ಬೆಳ್ತಂಗಡಿ : ಮೈಸೂರು ಕರ್ನಾಟಕ ರಾಜ್ಯಮುಕ್ತವಿಶ್ವವಿದ್ಯಾನಿಲಯ ನಡೆಸಿದ ಎಂ.ಎಸ್ಸಿ ಬಯೋಟೆಕ್ನಾಲಜಿ ಪರೀಕ್ಷೆಯಲ್ಲಿ ಕು. ಪ್ರಾರ್ಥನಾ ಎ.ಎಂ. ಅಡ್ಕಬಳೆ ಯವರು 3ನೇ ರಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಇವರು ಪ್ರಸ್ತುತ ಬೆಳ್ತಂಗಡಿಯ ತೋಟಗಾರಿಕಾ ಇಲಾಖೆಯಲ್ಲಿ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈಕೆ ಸುಳ್ಯದ ರೋಟರಿ ಆಂಗ್ಲ ಮಾದ್ಯಮ ಶಾಲೆ ಮತ್ತು ಅರಂತೋಡು ಎನ್.ಎಂ.ಪಿ.ಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ. ಮಾಜಿ ಸೈನಿಕರಾದ ಮೋನಪ್ಪ ಗೌಡ ಅಡ್ಕಬಳೆ ಮತ್ತು ರೋಟರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಜಯಶ್ರೀ ಕೆ.ಯವರ ಪುತ್ರಿ.













