November 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ಪೋಷಕರ ಪ್ರತಿಭೋತ್ಸವ :ಪೇರೆಂಟ್ಸ್ ಟಾಲೆಂಟ್ ಫಿಯೇಸ್ಟ 2K26

ಗುರುವಾಯನಕೆರೆ: ಎಕ್ಸೆಲ್ ಟೆಕ್ನೋ ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದ ವತಿಯಿಂದ ಪೋಷಕರ ಟ್ಯಾಲೆಂಟ್ ಫಿಯೆಸ್ಟಾ – 2K26 ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಗಿತ್ತು.

ಶಾಲೆಯ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಕೀರ್ತಿ ನಿಧಿ ಜೈನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪೋಷಕರಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ ಎಂದು ಹಾರೈಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಪ್ರತಿಭಾನ್ವಿತ ಪೋಷಕರಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪೋಷಕರಿಗಾಗಿ ಗುಂಪು ಗಾಯನ ಹಾಗೂ ವಿವಿಧ ರೀತಿಯ ನೃತ್ಯ ಪ್ರಕಾರಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪೋಷಕರು ಅತ್ಯಂತ ಉತ್ಸಾಹದಿಂದ, ಆತ್ಮವಿಶ್ವಾಸದಿಂದ ಹಾಗೂ ಅದ್ಭುತ ಕಲಾತ್ಮಕ ಪ್ರತಿಭೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಗಾಯನ ಮತ್ತು ನೃತ್ಯ ವಿವಿಧ ಪ್ರತಿಭೆಗಳ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು. ಸ್ಪರ್ಧೆಗಳು ಅತ್ಯಂತ ಪೈಪೋಟಿಯಿಂದ ಕೂಡಿದ್ದು, ಸಂಭ್ರಮ, ಸಂತೋಷ ಮತ್ತು ಮನರಂಜನೆಯ ಸುಂದರ ವಾತಾವರಣವನ್ನು ಸೃಷ್ಟಿಸಿದವು. ಕಾರ್ಯಕ್ರಮವನ್ನು ಸಂಯೋಜಕರಾದ ಲೀನಾ ಫ್ಲೋರಿನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ, ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ, ಚೇತನ, ಪ್ರೇಮಾ, ವಿಲ್ಮಾ, ಲವೀನಾ, ಅಲಿಷಾ ಹಾಗೂ ಪೂರ್ಣಿಮಾ ಮತ್ತು ಸಹಾಯಕ ಸಿಬ್ಬಂದಿಯ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಲಾಯಿತು.

Related posts

ಮಂಗಳೂರು ರಾಜ್ಯ ಸಚಿವ ಸಂಪುಟ ಸಭೆಯ ಪೂರ್ವಭಾವಿ ಸಭೆ

Suddi Udaya

ಶಾಸಕರ ಮುತುವರ್ಜಿಯಿಂದ ಪದವು–ಬೊಳ್ಮನಾರ್ ಮುಖ್ಯರಸ್ತೆಗೆ ತುರ್ತು ದುರಸ್ತಿ; ಮಳೆಗಾಲದ ಬಳಿಕ ರೂ.30 ಲಕ್ಷ ವೆಚ್ಚದಲ್ಲಿ ಮರುಡಾಮರೀಕರಣ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 29ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ

Suddi Udaya

ಕುಕ್ಕಳ: ತುರ್ತು ಸ್ಪಂದಿಸಿ ಸಮಸ್ಯೆ ಪರಿಹರಿಸಿದ ಬೆಳ್ತಂಗಡಿ ಕಾರ್ಯಪಾಲಕರು

Suddi Udaya

ಅಳದಂಗಡಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಅಳವಡಿಸಿದ ನಾಮಫಲಕದಲ್ಲಿ ಗೊಂದಲ

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!