ಗುರುವಾಯನಕೆರೆ: ಎಕ್ಸೆಲ್ ಟೆಕ್ನೋ ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದ ವತಿಯಿಂದ ಪೋಷಕರ ಟ್ಯಾಲೆಂಟ್ ಫಿಯೆಸ್ಟಾ – 2K26 ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಗಿತ್ತು.

ಶಾಲೆಯ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಕೀರ್ತಿ ನಿಧಿ ಜೈನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪೋಷಕರಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ ಎಂದು ಹಾರೈಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಪ್ರತಿಭಾನ್ವಿತ ಪೋಷಕರಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪೋಷಕರಿಗಾಗಿ ಗುಂಪು ಗಾಯನ ಹಾಗೂ ವಿವಿಧ ರೀತಿಯ ನೃತ್ಯ ಪ್ರಕಾರಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪೋಷಕರು ಅತ್ಯಂತ ಉತ್ಸಾಹದಿಂದ, ಆತ್ಮವಿಶ್ವಾಸದಿಂದ ಹಾಗೂ ಅದ್ಭುತ ಕಲಾತ್ಮಕ ಪ್ರತಿಭೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಗಾಯನ ಮತ್ತು ನೃತ್ಯ ವಿವಿಧ ಪ್ರತಿಭೆಗಳ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಸ್ಪರ್ಧೆಗಳು ಅತ್ಯಂತ ಪೈಪೋಟಿಯಿಂದ ಕೂಡಿದ್ದು, ಸಂಭ್ರಮ, ಸಂತೋಷ ಮತ್ತು ಮನರಂಜನೆಯ ಸುಂದರ ವಾತಾವರಣವನ್ನು ಸೃಷ್ಟಿಸಿದವು. ಕಾರ್ಯಕ್ರಮವನ್ನು ಸಂಯೋಜಕರಾದ ಲೀನಾ ಫ್ಲೋರಿನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ, ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ, ಚೇತನ, ಪ್ರೇಮಾ, ವಿಲ್ಮಾ, ಲವೀನಾ, ಅಲಿಷಾ ಹಾಗೂ ಪೂರ್ಣಿಮಾ ಮತ್ತು ಸಹಾಯಕ ಸಿಬ್ಬಂದಿಯ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಲಾಯಿತು.













