November 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜಿಲ್ಲೆಯ ಹಲವೆಡೆ ಧರ್ಮಗುರುಗಳಾಗಿದ್ದ ಹಸನ್ ಮುಸ್ಲಿಯಾರ್ ಪುತ್ರಬೈಲು ನಿಧನ

ಬೆಳ್ತಂಗಡಿ; ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿ, ಜಿಲ್ಲೆಯ ಹಲವು ಮಸ್ಜಿದ್ ಗಳಲ್ಲಿ ಧರ್ಮಗುರುಗಳಾಗಿದ್ದ ಹಸನ್ ಮುಸ್ಲಿಯಾರ್(78) ಪುತ್ರಬೈಲು ಅವರು ಅಲ್ಪಕಾಲದ ಅಸೌಖ್ಯದಿಂದ ನ.28 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಧರ್ಮಗುರುಗಳಾಗಿ ಅವರು ಕೊಕ್ಕಡ, ಉಪ್ಪಿನಂಗಡಿ, ನೆಲ್ಯಾಡಿ, ಬೆಳ್ತಂಗಡಿ, ಪುತ್ರಬೈಲು, ಮಂಗಳೂರಿನ ಪಡೀಲ್, ಬಂದರ್ ಕೇಂದ್ರ ಮಸ್ಜಿದ್ ಇಲ್ಲೆಲ್ಲಾ ಸೇವೆ ಸಲ್ಲಿಸಿದ್ದರು. ಮೃತರ ಅಂತಿಮ‌ ವಿಧಿಗಳನ್ನು ಸುನ್ನತ್‌ಕೆರೆಯಲ್ಲಿ ನಡೆಸಿ ಮಯ್ಯತ್ ನಮಾಝ್ ಗೆ ಪುತ್ರಬೈಲು ಮಸ್ಜಿದ್ ಗೆ ತರಲಾಗುವುದು. ಬಳಿಕ ಗುರುವಾಯನಕೆರೆ ಮಸ್ಜಿದ್ ದಫನ ಭೂಮಿಯಲ್ಲಿ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಮೃತರ ಕುಟುಂಬಸ್ತರು ಮಾಹಿತಿ ನೀಡಿದ್ದಾರೆ.

ಮೃತದೇಹ ಈಗ ಸುನ್ನತ್‌ಕೆರೆ ಮನೆಯಲ್ಲಿದೆ.ಮೃತರು ಪತ್ನಿ ಅತಿಜಮ್ಮ ಝೊಹರಾ, ಮಕ್ಕಳಾದ ಮುಹಮ್ಮದ್ ಶಾಕಿರ್, ಫಾರೂಕ್, ಶರೀಫ್, ಝೊಹರಾ, ಸಕೀನಾ, ಖೈರುನ್ನಿಸಾ, ಮಂಮ್ತಾಝ್, ಹಸೀನಾ, ಶಂಶು, ಹಪ್ಸಾ ಮತ್ತು ಝೈನಬಾ, ಹಾಗೂ ಸಹೋದರರು, ಅಪಾರ ಸಂಖ್ಯೆಯಲ್ಲಿ ಶಿಷ್ಯಂದಿರು ಮತ್ತು ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಪಡ್ಡಂದಡ್ಕದಲ್ಲಿ ಬಕ್ರೀದ್ ಆಚರಣೆ

Suddi Udaya

ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಸುದ್ದಿ ಉದಯ ವಾರಪತ್ರಿಕೆ ಲೋಕಾರ್ಪಣೆ ನೂತನ ಕಚೇರಿಯ ಉದ್ಘಾಟನೆ
ಯೂಟ್ಯೂಬ್ ಮತ್ತು ವೆಬ್‌ಸೈಟ್‌ಗೆ ಚಾಲನೆ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

Suddi Udaya

ಬೆಳ್ತಂಗಡಿ ಅಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

Suddi Udaya

ಆರಂಬೋಡಿ: ಹುಲಿಮೇರು ಮನೆತನದ ಬಾಬು ಪೂಜಾರಿ ನಿಧನ

Suddi Udaya
error: Content is protected !!