November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಕ್ಷ್ಮ ದೀಪೋತ್ಸವ- 14 ನೇ ವರ್ಷದ ಪಾದಯಾತ್ರೆ ಸಮಾಲೋಚನಾ‌ ಸಭೆ

ಬೆಳ್ತಂಗಡಿ; ಪಾದಯಾತ್ರೆ ಕೇವಲ ಭೌತಿಕ‌ ಪ್ರಕ್ರೀಯೆಯಲ್ಲ. ಧರ್ಮ ಮತ್ತು ಸಾತ್ವಿಕ ಶಕ್ತಿ ಗಟ್ಟಿಗೊಳಿಸುವ ಕಾರ್ಯ. ಆದ್ದರಿಂದ ಪ್ರತಿವರ್ಷವೂ ಹೊಸತನ ಮತ್ತು ಉತ್ಸಾಹದಿಂದ ನಡೆಯುತ್ತದೆ. ಎಂದಿನಂತೆ ಈ‌ ಬಾರಿಯೂ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ತಿಳಿದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಉಜಿರೆ ಶ್ರೀ ಜನಾರ್ದನ‌ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಕರೆ‌ ನೀಡಿದರು.‌

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಅಂಗವಾಗಿ ನಡೆಯುವ 14 ನೇ ವರ್ಷದ ಪಾದಯಾತ್ರೆಯ ಬಗ್ಗೆ ನ.24 ರಂದು ಉಜಿರೆ ರಾಮಕೃಷ್ಣ ಸಭಾಂಗಣದಲ್ಲಿ‌ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸನಾತನ‌ ಹಿಂದೂ ಸಂಸ್ಕೃತಿಯಲ್ಲಿ ಪಾದಯಾತ್ರೆ ಮೂಲಕ ದೇಹದಂಡಿಸಿ ಭಕ್ತಿ ಸಮರ್ಪಿಸುವ ಕಾರ್ಯವಿದೆ. ವೈಷ್ಣೋದೇವಿ, ಅಮರನಾಥ ಯಾತ್ರೆ, ಶಬರಿಮಲೆ ಪಾದಯಾತ್ರೆಯಂತಹಾ ಕಠಿಣ ಯಾತ್ರೆಗಳನ್ನು ಕಂಡಿದ್ದೇವೆ. ಅಂತೆಯೇ ನಮ್ಮದೇ ಊರಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿಗೆ ಅಷ್ಟು ದೂರದಿಂದ ಭಕ್ತರು ಆಗಮಿಸುವಾಗ ಕ್ಷೇತ್ರದ ವಾಸಿಗಳೇ ಆಗಿರುವ ನಾವೂ ನಮ್ಮ‌ಭಕ್ತಿಯನ್ನು ಇದರ‌ ಮೂಲಕ ಸಮರ್ಪಿಸಬೇಕಿದೆ ಎಂದವರು ಹೇಳಿದರು. ಗ್ರಾ. ಯೋಜನೆಯ ಕಾರ್ಯನಿರ್ವಾಹಕ‌ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ಮಾತನಾಡಿ, ಹಿಂದೊಮ್ಮೆ ಅಸುರಶಕ್ತಿ ವಿಜ್ರಂಭಿಸಿದಾಗ ದೈವೀ ಶಕ್ತಿ ಜಾಗೃತಿಗೊಂಡ ಕಾರ್ಯಕ್ರಮ‌ ಇದು.ಹರಿಯ ಕ್ಷೇತ್ರದಿಂದ ಹರನ ಕ್ಷೇತ್ರಕ್ಕೆ ಅಂದು ಉಜಿರೆಯ ವಿಜಯರಾಘವ ಪಡುವೆಟ್ನಾಯರು, ಡಾ ಯಶೋವರ್ಮ ಅವರ ಮಾರ್ದದರ್ಶನದಲ್ಲಿ ಈ ಪಾದಯಾತ್ರೆ ಆರಂಭವಾಗಿದೆ. ಪ್ರತಾಪಸಿಂಹ ನಾಯಕ್, ಹರೀಶ್‌ ಕುಮಾರ್ ಮತ್ತು ಹರೀಶ್ ಪೂಂಜ ಅವರು ವಿವಿಧ ಆಯಾಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದವರು ಏಕಕಾಲದಲ್ಲಿ ಮೂರೂ ಮಂದಿ ಶಾಸಕರಾಗಿ ಹೊರಹೊಮ್ಮಿರುವುದೂ ನಮ್ಮ ಅನುಭವಕ್ಕೆ ಬಂದಿದೆ. ಆದ್ದರಿಂದ ಸದ್ಭಾವನೆಯಿಂದ ಈ‌ಕಾರ್ಯದಲ್ಲಿ ತೊಡಗಿಸಿಕೊಂಡರೆ ಇಷ್ಟಾರ್ಥ ಸಿದ್ದಿಯಾಗಲಿದೆ. ಎಂದಿನಂತೆ ಸ್ವಚ್ಛತೆ ಮತ್ತು ಸುರಕ್ಷತೆಗೆ ಮಹತ್ವ ಕೊಟ್ಟು‌ ಪಾದಯಾತ್ರೆಯಲ್ಲಿ ಭಾಗಿಯಾಗೋಣ. ಇದುಆಡಂಬರದ ವ್ಯವಸ್ಥೆಯಲ್ಲ ಸಂಸ್ಕೃತಿ‌ ಬಿಂಭಿಸುವ ಕಾರ್ಯಕ್ರಮ .ಸಾತ್ವಿಕರ ಸಂಗಮ.‌ ಸಜ್ಜನರ ನಡಿಗೆ. ಪ್ರೀತಿಯ -ಭಕ್ತಿಯ ಅರ್ಪಣೆ ಎಂದರು.

ಪ್ರತಾಪಸಿಂಹ ನಾಯಕ್ ಮಾತನಾಡಿ, ನಾವೆಲ್ಲರೂ ಶ್ರೀ ಕ್ಚೇತ್ರದ ಧರ್ಮಾಧಿಕಾರಿ ಪೂಜ್ಯ ಹೆಗ್ಗಡೆಯವರ ಜೊತೆಗಿದ್ದೇವೆ ಎಂಬ ಸಂದೇಶ ನೀಡುವ ಕಾರ್ಯಕ್ರಮ. ಕ್ಷೇತ್ರಕ್ಕೆ ಹತ್ತಿರವೇ ಇರುವ ನಾವುಗಳು ಕ್ಷೇತ್ರದ ಮೇಲಿನ‌ ಭಕ್ತಿಯನ್ನು ತೋರಿಸುವ ಕಾರ್ಯ. ಆಧ್ಯಾತ್ಮಿಕವಾಗಿಯೂ, ಸಾಮಾಜಿಕವಾಗಿಯೂ ಜನರ ಮತ್ತು ನಮ್ಮ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಲ್ಲಿ ಧರ್ಮಸ್ಥಳದ ಜೊತೆಗೆ ಸಂಬಂಧ ಗಟ್ಟಿಗೊಳಿಸುವ ಅವಕಾಶ ಎಂದರು. ಸಭೆಯಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಪಾದಯಾತ್ರೆ ಸಮಿತಿ ಸಂಚಾಲಕ ಪೂರನ್ ವರ್ಮ, ಧರ್ಮಸ್ಥಳದ ದೀಪೋತ್ಸವ ಇಂದುಮನೆ ಮನೆಯ ಹಬ್ಬವಾಗಿದೆ.ಓಂ‌ನಮಃಶ್ಶಿವಾಯ ಎಂಬ ಪಾಂಚಾಕ್ಷರಿ ಜಪದೊಂದಿಗೆ ನಡೆಯುವ ಪಾದಯಾತ್ರೆ ಪಂಚಭೂತಗಳ ಅನುಭವ ಪಡೆಯುವ ಜೊತೆಗೆ ಮಂತ್ರ ಪಠಣ ಮತ್ತು ಅನುಭವಿಸುವುದರೊಂದಿಗೆ ಶಿವನ ಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ತೆರಳುವ ಒಂದು ಅವಕಾಶ. ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ಶಿವ ಬೇಗನೇ ಒಲೀತಾನೆ. ಅಂತಹಾ ಒಳ್ಳೆಯ ಅವಕಾಶವನ್ನು ದೇವರೇ ನಮಗೆಲ್ಲಾ ಒದಗಿಸಿಕೊಟ್ಟಿದ್ದಾರೆ ಎಂದರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ‌ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಬದುಕು‌ಕಟ್ಟೋಣ ತಂಡದ ಸಂಚಾಲಕ ಮೋಹನ್‌ ಕುಮಾರ್, ಉಜಿರೆಯ ಹಿರಿಯ ಉದ್ಯಮಿ ರಾಜೇಶ ಪೈ ಉಪಸ್ಥಿತರಿದ್ದರು.ಗ್ರಾ. ಯೋ ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್ ವಂದಿಸಿದರು.

ಡಿಸೆಂಬರ್ 4ರಂದು 2:30ಕ್ಕೆ ಎಲ್ಲರೂ ಶ್ರೀ ಕ್ಷೇತ್ರ ಜನಾರ್ದನ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಸೇರುವುದು. 3 ಗಂಟೆಗೆ 14ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ, 3:00ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದೆಡೆಗಿನ ಪಾದಯಾತ್ರೆ ಆರಂಭವಾಗುತ್ತದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ದಾರಿ ಯುದ್ಧಕ್ಕೂ ನೀರು ಮತ್ತು ಬೆಲ್ಲದ ವ್ಯವಸ್ಥೆ ಮಾಡಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದ ಬಳಿಕ 5:30ಕ್ಕೆ ಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.

14 ವರ್ಷಗಳ ಹಿಂದೆ ಪಾದಯಾತ್ರೆ ಆರಂಭವಾದಾಗಿ‌ ಇದ್ದ‌ ಹಿರಿಯರು‌ ಇಂದು ನಡೆಯಕು ಅಶಕ್ತರಾಗಿರಬಹುದು. ಆದೇ ಅವರು ಪಾದಯಾತ್ರೆ ಆಎಂಭವಾಗುವ ಉಜಿರೆಯ ದೇವಸ್ಥಾನಕ್ಕೆ ಬಳಿಕ ಪಾದಯಾತ್ರೆ ಅಂತಿಮಗೊಂಡು ಧರ್ಮಸ್ಥಳದಲ್ಲಿ ಪೂಜ್ಯರು ನೀಡುವ ಆಶೀರ್ವಚನಕ್ಕೆ ನೇರ‌ಬಂದು ಭಾಗವಹಿಸುವಂತಾಗಬೇಕು. ಪ್ರತಾಪಸಿಂಹ ನಾಯಕ್ ಮಾಜಿ ಎಂ.ಎಲ್‌.ಸಿ

Related posts

ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಮನೋವಿಜ್ಞಾನ ವಿಭಾಗಕ್ಕೆ ಪ್ರತಿಷ್ಠಿತ “ಇನ್‌ಸ್ಪಾ” ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ‌ ದೇವಸ್ಥಾನದ ವಾರ್ಷಿಕ ‌ಜಾತ್ರೆ: ದೀಕ್ಷಿತ್ ಅರಂತೊಟ್ಟು ಇವರ ‘ಡಿಲೈಟ್ ಡೆಕೋರೇಷನ್ಸ್’ ಉದ್ಘಾಟನೆ

Suddi Udaya

ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಂ.ಆ‌ರ್. ಪ್ರಸನ್ನರಿಗೆ ಬೀಳ್ಕೊಡುಗೆ

Suddi Udaya

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ತುಳು ಸಂಘ ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜು ಆಶ್ರಯದಲ್ಲಿ ಎರಡು ದಿನಗಳ ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟ ಉದ್ಘಾಟನೆ

Suddi Udaya

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ಕ್ಷೇಮ ನಿಧಿಯ 15ನೇ ಸಹಾಯಧನ ವಿತರಣೆ

Suddi Udaya

ನಿಡ್ಲೆ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya
error: Content is protected !!