November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜ.10-15 ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶ: ಸಮಾಲೋಚನಾ ಸಭೆ

ಬಡಗಕಜೆಕರು: ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮ ಕಲಶವು ಜ.10ರಿಂದ 15ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಪೂಜಾರಿ ಕಂಡಂತ್ಯಾರು ಹೇಳಿದರು.

ಅವರು ನ.27ರಂದು ದೇವಸ್ಥಾನದ ವಠಾರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.12ವರ್ಷಕೊಮ್ಮೆ ನಡೆಯಬೇಕಿದ್ದ ಬ್ರಹ್ಮ ಕಲಶವು ಈ ಬಾರಿ 14ವರ್ಷ ಕಳೆದಿದೆ. ಇನ್ನು ಕೇವಲ 40ದಿನಗಳು ಮಾತ್ರ ಬಾಕಿ ಉಳಿದಿದೆ. ಇಡೀ ದೇವಸ್ಥಾನದ ಮೇಲ್ಟಾವಣಿ ನಿರ್ಮಿಸಲಾಗಿದ್ದು ಸುಮಾರು ರೂ.73ಲಕ್ಷ ತಗುಲಿದೆ. ಮುಖ ಮಂಟಪ ಮೇಲ್ಟಾವಣಿ ಗ್ರಾನೈಟ್ ಅಳವಡಿಕೆ ರೂ.13ಲಕ್ಷ ರೂ.40ಲಕ್ಷ ವೆಚ್ಚದಲ್ಲಿ ಸಭಾ ವೇದಿಕೆ ನಿರ್ಮಾಣ ಕೈಗೊಳ್ಳಲಾಗಿದೆ. ಅನ್ನ ಛತ್ರ ಮತ್ತು ತಡೆ ಗೋಡೆ ನಿರ್ಮಾಣ ರೂ.43ಲಕ್ಷ, ಸೌಚಾಲಯ ನಿರ್ಮಾಣ ರೂ.10ಲಕ್ಷ, ಬೋಜನಾಲಯ ರೂ.3ಲಕ್ಷ ದೇವರ ಗರ್ಭ ಗುಡಿ ಹಿತ್ತಾಳೆ ಹಾಸುವುದು ರೂ.10 ಲಕ್ಷ, ಪೇಂಟಿಂಗ್ ರೂ. 5ಲಕ್ಷ, ಬ್ರಹ್ಮ ಕಲಶ ರೂ.35-40ಲಕ್ಷ ಒಟ್ಟು ರೂ.2.3ಕೋಟಿ ತಗಲುತ್ತದೆ ಎಂದು ಮಾಹಿತಿ ನೀಡಿದರು.

ಇದು ವರೆಗೆ ಒಟ್ಟು ರೂ.79ಲಕ್ಷ ಖರ್ಚು ಮಾಡಲಾಗಿದೆ. ಬ್ರಹ್ಮ ಕಲಶ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಸಭೆಗಳು ಇಲ್ಲದೆ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾಹತ್ವ ನೀಡಲಾಗಿದೆ. ಬ್ರಹ್ಮ ಕಲಶ ಮೊದಲ ದಿನ ಎಲ್ಲ ಕಾಮಗಾರಿಗಳ ಉದ್ಘಾಟನೆ, ಹೊರೆ ಕಾಣಿಕೆ ಸಮರ್ಪಣೆ, ಭಜನಾ ತಂಡ ದಿಂದ ಭಜನೆ, ಗಂಗಾರತಿ ವಿಶೇಷ ಕಾರ್ಯಕ್ರಮ ನಡೆಯಲಿದೆ.ಸಮಾಲೋಚನಾ ಸಭೆಯಲ್ಲಿ ಬ್ರಹ್ಮ ಕಲಶ ಅಧ್ಯಕ್ಷ ಮುಳಿಂಜ ಶೇಖ‌ರ್ ರೈ, ಬ್ರಹ್ಮ ಕಲಶ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಕೆ. ಮೇಲ್ವಿಚಾರಕಿ ಸವಿತಾ, ಒಕ್ಕೂಟದ ಮೇಲ್ವಿಚಾರಕ ಕೇಶವ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಡಾ. ರಾಜಾರಾಮ್ ಕೆ. ಬಿ., ಉಳಿ ಪಂಚ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆಯ ಸಂಚಾಲಕ ದಾಮೋದರ ನಾಯಕ್, ಕಜೆಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಡಿ. ಕೆ. ಬಂಗೇರಾ, ಕಜೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವದಾಸ್, ಮಾಹಿಲಪ್ಪ ಸಾಲ್ಯಾನ್, ಹೇಮಂತ್ ಗ್ರಾನೈಟ್ ಮಾಲಕ ಮೋಹನಂದ್ ಮೊದಲಾದವರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ. ಮೋನಪ್ಪ ಪೂಜಾರಿ ಐಂಬಲೋಡಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮ ಕಲಶ ಪ್ರಧಾನ ಕಾರ್ಯದರ್ಶಿ ಜಯ ಕೆ. ವಂದಿಸಿದರು.

Related posts

ಯಶಸ್ವಿ ಸಹಕಾರಿ‌ ಸಪ್ತಾಹ: ಮಡಂತ್ಯಾರು ಸೊಸೈಟಿ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾರವರಿಗೆ ಗೌರವಾರ್ಪಣೆ

Suddi Udaya

ಸೆ.21: ಆಳ್ವಾಸ್ ಮೆಡಿಕಲ್ ಕಾಲೇಜು ಉದ್ಘಾಟನೆ-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿ

Suddi Udaya

ಉಜಿರೆಗೆ ಹೋಗಿ ಬರುತ್ತೇನೆ ಎಂದ ನಿಡ್ಲೆಯ ವ್ಯಕ್ತಿ ನಾಪತ್ತೆ

Suddi Udaya

ಗುರುವಾಯನಕೆರೆ ಕುಂಬಾರರ ಗುಡಿ ಕೈಗಾರಿಕ ಸಹಕಾರ ಸಂಘದ ಮುಂಗಾರು ಹಂಗಾಮ ಠೇವಣಿ ಯೋಜನೆಗಳ ಕರಪತ್ರ ಬಿಡುಗಡೆ

Suddi Udaya

ಬೆಳ್ತಂಗಡಿ ಜಂಯಿಯತುಲ್ ಫಲಾಹ್‌ಗೆ ಎಂ.ಜಿ. ತಲ್ಹತ್ ಸವಣಾಲು ಸೇರ್ಪಡೆ

Suddi Udaya

ಉಜಿರೆ: ಶ್ರೀ ಧ.ಮಂ. ಸ್ನಾತಕೋತ್ತರ ಕಾಲೇಜಿನಲ್ಲಿ ಮಹಿಳಾ ಉದ್ಯಮಿಗಳ ಅವಕಾಶಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳ ಕುರಿತು ಕ್ಯಾಂಡಿಡ್ ಟಾಕ್ ಕಾರ್ಯಕ್ರಮ

Suddi Udaya
error: Content is protected !!