September 6, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪಿಯುಸಿ ಫಲಿತಾಂಶ; ನಯನಾಡು ಸುಶ್ಮಿತಾ ಆಶಾಲತಾ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್

ಬೆಳ್ತಂಗಡಿ; ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಯನಾಡು ಸುಶ್ಮಿತಾ ಆಶಾಲತಾ ರವರು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿರುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ಅನುದಾನಿತ ಶಾಲೆ ನೈನಾಡು ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು (ಕನ್ನಡ ಮಾಧ್ಯಮದಲ್ಲಿ )ಸರಕಾರಿ ಪ್ರೌಢ ಶಾಲೆ ನೈನಾಡು ಇಲ್ಲಿ ಪೂರೈಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.97 ಅಂಕ ಪಡೆದು ನಂತರ ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಪಿಯುಸಿಯಲ್ಲಿ ಈ ಅಭೂತಪೂರ್ವ ಸಾಧನೆ ಮಾಡಿರುತ್ತಾಳೆ.


ಆರ್ಥಿಕವಾಗಿ ತೀರಾ ಕಷ್ಟದಲ್ಲಿರುವ ಬಡ ಕುಟುಂಬದ ವಿದ್ಯಾರ್ಥಿ ಈಕೆ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡ ಈಕೆಗೆ ಅಮ್ಮನ ಕಠಿಣ ಪರಿಶ್ರಮವೇ ಸಾಧನೆಗೆ ದಾರಿ ತೋರಿಸಿದ್ದು. ಸುಶ್ಮಿತಾ ಳ ಅಣ್ಣ ಕಾಲೇಜು ಓದುತ್ತಿದ್ದು, ರಜಾ ದಿನಗಳಲ್ಲಿ ಕೂಲಿ ಕೆಲಸ ಮಾಡಿ ತನ್ನ ಶಾಲಾ ಖರ್ಚಿನ ಹಣ ಹೊಂದಾಣಿಕೆ ಮಾಡಲು ತಾಯಿಗೆ ನೆರವಾಗುತ್ತಿದ್ದು, ಈಕೆಯ ಸಹೋದರಿ ಅಮೃತಾ ಕೂಡ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಪುಂಜಾಲಕಟ್ಟೆ ಯ ಸರಕಾರಿ ಕಾಲೇಜಿನಲ್ಲಿ ಓದುತ್ತಿದ್ದು, ತಾನು ಕೂಡ ಶೇ. 91 ಪ್ರತಿಶತ ಅಂಕ ಪಡೆದ ಸಾಧನೆ ಮಾಡಿರುತ್ತಾಳೆ.

ಇವಳಿಗೆ ನೈನಾಡಿನ ಶ್ರೀ ರಾಮ ಭಜನಾ ಮಂದಿರ, ಶ್ರೀ ರಾಮ ಯುವಕ ಸಂಘ, ನಿವೇದಿತಾ ಮಾತೃ ಮಂಡಳಿ ಹಾಗೂ ನಿವೇದಿತಾ ಭಗಿನಿಯರ ತಂಡದ ವತಿಯಿಂದ ಹಾರ್ಧಿಕ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Related posts

ಕೊಕ್ಕಡ: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಘಟಕದ ಪದಗ್ರಹಣ ಹಾಗೂ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ

Suddi Udaya

ಒಲಿಂಪಿಯಾಡ್ ಪರೀಕ್ಷೆಯಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಬೆಳ್ತಂಗಡಿ ಬಿಷಪ್ ರಿಗೆ ಲಯನ್ಸ್ ಕ್ಲಬ್ ನಿಂದ ಬೆಳ್ಳಿಹಬ್ಬ ವರ್ಷದ “ಗೌರವಾಭಿನಂದನೆ”

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಮಂತ್ರಿಮಂಡಲ ಪ್ರಮಾಣವಚನ ಸಮಾರಂಭ

Suddi Udaya

ಚಾರ್ಮಾಡಿ : ನಾಗಬ್ರಹ್ಮ, ನಾಗಯಕ್ಷಿಣಿ ಹಾಗೂ ಶಿರಾಡಿ ದೈವ, ರುದ್ರಾಂಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ: ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಅನಾರೋಗ್ಯದಿಂದ ದಿವಾಕರ ಕುಲಾಲ್ ನಿಧನ

Suddi Udaya
error: Content is protected !!