November 28, 2026
ಗ್ರಾಮಾಂತರ ಸುದ್ದಿವರದಿಸಂಘ-ಸಂಸ್ಥೆಗಳು

ಅಸಹಾಯಕರಿಗೆ ಜಾತಿ ಮತ ಭೇದವಿಲ್ಲದೆ ವಾತ್ಸಲ್ಯ ಮನೆಯ ಕೊಡುಗೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರಿ ಬೆಳ್ತಂಗಡಿ ತಾಲೂಕು ವಾತ್ಸಲ್ಯ ಸದಸ್ಯರಾದ ಏರಿಸ್ ಸಲ್ದಾನರವರ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಸಲಾಗಿದ್ದು ಸಂತ ಅಂತೋನಿ ಚರ್ಚ್ ಉಜಿರೆ ಯ ಧರ್ಮ ಗುರುಗಳಾದ ವಂದನೆಯ ಫಾದರ್ ಅಬೆಲ್ ಲೋಬೊ ರವರು ವಾತ್ಸಲ್ಯ ಮನೆ ಹಸ್ತಾಂತರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜಾತಿ ಮತ ಬೇದವಿಲ್ಲದೆ ಜನರಿಗೆ ಸಹಾಯ ಮಾಡುತ್ತಿದ್ದು ಇವತ್ತು ನಮ್ಮ ಕ್ರಿಶ್ಚಿಯನ್ ಸಮುದಾಯದ ಅಸಹಾಯಕ ಸದಸ್ಯರನ್ನು ಗುರುತಿಸಿ ವಾತ್ಸಲ್ಯ ಮನೆಯನ್ನು ನಿರ್ಮಿಸಿಕೊಟ್ಟಿದ್ದು ಸಂತಸ ತಂದಿದೆ ಎಂದರು.

ಗ್ರಾಮಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಯಸ್ ಯಸ್ ರವರು ಕ್ಷೇತ್ರದ ಕಾರ್ಯಕ್ರಮಗಳ ಬಗ್ಗೆ ವಾತ್ಸಲ್ಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಸುಯ೯ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮುನಿರಾಜ ಅಜ್ರಿಯವರು ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭದ ಮುಂಚಿನ ಜನರ ಜೀವನದ ಬಗ್ಗೆ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಮ್ಮಿಕೊಂಡ ಕಾರ್ಯಕ್ರಮದ ಬಗ್ಗೆ ಪ್ರಸ್ತುತ ಜನರಲ್ಲಾದ ಪರಿವರ್ತನೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ನಿರ್ದೇಶಕರಾದ ದಿನೇಶ್ ಡಿ ಯವರು ಯೋಜನಾಧಿಕಾರಿ ಯಶೋದರರವರು ಸ್ಥಳೀಯ ಒಕ್ಕೂಟ ಅಧ್ಯಕ್ಷರು ಪದಾಧಿಕಾರಿಗಳು ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Related posts

ಪಡಂಗಡಿ ಪೊಯ್ಕೆಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ವೀರೇಂದ್ರ ಶೆಟ್ಟಿ, ಅಧ್ಯಕ್ಷರಾಗಿ ಸುನಿಲ್ ಕುಲಾಲ್

Suddi Udaya

ಉತ್ತರ ಕನ್ನಡ ಉಸ್ತುವಾರಿ ಅಭಿನಂದನ್ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾರವಾರದಲ್ಲಿ ಮೊದಲ ಜಿಲ್ಲಾ ಕಾರ್ಯಕಾರಿಣಿ ಸಭೆ

Suddi Udaya

ಕಣಿಯೂರು : ಓಮ್ಮಿ ಕಾರು ಹಾಗೂ ರಿಡ್ಜ್ ಕಾರು ಮುಖಾಮುಖಿ ಡಿಕ್ಕಿ

Suddi Udaya

ಬಂದಾರು: ರಮೇಶ್ ಗೌಡ ಹೃದಯಾಘಾತದಿಂದ ನಿಧನ

Suddi Udaya

ಶಿಬಾಜೆ ಗ್ರಾ.ಪಂ. ಅರಿವು ಕೇಂದ್ರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಹತ್ಯಡ್ಕ ಗ್ರಾಮದ ಪಲಸ್ತಡ್ಕ ನಿವಾಸಿ ಸಂಜೀವ ಗೌಡ ನಿಧನ

Suddi Udaya
error: Content is protected !!