September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 8 ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ 2026-2031ರ ಅವಧಿಗೆ ಎಲ್ಲಾ 8 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕು ಘಟಕದ 8 ಸ್ಥಾನಗಳಿಗೆ ಒಟ್ಟು 16 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಏ.14ರಂದು 8 ಮಂದಿ ತಮ್ಮ ನಾಮಪತ್ರ ಹಿಂಪಡೆದುಕೊಂಡ ಪರಿಣಾಮ 8 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಮುಗುಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ವಸತಿ ಶಾಲೆಯ ಲಕ್ಷ್ಮೀಕಾಂತ್ ಬೇಕಲ್ ಎಸ್, ಬದನಾಜೆ ಸ.ಹಿ.ಪ್ರಾ.ಶಾಲೆಯ ನಿರಂಜನ್, ಪೆರಿಂಜೆ ಸ.ಹಿ.ಪಾ.ಶಾಲೆಯ ರಾಜೇಶ್ ಎನ್, ಕಿಲ್ಲೂರು ಸ.ಹಿ.ಪ್ರಾ, ಶಾಲೆಯ ರಮೇಶ್ ಎಂ, ಉಜಿರೆ ಹಳೆಪೇಟೆ ಸ.ಹಿ.ಪ್ರಾ. ಶಾಲೆಯ ಸುರೇಶ್, ಮಹಿಳಾ ಮೀಸಲು ಸ್ಥಾನದಿಂದ ನಿಟ್ಟಡೆ ಸ.ಹಿ.ಪ್ರಾ.ಶಾಲೆಯ ಆರತಿ ಕುಮಾರಿ, ಉಣ್ಣಾಲು ಸ.ಕಿ.ಪ್ರಾ. ಶಾಲೆಯ ಗಂಗಾರಾಣಿ ನಾ.ಜೋಶಿ ಮತ್ತು ಸುಳ್ಳೋಡಿ ಸ.ಕಿ.ಪ್ರಾ.ಶಾಲೆಯ ಸೌಮ್ಯ ಎಂ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಡಗಕಾರಂದೂರು ಸ.ಹಿ.ಪ್ರಾ.ಶಾಲೆಯ ಮಂಗಳ ಕೆ, ಬೆಳ್ತಂಗಡಿ ಪಿಎಂಶ್ರೀ ಶಾಲೆಯ ಮಹಮ್ಮದ್ ಶರೀಫ್ ಕೆ.ಪಿ, ಕುದ್ರಡ್ಕ ಸ.ಕಿ.ಪ್ರಾ. ಶಾಲೆಯ ಚೇತನ್ ಕುಮಾರ್, ಪುಂಜಾಲಕಟ್ಟೆ ಕೆ.ಪಿ.ಎಸ್. ಶಾಲೆಯ ಅನಿತಾ, ಬೆಳ್ತಂಗಡಿ ಪಿಎಂಶ್ರೀ ಶಾಲೆಯ ಸೀತಾರಾಮ, ಕಳೆಂಜ ಸ.ಹಿ.ಪ್ರಾ.ಶಾಲೆಯ ಕೃಷ್ಣಪ್ಪ ಟಿ, ಬಸನ ಗೌಡ ಎಸ್ ಮತ್ತು ಕಾರಿಂಜ ಸ.ಕಿ.ಪ್ರಾ.ಶಾಲೆಯ ಪರಮೇಶ್ವರ ಎಸ್. ಅವರು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ನಿವೃತ್ತ ಪ್ರಥಮ ದರ್ಜೆ ಸಹಾಯಕ ನಾರಾಯಣ ನಾಯ್ಕ ಮುಖ್ಯ ಚುನಾವಣಾಧಿಕಾರಿಯಾಗಿ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಪಂಚಾಕ್ಷರಪ್ಪ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

Related posts

ಧರ್ಮಸ್ಥಳ: ಪಾದಯಾತ್ರಿಗಳಿಗೆ ಸನ್ಮಾನ

Suddi Udaya

ಉರುವಾಲು-ಕಾಯರ್ಪಾಡಿ ಸಂಪರ್ಕ ರಸ್ತೆ ಮರು ಡಾಮರೀಕರಣ: ಶಾಸಕರಿಗೆ ಗ್ರಾಮಸ್ಥರ ಕೃತಜ್ಞತೆ

Suddi Udaya

ಕೊಕ್ಕಡ: ಕೆಂಗುಡೇಲು ನಿವಾಸಿ ಪೂವಣಿ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ದಂತ ವೈದ್ಯಕೀಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಹಮ್ನಾ ಜಝೀಲಾ

Suddi Udaya

ಎಲ್ .ಸಿ.ಆರ್ ವಿದ್ಯಾ ಸಂಸ್ಥೆ : ಶಾಲಾ ಸಂಸತ್ತು ಚುನಾವಣೆ

Suddi Udaya

ಬಾರ್ಯದಲ್ಲಿ ಯಕ್ಷ ಪುರುಷೋತ್ತಮ ಸರಣಿಯ ಸಮಾರೋಪ

Suddi Udaya
error: Content is protected !!