September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಿಟ್ಟಡೆ ಕುಂಭಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ವೇಣೂರು :ಇಲ್ಲಿಯ ನಿಟ್ಟಡೆ ಪ್ರದೇಶದಲ್ಲಿರುವ ಕುಂಭಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಅ.07 ರಂದು ಶಿಕ್ಷಕರ ದಿನಾಚರಣೆ ಭಕ್ತಿ, ಗೌರವ ಮತ್ತು ಹರ್ಷೋದ್ಗಾರದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಗಿರೀಶ್ ಕೆ.ಎಚ್. ಮಾತನಾಡಿ , “ಶಿಕ್ಷಕರು ಸಮಾಜದ ಶ್ರೇಷ್ಠ ಮಾರ್ಗದರ್ಶಕರು. ಅವರ ತ್ಯಾಗ, ಶ್ರಮ ಮತ್ತು ಬೋಧನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಬೆಳಗುತ್ತದೆ,” ಎಂದು ಹೇಳಿದರು.

ನಂತರ ಸಂಸ್ಥೆಯ ಸಂಚಾಲಕರಾದ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತಾರೆ ಎಂದು ಅಭಿಪ್ರಾಯಪಟ್ಟರು. ಅವರು ಶಿಕ್ಷಕರ ಸೇವಾ ಮನೋಭಾವ ಮತ್ತು ನಿಷ್ಠೆಯನ್ನು ಶ್ಲಾಘಿಸಿದರು.

ಕುಂಭಶ್ರೀ ಪ್ರಿ-ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಓಮನಾ ಎಂ.ಎ. , “ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಅವರು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಗಳು,” ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ದಿನದ ವಿಶೇಷತೆಯಾಗಿ, ಸಂಸ್ಥೆಯ ಎಲ್ಲಾ ವಿಭಾಗಗಳಾದ ಪ್ರೀ-ಪ್ರೈಮರಿ, ಪ್ರೈಮರಿ, ಹೈ ಸ್ಕೂಲ್ ಹಾಗೂ ಪಿ.ಯು. ಕಾಲೇಜುಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗಾಗಿ ವಿವಿಧ ಕ್ರೀಡಾ ಮತ್ತು ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಎಲ್ಲರೂ ಉತ್ಸಾಹಭರಿತವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದರು.

ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಗೌರವ ಸೂಚಕ ಬಹುಮಾನಗಳನ್ನು ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಕಾಡೆಮಿಕ್ ಅಡ್ವೈಸರ್ ಮನೋಜ್ ಎಸ್., ಪ್ರೀ-ಪ್ರೈಮರಿ, ಪ್ರೈಮರಿ ಹಾಗೂ ಹೈ ಸ್ಕೂಲ್ ಮುಖ್ಯೋಪಾಧ್ಯಾಯರು , ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕುಂಭಶ್ರೀ ಶಿಕ್ಷಣ ಸಂಸ್ಥೆಯ ಮಕ್ಕಳು ನಿರ್ವಹಿಸಿ, ತಮ್ಮ ಕಲಾತ್ಮಕ ಪ್ರದರ್ಶನಗಳಿಂದ ಎಲ್ಲರ ಮನ ಗೆದ್ದರು.ಎಲ್ಲ ಶಿಕ್ಷಕರಿಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.

Related posts

ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಅನುಜ್ಞಾ ಕಲಶ ಹಾಗೂ ಜೀರ್ಣೋದ್ಧಾರ ಕಾರ್ಯಾರಂಭ

Suddi Udaya

ಉಜಿರೆ: ಅಜಿತ್ ನಗರ ನಿವಾಸಿ ಶಂಕರನಾರಾಯಣ ಭಟ್ ನಿಧನ

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ: ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಹಾಗೂ ವಿವಿಧ ಗಣ್ಯರಿಂದ ಶುಭಾಶಯ

Suddi Udaya

ಬಿಜೆಪಿ ಕೊಕ್ಕಡ 237ನೇ ಬೂತು ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್, ಕಾರ್ಯದರ್ಶಿಯಾಗಿ ಶ್ರೀಧರ್ ಆಯ್ಕೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಶಿಬಾಜೆ ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya

ಉಜಿರೆ ಹಾ.ಉ.ಸ. ಸಂಘದ ವತಿಯಿಂದ ಬದನಾಜೆ ಶಾಲೆಯ ನೂತನ ಸಭಾಂಗಣಕ್ಕೆ ದೇಣಿಗೆ ಹಸ್ತಾಂತರ

Suddi Udaya
error: Content is protected !!