September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಗೈಡ್ಸ್ ನಿಂದ ವೀರಯೋಧ ಸ್ಕೌಟ್ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಗೆ ಶ್ರದ್ಧಾಂಜಲಿ

ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಶ್ರೀ ಮಂಜುನಾಥ ದಳದ ಕಬ್ ಬುಲ್ ಬುಲ್ ಸ್ಕೌಟ್ ಗೈಡ್ ಗಳಿಂದ , ರಾಷ್ಟ್ರಪತಿ ಪುರಸ್ಕೃತ ವೀರಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಾಲ್ ಗೆ ನುಡಿ ನಮನ ಸಲ್ಲಿಸಲಾಯಿತು.
ಈ ನುಡಿ ನಮನ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಾಯಕ ಆಯುಕ್ತರಾದ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ. ಸೋಮಶೇಖರ್ ಶೆಟ್ಟಿ ಭಾಗವಹಿಸಿ “ಸೈನಿಕರು ನಮ್ಮ ಹೆಮ್ಮೆ ” ಅಗಲಿದ ವೀರಯೋಧನ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಶ್ರೀ ಮಂಜುನಾಥನಲ್ಲಿ ಪ್ರಾರ್ಥಿಸಿ ಅಗಲಿದ ವೀರ ಯೋಧನಿಗೆ ಪುಷ್ಪ ನಮನ ಸಲ್ಲಿಸಿದರು. ತದನಂತರ ವೀರ ಯೋಧನಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಸ್ಕೌಟ್ ಮಾಸ್ಟರ್ ಮಂಜುನಾಥ್ ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. 

‌‌ ಶ್ರದ್ಧಾಂಜಲಿ ಸಭೆಯ ನಿರೂಪಣೆಯನ್ನು ಪ್ರಾಪ್ತಿ ವಿ ಶೆಟ್ಟಿ ನೆರವೇರಿಸಿಕೊಟ್ಟರು. ಸ್ವಾಗತವನ್ನು ಸ್ಧಳೀಯ ಸಂಸ್ದೆಯ ಕಾರ್ಯದರ್ಶಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಯೋಜಕ ಶಿಕ್ಷಕ ಶ್ರೀಮತಿ ಪ್ರಮೀಳ ನಿರ್ವಹಿಸಿದರು. ಗೈಡ್ ಸಿಂಚನ ಧನ್ಯವಾದವಿತ್ತರು.

Related posts

ಕರಿಕಲ್ ಶಾಖಾ ಮಠದಲ್ಲಿ ಜು.21ರಿಂದ ಆ.30ರವರೆಗೆ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರ ಚಾತುರ್ಮಾಸ್ಯ ವ್ರತ

Suddi Udaya

ಗುರುವಾಯನಕೆರೆ:ಎಕ್ಸೆಲ್ ಕಾಲೇಜಿನಲ್ಲಿ ಕೆಎಂಎಫ್ ನಂದಿನಿ ಮಾರಾಟ ಮಳಿಗೆ ಉದ್ಘಾಟನೆ

Suddi Udaya

ಮುಂಡಾಜೆ ಪ್ರಾ.ಕೃ.ಪ. ಸ. ಸಂಘದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ 145ನೇ ಜನ್ಮದಿನ ಆಚರಣೆ

Suddi Udaya

ನಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

Suddi Udaya

ಕೇಂದ್ರ ಸರ್ಕಾರದ ದಮನಕಾರಿ ಕ್ರಮ ಪ್ರಜಾಪ್ರಭುತ್ವಕ್ಕೆ ಕಳಂಕ: ರಕ್ಷಿತ್ ಶಿವರಾಂ

Suddi Udaya

ಧರ್ಮಸ್ಥಳ ಗ್ರಾ.ಪಂ ಗೆ ಎಸ್.ಐ.ಟಿ ಎಂಟ್ರಿ : ಕರ್ತವ್ಯ ನಿರ್ವಹಿಸುತ್ತಿದವರ ವಿವರ ಪಡೆದ ಎಸ್.ಐ.ಟಿ

Suddi Udaya
error: Content is protected !!