November 25, 2026
Uncategorizedಕ್ರೀಡಾ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಲಯ ಮಟ್ಟದ ಪ್ರತಿಭಾ ಕಾರಂಜಿ: ಮರಿಯಾ೦ಬಿಕಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಬೆಳ್ತಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿ ನ.೨೩ರಂದು ನಡೆದ ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರಿಯಾ೦ಬಿಕಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು ಲಭಿಸಿದೆ.

ಕಿರಿಯರ ವಿಭಾಗದಲ್ಲಿ ಫಾತಿಮಾ ಅಲಿಫಾ ೪ನೇ ತರಗತಿ ಧಾರ್ಮಿಕ ಪಠಣ ಅರೇಬಿಕ್ ಪ್ರಥಮ ಸ್ಥಾನ, ಜೋಸ್ನಾ ಕೆ.ಜೆ ೪ನೇ ತರಗತಿ ಇಂಗ್ಲಿಷ್ ಕಂಠಪಾಠ ದ್ವಿತೀಯ ಸ್ಥಾನ, ದೇಶಭಕ್ತಿಗೀತೆ ತೃತೀಯ ಸ್ಥಾನ ಪಡೆದಿರುತ್ತಾರೆ.


ಹಿರಿಯರ ವಿಭಾಗದಲ್ಲಿ ಮೊಹಮ್ಮದ್ ಅಲಿ ಜೋಹಾರ್ ೭ನೇ ತರಗತಿ ಧಾರ್ಮಿಕ ಪಠಣ ಅರೇಬಿಕ್ ತೃತೀಯ ಸ್ಥಾನ, ನಿರೀಕ್ಷ ಬಿ.ಆರ್ ೭ನೇ ತರಗತಿ ಕನ್ನಡ ಕಂಠಪಾಠ ತೃತೀಯ ಸ್ಥಾನ, ಫಾತಿಮತ್ ರಿಫಾ ೭ನೇ ತರಗತಿ ಹಿಂದಿ ಕಂಠಪಾಠ ತೃತೀಯ ಸ್ಥಾನ, ಅಶಾಂಕ್ ೭ನೇ ತರಗತಿ ಕ್ಲೇ ಮಾಡಲಿಂಗ್ ತೃತೀಂiÀi ಸ್ಥಾನ, ಸಾತ್ವಿಕ್ ೬ನೇ ತರಗತಿ ಭಕ್ತಿಗೀತೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಕಿರಿಯರ ವಿಭಾಗದ ಫಾತಿಮಾ ಅಲೀಫಾ ಧಾರ್ಮಿಕ ಪಠಣ ಅರೇಬಿಕ್ ಇದರಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಶಾಲಾ ಮ್ಯಾನೇಜರ್, ಮುಖ್ಯ ಶಿಕ್ಷಕರು, ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Related posts

ಮಹೇಶ್ ಶೆಟ್ಟಿ ತಿಮರೋಡಿ-ಶ್ರೀಮತಿ ಸರೋಜ ಶೆಟ್ಟಿ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya

ಶಿಬಾಜೆ: ಕಾಡಾನೆ ದಾಳಿಗೆ ಹಸು ಬಲಿ

Suddi Udaya

ಸುದ್ದಿ ಉದಯ ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಖ್ಯಾತ ಚಿತ್ರನಟ ರಮೇಶ್ ಅರವಿಂದ

Suddi Udaya

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 8 ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ

Suddi Udaya

ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್‌ ಕುಮಾ‌ರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಭರತನಾಟ್ಯ ವಿಧ್ವತ್ ಪೂರ್ವ ಪರೀಕ್ಷೆಯಲ್ಲಿ ಗುರುವಾಯನಕೆರೆಯ ಕು. ರಕ್ಷಾ ಶೆಣೈರವರಿಗೆ ಉತ್ತಮ ಶ್ರೇಣಿ

Suddi Udaya
error: Content is protected !!