November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸಲು ಬೆಳ್ತಂಗಡಿ ಕುದುರೆಮುಖ ವನ್ಯಜೀವಿ ವಿಭಾಗದಿಂದ ‘ಚಿಣ್ಣರ ವನ ದರ್ಶನ’

ಬೆಳ್ತಂಗಡಿ :ಶಾಲಾ ಮಕ್ಕಳಲ್ಲಿ ಪರಿಸರ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ಕುದುರೆಮುಖ ವನ್ಯಜೀವಿ ವಿಭಾಗ ಬೆಳ್ತಂಗಡಿ ವನ್ಯಜೀವಿ ವಲಯ ವತಿಯಿಂದ ನ. 24 ಹಾಗೂ 25 ರಂದು  ಹೊಸ್ಮರ್ ಡಿಪ್ಪೋ, ಟ್ರೀ ಪಾರ್ಕ್, ರ್ನಸರಿ, ಭಗವತಿ ಕ್ಯಾಂಪ್, ಚೆಕ್ ಪೋಸ್ಟ್ ಸಹಿತ ನಾನಾ ಕಡೆಗಳಲ್ಲಿ ‘ಚಿಣ್ಣರ ವನ ದರ್ಶನ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

“ಇಂದಿನ ಮಕ್ಕಳೇ ಮುಂದಿನ ಪರಿಸರ ರಕ್ಷಕರು. ಬಾಲ್ಯದಿಂದಲೇ ಮಕ್ಕಳಿಗೆ ಕಾಡು ಮತ್ತು ವನ್ಯಜೀವಿಗಳ ಮಹತ್ವ ತಿಳಿಸಿದರೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಲು ಸಾಧ್ಯ” ಎಂದು ಆರ್ ಎಫ್ ಓ ಶರ್ಮಿಷ್ಠಾ ತಿಳಿಸಿದರು. ಈ ಕಾರ್ಯಕ್ರಮದಲ್ಲಿ  ಬೆಳ್ತಂಗಡಿ ವಿಭಾಗ ವ್ಯಾಪ್ತಿಯ  ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಮಕ್ಕಳನ್ನು ಅರಣ್ಯ ಪ್ರದೇಶಕ್ಕೆ ಕರೆದೊಯ್ದು, ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆ, ಔಷಧೀಯ ಸಸ್ಯಗಳು, ಪಕ್ಷಿಗಳು ಮತ್ತು ವನ್ಯಜೀವಿಗಳ ಜೀವನಶೈಲಿಯ ಬಗ್ಗೆ ಪ್ರಾಯೋಗಿಕವಾಗಿ  ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉರಗ ರಕ್ಷಕ ಸ್ನೇಕ್ ಕಿರಣ್ ಮಾಹಿತಿ ನೀಡಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:• ಪ್ರಕೃತಿ ನಡಿಗೆ : ಅರಣ್ಯದೊಳಗೆ ಚಾರಣದ ಮೂಲಕ ಮರ-ಗಿಡಗಳ ಪರಿಚಯ.• ಜಾಗೃತಿ ಮಾಹಿತಿ: ಕಾಡ್ಗಿಚ್ಚು ತಡೆಗಟ್ಟುವುದು ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರದ ಬಗ್ಗೆ ಅರಿವು.• ಸಂವಾದ: ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಮಕ್ಕಳ ಪ್ರಶ್ನೋತ್ತರ ಸಂವಾದಚಿಣ್ಣರ ವನ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಹೆಮ್ಮೆ ತಂದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುಂದರ ಪರಿಸರದಲ್ಲಿ ಇತಿಹಾಸ ಹಾಗೂ ಪುರಾಣದ ಅನೇಕ ಹೊಸ ವಿಷಯಗಳನ್ನು ಕಲಿತೆ. ಅರಣ್ಯ ಇಲಾಖೆ ಸಿಬ್ಬಂದಿಯವರಂತೆ ನಾನೂ ಆಗಬೇಕೆಂಬ ಆಸೆ ಮೂಡಿದೆ. ಮುಂದೆಯೂ ನಮ್ಮ ಶಾಲೆಗೆ ಇಂತಹದ್ದೇ ಅವಕಾಶ ನೀಡಬೇಕೆಂದು ಕೋರುತ್ತೇನೆ ಎಂದು 9ನೇ ತರಗತಿ ವಿದ್ಯಾರ್ಥಿ ಜೀವನ್ ಕೆ. ಅನಿಸಿಕೆ ವ್ಯಕ್ತಪಡಿಸಿದರು.ಚಿಣ್ಣರ ವನ ದರ್ಶನದ ಭಾಗವಾಗಿ ಆಯೋಜಿಸಿದ್ದ ಪ್ರಂಬಧ ಸ್ಪರ್ಧೆಯಲ್ಲಿ  9 ನೇ ತರಗತಿಯ ಪ್ರಥಮ – ಶರಣ ಗೌಡ ಡಿ ಬಿ, ದ್ವಿತೀಯ – ಶರುಣ್ ಹಾಗೂ ತೃತೀಯ -ರೋಹಿತ್  ಬಹುಮಾನ ಗಳಿಸಿದರು. ಡಿಆರ್ ಎಫ್ ಓ ರವೀಂದ್ರ, ಗಸ್ತು ಅರಣ್ಯ ಪಾಲಕ ಹೇಮಂತ್ ಡಿ. ಪಿ., ವೀಕ್ಷಕರಾದ ಯಶ್ವಿತ ಹಾಗೂ ಪ್ರದೀಪ್, ಶಿಕ್ಷಕರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿದ ಬಿಷಪ್ ಜೇಮ್ಸ್ ಪಟ್ಟೇರಿಯಲ್ ರವರನ್ನು ಅಭಿನಂದಿಸಿದ ಶಾಸಕ ಹರೀಶ್ ಪೂಂಜ

Suddi Udaya

ಜ.24- 30: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ್ಸ್ ನಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಮಡಂತ್ಯಾರು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಸೆ.22-ಅ.2: ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ರೂ. 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಯಾತ್ರಿ ನಿವಾಸ: ನ. 23 ರಂದು ಯಾತ್ರಿ ನಿವಾಸದ ಶಿಲಾನ್ಯಾಸ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!