November 25, 2026
Uncategorizedಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕನ್ನಡ ಹಬ್ಬದಲ್ಲಿ ನಾಲ್ಕು ಸರಕಾರಿ ಶಾಲೆಗಳಿಗೆ ನಿಧಿ ಹಸ್ತಾಂತರ

ಇಳoತಿಲ: ಬಿ. ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆಯಲ್ಲಿ ಜರಗಿದ 15ನೇ ವರ್ಷದ ಕನ್ನಡ ಹಬ್ಬ ಸಮಾರಂಭದಲ್ಲಿ ರೂ.70ಸಾವಿರ ಹಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕ, ಬನ್ನೆoಗಳ , ಇಳಂತಿಲ ಮತ್ತು ಕಾರಿಂಜ ಶಾಲೆಗಳ ಮುಖ್ಯಸ್ಥರಿಗೆ ಹಂಚಿಕೆ ಮಾಡಿ ಹಸ್ತಾಂತರಿಸಲಾಯಿತು.

ಬುಲೇರಿ ಮೊಗ್ರು ಸರಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕರಾದ ಧನಂಜಯ ಪಿ ಕನ್ನಡ ಭಾಷಾ ಪ್ರೇಮವನ್ನು ಶಾಲಾ ಮಕ್ಕಳಲ್ಲಿ ಮತ್ತು ಪರಿಸರದಲ್ಲಿ ಜಾಗೃತಿಗೊಳಿಸಲು ಕನ್ನಡ ಬಳಗವು ಮಾಡಿರುವ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಗದ ಸದಸ್ಯ, ಉಪ್ಪಿನಂಗಡಿ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕನ್ನಡ ಭಾಷೆಯ ಬಗ್ಗೆ ಮಾತು ಮತ್ತು ಕೃತಿಗಳಲ್ಲಿ ನಮ್ಮ ಅಭಿಮಾನವನ್ನು ತೋರಿಸಬೇಕೆಂದು ತಿಳಿಸಿದರು. ಡಾ. ಗೋವಿಂದ ಪ್ರಸಾದ್ ಕಜೆ, ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೃಷ್ಣಪ್ಪ ಪೂಜಾರಿ ಶುಭ ಹಾರೈಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ನಾಲ್ಕು ಶಾಲೆಗಳ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಳಗದ ಕಾರ್ಯದರ್ಶಿ ತಿರುಮಲೇಶ್ವರ ಭಟ್ ಸ್ವಾಗತಿಸಿ ವಿಜಯಕುಮಾರ್ ಕಲ್ಲಳಿಕೆ ಪ್ರಸ್ತಾವನೆಗೈದರು. ಶಿಕ್ಷಕಿ ನಯನ. ಪಿ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಗಿರಿಜಾ. ಯನ್ ವoದಿಸಿದರು.

Related posts

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣ: ಸ್ಥಳ ಮಹಜರು ನಡೆಸಿ ಧರ್ಮಸ್ಥಳ ಠಾಣೆಗೆ ಬಂದ ಎಸ್.ಐ.ಟಿ ತಂಡ

Suddi Udaya

ಅನೀಶ್ ಪೂಜಾರಿ ವೇಣೂರು ನಿರ್ದೇಶನದ ಕಾಮಿಡಿ ಸಿನಿಮಾ ‘ಹೌದ್ದೋ ಹುಲಿಯ’ ನಟ ಡಾ. ಶಿವರಾಜ್ ಕುಮಾರ್ ರಿಂದ ಟೈಟಲ್ ಅನಾವರಣ

Suddi Udaya

ನಿಟ್ಟಡೆ ಕುಂಭಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಕೇಳ ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆ

Suddi Udaya

ಪುದುವೆಟ್ಟು: ಅಕ್ರಮವಾಗಿ ಮರ ಕಡಿದು ಸಾಗಟ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು: ರೂ.6.30 ಲಕ್ಷ ಮೌಲ್ಯದ ಸೊತ್ತು ವಶ

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya
error: Content is protected !!