April 2, 2025
ತಾಲೂಕು ಸುದ್ದಿ

ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ
ಸಾಮೂಹಿಕ ಗೋಪೂಜೆ – ಗೋ ನಂದಾರತಿ ಕಾರ್ಯಕ್ರಮ

ಬೆಳ್ತಂಗಡಿ: ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜ ಇದರ ಆಶ್ರಯದಲ್ಲಿ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ಇದರ ವತಿಯಿಂದ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ “ನಂದಗೋಕುಲ ದೀಪೋತ್ಸವ” ಅಂಗವಾಗಿ ಸಾಮೂಹಿಕ ಗೋಪೂಜೆ, ಗೋನಂದಾರತಿ ಮತ್ತು ದೀಪೋತ್ಸವ ಕಾರ್ಯಕ್ರಮ ಡಿ.25ರಂದು ಜರುಗಿತು.

ದೀಪೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು.,ಬರೋಡ ತುಳುಕೂಟ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ, ಕಾಯ೯ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ, ಅಮೇರಿಕ ವೆಂಚರ್‌ಸಾಫ್ಟ್ ಗ್ಲೋಬಲ್ ಸಂಸ್ಥೆಗಳ
ಸಂಸ್ಥಾಪಕ ವೆಂಕಟ್ರಮಣ ಭಟ್ ಅಗರ್ತ, ಗ್ರಾ.ಪಂ. ಕಳೆಂಜ ಅಧ್ಯಕ್ಷ ಪ್ರಸನ್ನ, ಭಾ.ಜ.ಪ ಮಂಡಲ ಅಧ್ಯಕ್ಷ ಕೆ. ಜಯಂತ್ ಕೋಟ್ಯಾನ್, ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ, ಸೋಮಂತಡ್ಕ ಪಂಚಶ್ರೀ ಉದ್ಯಮಿ ನಾರಾಯಣ ಗೌಡ, ಉದ್ಯಮಿ ಹೆಚ್. ಆರ್. ಪಟೇಲ್ ಉಜಿರೆ, ಡೀಕಯ್ಯ ಗೌಡ ಬಂಡೇರಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಗೋಕುಲ ದೀಪೋತ್ಸವದ ಸಮಿತಿ
ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ಟ್ರಸ್ಟಿಗಳಾದ ರಾಜೇಶ್ ಪೈ , ರಮೇಶ್ ಪ್ರಭು, ಭಾಸ್ಕರ ಧಮ೯ಸ್ಥಳ ಉಪಸ್ಥಿತರಿದ್ದರು.

ವೈಷ್ಣವಿ, ಇಂದುಮತಿ, ದೀಕ್ಷಿತಾ ಇವರು ಪ್ರಾಥ೯ನೆ ಹಾಡಿದರು. ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ಅಧ್ಯಕ್ಷ ಪೂರಣ್ ವಮ೯ ಸ್ವಾಗತಿಸಿದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗತ೯ ಪ್ರಾಸ್ತಾವಿಕವಾಗಿ ಮಾತನಾಡಿ,‌ ಗೋಶಾಲೆಯ ಉದ್ದೇಶ ತಿಳಿಸಿದರು.
ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಖ್ಯಾತ ದಂತ ವೈದ್ಯರಾದ ಉಜಿರೆಯ ಡಾ| ಎಂ.ಎಂ ದಯಾಕರ್ ವಂದಿಸಿದರು. ಟ್ರಸ್ಟಿ ನವೀನ್ ನೆರಿಯ ಹಾಗೂ ಹರೀಶ್ ನೆರಿಯ ಕಾಯ೯ಕ್ರಮ ನಿರೂಪಿಸಿದರು.

Related posts

ವಿಪರೀತ ಮಳೆಗೆ ಮಿತ್ತಬಾಗಿಲು ಶಾಂತಿಗುಡ್ಡೆಯಲ್ಲಿ ಗುಡ್ಡ ಕುಸಿತ

Suddi Udaya

ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಳ್ಳಾಜೆಯವರಿಂದ ಮತದಾನ

Suddi Udaya

ಮಚ್ಚಿನ : ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಆಹಾರಮೇಳ

Suddi Udaya

ಬೆಳ್ತಂಗಡಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಬಂಗೇರ ಕುಟುಂಬಸ್ಥರಿಂದ ಸಿ. ಎಂ, ಡಿ. ಸಿ. ಎಂ ಭೇಟಿ – ಕೃತಜ್ಞತೆ ಸಲ್ಲಿಕೆ

Suddi Udaya
error: Content is protected !!