November 28, 2026
ಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಪ್ರಸಾರಭಾರತಿಯ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಬಿ. ಪ್ರಕಾಶ್ ದೇವಾಡಿಗ ಇವರ ಸ್ಯಾಕ್ಸೋಫೋನ್ ವಾದನ

ಬೆಳ್ತಂಗಡಿ: ಕೇಂದ್ರ ಸರಕಾರದ ಪ್ರಸಾರ ಭಾರತಿ ಆಯೋಜಿಸಿರುವ ರವಿವಾಸರಿಯ ಅಖಿಲ ಭಾರತೀಯ ಸಂಗೀತ ಸಭಾ ಎಂಬ ರಾಷ್ಟ್ರ ಮಟ್ಟದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ 29-11-2026 ರಂದು ಭಾನುವಾರ ರಾತ್ರಿ 10 ಗಂಟೆಗೆ ಧರ್ಮಸ್ಥಳ ಬಿ. ಪ್ರಕಾಶ್ ದೇವಾಡಿಗ ಇವರ ಸ್ಯಾಕ್ಸೋಫೋನ್ ಕಾರ್ಯಕ್ರಮ ಮೂಡಿಬರಲಿದೆ.

ಈಗಾಗಲೇ ಆಕಾಶವಾಣಿಯ ರಾಷ್ಟ್ರ ಮಟ್ಟದಲ್ಲಿ ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡುತ್ತಿರುವ ರಾಜ್ಯದ ಮೂರನೆಯ ಕಲಾವಿದನೆಂಬ ಹೆಗ್ಗಳಿಕೆಗೆ ಪ್ರಕಾಶ್ ದೇವಾಡಿಗರು ಪಾತ್ರರಾಗಿದ್ದಾರೆ.

ಆಕಾಶವಾಣಿ ‘ಎ’ ಗ್ರೇಡ್ ಕಲಾವಿದರಾಗಿರುವ ಪ್ರಕಾಶ್ ದೇವಾಡಿಗ ಅವರು ಸುಮಾರು 25 ವರ್ಷಗಳಿಂದ ಆಕಾಶವಾಣಿ, ದೂರದರ್ಶನ ಸೇರಿದಂತೆ ಹಲವು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ಅಮೆರಿಕ ಮುಂತಾದ ವಿದೇಶ ರಾಷ್ಟ್ರಗಳಲ್ಲೂ ತನ್ನ ಕಾರ್ಯಕ್ರಮ ನೀಡಿ ಈಗಾಗಲೇ ಜನಪ್ರಿಯರಾಗಿದ್ದಾರೆ.

ಇವರಿಗೆ ಪಕ್ಕವಾದ್ಯದಲ್ಲಿ ವಯಲಿನ್ ವಿದ್ವಾನ್ ದೀಪಕ್ ಮೂರ್ತಿ (ಬೆಂಗಳೂರು), ಮೃದಂಗ ವಿದ್ವಾನ್ ಕೃಷ್ಣ ಪವನ್ ಕುಮಾರ್ (ಮಂಗಳೂರು) ಮತ್ತು ಮೂರ್ಸಿಂಗ್‌ನಲ್ಲಿ ವಿದ್ವಾನ್ ಬಾಲಕೃಷ್ಣ ವಿ. (ಬೆಂಗಳೂರು) ಸಹಕರಿಸಲಿದ್ದಾರೆ.

ಈ ವಿಶೇಷ ಕಾರ್ಯಕ್ರಮವು ಆ ದಿನ ದೇಶದ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಏಕಕಾಲದಲ್ಲಿ ಬಿತ್ತರವಾಗುತ್ತಿರುವುದು ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಅವರು ಉಜಿರೆ ಜನಾರ್ದನ ದೇವಸ್ಥಾನದ ಸಾಂಪ್ರದಾಯಿಕ ಸ್ಯಾಕ್ಸೋಫೋನ್ ವಾದಕರೂ ಆಗಿದ್ದಾರೆ.

Related posts

ನಿಡ್ಲೆ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ರಾಜ್ಯಮಟ್ಟದ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಉಜಿರೆಯ ಎಸ್.ಡಿ.ಎಂ ತಂಡ ಚಾಂಪಿಯನ್ಸ್

Suddi Udaya

ಎಂಜಿನಿಯರಿಂಗ್ ನಲ್ಲಿ ಅಳದಂಗಡಿಯ ಶ್ರೀಪ್ರಿಯಾಗೆ 7ನೇ ರ‌್ಯಾಂಕ್

Suddi Udaya

ಫೆ.19: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವದ ಮಹಾರಥೋತ್ಸವದ ಪ್ರಯುಕ್ತ ‘ಬೆಳ್ತಂಗಡಿ ಮ್ಯೂಸಿಕಲ್ ನೈಟ್ಸ್’ ಹಾಗೂ ಬೀಟ್ ರಾಕರ್ಸ್ ಡ್ಯಾನ್ಸ್ ಇವರಿಂದ ಡಾನ್ಸ್ ಫ್ಲೇಮ್

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕಾರುಗಳ ನಡುವೆ ಡಿಕ್ಕಿ: ಓರ್ವನ ಸ್ಥಿತಿ ಗಂಭೀರ

Suddi Udaya

ನಾಲ್ಕೂರು ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!