ಮಚ್ಚಿನ: ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ತಾರೆಮಾರು ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳ ಕೈಯಿಂದಲೇ ಕಲ್ಪವೃಕ್ಷ ಗಿಡವನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಕುಸುಮವತಿ, ಕೃಷಿ ಮೇಲ್ವಿಚಾರಕರು ಕೃಷ್ಣ, ಅಂಗನವಾಡಿ ಶಿಕ್ಷಕಿ, ಪುಷ್ಪಾವತಿ, ಸೇವಾಪ್ರತಿನಿಧಿ ನಂದಿನಿ, ಕಲಾವತಿ, ಅಂಗನವಾಡಿ ಸಹಾಯಕಿ, ಪೋಷಕರು ಮೋಹಿನಿ, ಕವಿತಾ, ಕಾವ್ಯ ಜಯಶ್ರೀ, ಶೇಷಪ್ಪ, ಪಾಲಕರು ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.













