November 24, 2026
ಧಾರ್ಮಿಕವರದಿ

ಲೋಕಕಲ್ಯಾಣದ ಸಂಕಲ್ಪದೊಂದಿಗೆ ಕೊಟ್ಟಿಗೆಹಾರದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

ಬೆಳ್ತಂಗಡಿ: ಲೋಕಕಲ್ಯಾಣ, ನಾಡಿನ ಸುಭಿಕ್ಷೆ ಹಾಗೂ ಸರ್ವರ ಒಳಿತಿನ ಸಂಕಲ್ಪದೊಂದಿಗೆ ಬೆಂಗಳೂರಿನ ಕಬ್ಬಳಮ್ಮ ಪಾದಯಾತ್ರೆ ಸಮಿತಿಯ ೧೫ ಮಂದಿ ಭಕ್ತರು ಎರಡನೇ ವರ್ಷ ಕಾರ್ತಿಕ ಮಾಸದ ಸೋಮವಾರದಂದು ಕೊಟ್ಟಿಗೆಹಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡರು.

ಬೆಂಗಳೂರಿನ ಮೂಲದ ಶೂಲಿನ್ ಹಿಲ್ ವ್ಯೂ ನಿವಾಸಿಗಳಾದ ಹೇಮಂತ್, ಅನಿಲ್, ಗಿರೀಶ್, ಕೆಂಪರಾಜು ಸೇರಿದಂತೆ ೧೫ ಮಂದಿ ಭಕ್ತರು ಸೋಮವಾರ ಮುಂಜಾನೆ ಕೊಟ್ಟಿಗೆಹಾರದಿಂದ ತಮ್ಮ ಧಾರ್ಮಿಕ ನಡಿಗೆಯನ್ನು ಆರಂಭಿಸಿದರು.

ಪ್ರಕೃತಿಯ ಸೌಂದರ್ಯದ ನಡುವೆ ಸಾಗುವ ಘಾಟಿ ಪ್ರದೇಶದ ಹಾದಿಯಲ್ಲಿ ಭಕ್ತಿಭಾವದಿಂದ ಹೆಜ್ಜೆ ಹಾಕಿದ ಯಾತ್ರಾರ್ಥಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವ ಸಂಕಲ್ಪದೊಂದಿಗೆ ಆಗಮಿಸಿದರು.

Related posts

ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ದಾರಿ ಮಧ್ಯೆ ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ

Suddi Udaya

ಶಿಶಿಲ : ರಸ್ತೆಗೆ ಬಿದ್ದ ಮರ , ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮರ ತೆರವು

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬನ್ನಿ ದಳದ ಉದ್ಘಾಟನೆ

Suddi Udaya

ಮೇ 1: ಎಸ್.ಡಿ.ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ

Suddi Udaya

ಗೇರುಕಟ್ಟೆ: ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟನೆ

Suddi Udaya
error: Content is protected !!