ ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಅಕ್ಟೋಬರ್ 9 ರಂದು ಪ್ರವರ್ಗ ಮೀಸಲಾತಿಯ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ಇದರಿಂದ ಬಾಧಿತರಾಗುವ ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಸರ್ಕಾರ ಕಾಲಾವಕಾಶ ನೀಡಿತ್ತು. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿದ ನಂತರ, ಇದೀಗ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕ್ಷೇತ್ರವಾರು ಮೀಸಲಾತಿ ವಿವರ ಈ ಕೆಳಗಿನಂತಿದೆ:

ಜಿಲ್ಲಾ ಪಂಚಾಯತ್ ಚುನಾವಣಾ ಕ್ಷೇತ್ರದ ಮೀಸಲಾತಿ: ನಾರಾವಿ-ಸಾಮಾನ್ಯ, ಅಳದಂಗಡಿ-ಅನುಸೂಜಿತ ಜಾತಿ, ಲಾಯಿಲ-ಸಾಮಾನ್ಯ(ಮಹಿಳೆ), ಉಜಿರೆ-ಸಾಮಾನ್ಯ, ಧರ್ಮಸ್ಥಳ ಅನುಸೂಚಿತ ಪಂಗಡ (ಮಹಿಳೆ), ಕಣಿಯೂರು-ಹಿಂದುಳಿದ “ಅ”ವರ್ಗ ಮತ್ತು ಕುವೆಟ್ಟು-ಹಿಂದುಳಿದ “ಅ” ವರ್ಗ (ಮಹಿಳೆ).

ತಾಲೂಕು ಪಂಚಾಯತ್ ಚುನಾವಣಾ ಕ್ಷೇತ್ರದ ಮೀಸಲಾತಿ: ನಾರಾವಿ-ಸಾಮಾನ್ಯ, ವೇಣೂರು-ಸಾಮಾನ್ಯ, ಹೊಸಂಗಡಿ-ಸಾಮಾನ್ಯ, ಅಂಡಿAಜೆ-ಸಾಮಾನ್ಯ, ಅಳದಂಗಡಿ-ಸಾಮಾನ್ಯ, ಶಿರ್ಲಾಲು-ಸಾಮಾನ್ಯ, ಪಡಂಗಡಿ-ಸಾಮಾನ್ಯ(ಮಹಿಳೆ), ಲಾಯಿಲ-ಹಿಂದುಳಿದ “ಅ” ವರ್ಗ, ನಡ-ಹಿಂದುಳಿದ “ಅ” ವರ್ಗ, ಮಿತ್ತಬಾಗಿಲು-ಸಾಮಾನ್ಯ(ಮಹಿಳೆ), ಉಜಿರೆ-ಅನುಸೂಜಿತ ಪಂಗಡ(ಮಹಿಳೆ), ಮುಂಡಾಜೆ ಹಿಂದುಳಿದ “ಅ” ವರ್ಗ, ನೆರಿಯ-ಹಿಂದುಳಿದ “ಅ” ವರ್ಗ (ಮಹಿಳೆ). ಧರ್ಮಸ್ಥಳ-ಅನುಸೂಚಿತ ಜಾತಿ, ಕೊಕ್ಕಡ-ಅನುಸೂಚಿತ ಜಾತಿ (ಮಹಿಳೆ). ಕಳೆಂಜ-ಸಾಮಾನ್ಯ (ಮಹಿಳೆ), ಇಳಂತಿಲ-ಸಾಮಾನ್ಯ (ಮಹಿಳೆ). ತಣ್ಣೀರುಪಂತ-ಸಾಮಾನ್ಯ (ಮಹಿಳೆ). ಬಾರ್ಯ ಹಿಂದುಳಿದ “ಅ” ವರ್ಗ (ಮಹಿಳೆ). ಮಾಲಾಡಿ-ಸಾಮಾನ್ಯ, ಕುವೆಟ್ಟು- ಹಿಂದುಳಿದ “ಬ” ವರ್ಗ (ಮಹಿಳೆ). ಕೊಯ್ಯೂರು ಹಿಂದುಳಿದ “ಅ” ವರ್ಗ (ಮಹಿಳೆ).

Related posts

ಪರೀಕ ಆತ್ರಾಡಿ ಮಸೀದಿಯಿಂದ ಶ್ರೀನಿವಾಸ ದೇವಸ್ಥಾನದವರೆಗೆ ಅಗಲೀಕರಣದೊಂದಿಗೆ ಡಾಮರೀಕರಣಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ್ ಗೌಡ

Suddi Udaya

ಬಳ್ಳಮಂಜದಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವರ ಬ್ರಹ್ಮ ಕಲಶೋತ್ಸವ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರು ನಾರಾಯಣ ಸೇವಾ ಸಮಿತಿಯಿಂದ ಸುಲ್ಕೇರಿ ಅಂಗನವಾಡಿ ಹಾಗೂ ಶ್ರೀರಾಮ ಶಾಲೆಯಲ್ಲಿ ಶ್ರಮದಾನ

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!