November 28, 2026
ಅಭಿನಂದನೆತಾಲೂಕು ಸುದ್ದಿಬೆಳ್ತಂಗಡಿವರದಿ

ಪದ್ಮಲತಾ ಮೋಹನ್ ನಿಡ್ಲೆಯವರ “ಎಲ್‌ಬಿಡಬ್ಲ್ಯೂ” ಕಾದಂಬರಿಗೆ ‘”ಅಮ್ಮ ಪ್ರಶಸ್ತಿ”

ಬೆಳ್ತಂಗಡಿ: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗೆ ಸಾಹಿತಿಯಾದ ನಿಡ್ಲೆಯ ಪದ್ಮಲತಾ ಮೋಹನ್ ಅವರ ಕೃತಿ ಆಯ್ಕೆಯಾಗಿದ್ದು ನ.26ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆದ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪದ್ಮಲತಾ ಮೋಹನ್ ರವರು ಮೂಲತಃ ದಕ್ಷಿಣ ಕನ್ನಡದ ನಿಡ್ಲೆಯವರು. ಸಂಖ್ಯಾಶಾಸ್ತ್ರದ ಉಪನ್ಯಾಸಕಿಯಾಗಿರುವ ಇವರು ತಮ್ಮ ಸಾಹಿತ್ಯ ಸೇವೆಯಿಂದ ಗುರುತಿಸಿಕೊಂಡಿದ್ದಾರೆ. ಹಲವು ಕೃತಿಗಳನ್ನು ಪ್ರಕಟಿಸಿರುವ ಇವರು ನಾಡಿನ ಪ್ರಸಿದ್ಧ ಪತ್ರಿಕೆ, ಮ್ಯಾಗಸೀನ್‌ಗಳಿಗೆ ಬರೆಯುತ್ತಿದ್ದಾರೆ. ಹಲವು ಪ್ರಶಸ್ತಿಗೆ ಭಾಜನರಾಗಿರುವ ಇವರು ಕವನ, ಕಥೆ ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ ಹಾಗೂ ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘದ(ರಿ) ಮಹಿಳಾ ಪದಾಧಿಕಾರಿಯಾಗಿದ್ದಾರೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸುದ್ದಿ ಉದಯ ವಾರಪತ್ರಿಕೆಯ ಬರಹಗಾರರು ಆಗಿದ್ದಾರೆ.

Related posts

ಚಾರ್ಮಾಡಿ ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪನ ದಿನಾಚರಣೆ

Suddi Udaya

ಕೇರಳ ಹೊಟೇಲ್ ಮಾಲಕನ ಹತ್ಯೆ ಪ್ರಕರಣ: ಹೊಟೇಲ್ ಕೆಲಸಗಾರ ಬೆಳ್ತಂಗಡಿಯ ಯುವಕ ಬಂಧನ

Suddi Udaya

ಎಸ್ ವಿ ಟಿ ಟೀಮ್ ಪಟ್ರಮೆ ವತಿಯಿಂದ ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ

Suddi Udaya

ಪಿಯುಸಿ ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ವರ್ಷ ಅವರಿಗೆ ಶೇ 96.66 ಫಲಿತಾಂಶ

Suddi Udaya

ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದ ಸಮಿತಿ ರಚನೆ

Suddi Udaya

ಮೇಲಂತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ

Suddi Udaya
error: Content is protected !!