ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನೆ ಹಮ್ಮಿಕೊಂಡಿರುವ ಸರಣಿ ಸೇವಾ ಕಾರ್ಯಕ್ರಮದಲ್ಲಿ ಸಂಚಾರಿ ನಿಯಮ ಕುರಿತು ಜಾಗೃತಿ ಉಪನ್ಯಾಸ ನಡೆಯಿತು.
ಬೆಳ್ತಂಗಡಿ ಸಂಚಾರಿ ಠಾಣೆಯ ಪಿ ಎಸ್ ಐ ನಿಂಗಪ್ಪ ಜಕ್ಕಣ್ಣನವರ್ ರವರು ವಾಹನ ಚಲಾಯಿಸುವಾಗ ಅನುಸರಿಸಬೇಕಾದ ನಿಯಮಗಳು, ಬೈಕ್ ಚಲಾಯಿಸಲು ಸವಾರನಿಗೆ ಹೆಲ್ಮೆಟ್ ಕಡ್ಡಾಯ ಕಾನೂನು, ವಾಹನ ಚಲಾವಣೆಗೆ ಇರಬೇಕಾದ ಅರ್ಹತೆ ಹಾಗೂ ನಿಯಮ ಉಲ್ಲಂಘಸಿದರೆ ವಿಧಿಸುವ ದಂಡ, ಪೋಕ್ಸೋ ಕಾಯಿದೆ, ಮಾದಕ ವಸ್ತುಗಳ ದುಷ್ಪಪರಿಣಾಮ, ಕಾನೂನಿಗೆ ಭಂಗ ತರುವ ಸಂಘಟನೆಗಳಲ್ಲಿ ಭಾಗವಹಿಸುವುದು ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಬೆಳ್ತಂಗಡಿ ಸಂಚಾರಿ ಠಾಣೆಯ ಕಾನ್ಸ್ಟೇಬಲ್ ರೇಣುಕಾ ಪೋಸ್ಕೋ ಕಾನೂನಿನ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಆಂಗ್ಲ ಭಾಷಾವಿಭಾಗದ ಮುಖ್ಯಸ್ಥೆ ಸೀಮಾ ರವರು ಅಧ್ಯಕ್ಷೆತೆ ವಹಿಸಿ ಮಾತನಾಡಿ “ಸಂಚಾರಿ ನಿಯಮಗಳು ಇರುವುದು ನಮ್ಮ ರಕ್ಷಣೆಗಾಗಿ. ಆದರೆ ನಿಯಮಗಳನ್ನು ಉಲ್ಲಂಘಸಿ ನಮ್ಮ ಪ್ರಾಣಕ್ಕೆ ನಾವೇ ಅಪಾಯವನ್ನು ತಂದುಕೊಳ್ಳುತ್ತೇವೆ. ಇಂದಿನ ಯುವ ಪೀಳಿಗೆ ಸಂಚಾರಿ ನಿಯಮಗಳನ್ನು ಹೆಚ್ಚು ಪಾಲಿಸದಿರುವುದು ದುರಂತ” ಎಂದು ಹೇಳಿದರು.
ವೇದಿಕೆಯಲ್ಲಿ ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ, ಸ್ವಯಂ ಸೇವಕಿ ಕೀರ್ತನ ನಿರೂಪಿಸಿದ ಕಾರ್ಯಕ್ರಮದಲ್ಲಿ ನಂದಿನಿ ಸ್ವಾಗತಿಸಿ ಮೋಕ್ಷ ವಂದಿಸಿದರು.













