37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿ

ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲು: ಶವ ಪತ್ತೆ

ಮೊಗ್ರು: ಮುಗೇರಡ್ಕ ನೇತ್ರಾವತಿ ನದಿಯ ಪಂಪ್ ಹೌಸ್ ಬಳಿ ಬಲೆ ಬಿಟ್ಟು ಮೀನು ಹಿಡಿಯಲು ಹೋದ ಯುವಕ ನೀರು ಪಾಲಾದ ಘಟನೆ ಡಿ.26 ರಂದು ಸಂಜೆ ನಡೆದಿದ್ದು, ಮೃತದೇಹ ಇಂದು ಪತ್ತೆಯಾಗಿದೆ. ನೀರು ಪಾಲಾದ ಯುವಕ ಮೊಗ್ರು ಗ್ರಾಮದ ದಂಡುಗ ನಿವಾಸಿ ಗುಮ್ಮಣ್ಣ ಗೌಡರ ವಿವಾಹಿತ ಪುತ್ರ ಜನಾರ್ಧನ ಗೌಡ (42) ಎಂದು

ತಿಳಿದುಬಂದಿದೆ. ಜನಾರ್ಧನ ಹಾಗೂ ಬೋಲೋಡಿ ನಿವಾಸಿ ಮಹೇಶ್ ಎಂಬವರು ನೇತ್ರಾವತಿ ನದಿಯಲ್ಲಿ ಮೀನು ಹಿಡಿಯಲು ಬಂದಿದ್ದರು. ಈ ವೇಳೆ ಜನಾರ್ಧನ ಅವರು ನೀರು ಪಾಲಾಗಿದ್ದಾರೆ . ಆದರೆ ಜೊತೆಗಿದ್ದ ಈತನ ಸ್ನೇಹಿತ ಮಹೇಶ್ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ. ನೀರಿಗೆ ಬಿದ್ದ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದ್ದರು. ಇಂದು ಮುಂಜಾನೆ ಮೃತದೇಹ ಪತ್ತೆಯಾಗಿದೆ. ನೀರು ಪಾಲಾದ ಯುವಕನ ಕೈ ಕಾಲುಗಳು ಗಾಯಗಳಾಗಿದ್ದು, ಸಾವಿನ ಸುತ್ತ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಪೊಲೀಸರಿಂದ ಲಭ್ಯವಾಗಬೇಕಾಗಿದೆ.

Related posts

ಸಾಮಾಜಿಕ ಜಾಲತಾಣದಲ್ಲಿ ಸಿ.ಎಂ. ಸಿದ್ದರಾಮಯ್ಯರವರ ಬಗ್ಗೆ ಅಶ್ಲೀಲ ಆಡಿಯೋ ವೈರಲ್: ರಜಿತ್ ಕೊಕ್ಕಡ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಒಂದು ಕ್ವಿಂಟಾಲ್ ಗಾಂಜಾ ವಶಪಡಿಸಿದ ಪ್ರಕರಣ: ಕಕ್ಕಿಂಜೆಯ ಇಬ್ಬರು ಸೇರಿದಂತೆ ಮೂವರು ಆರೋಪಿಗಳ ಬಂಧನ

Suddi Udaya

ಅಕ್ರಮ ಮದ್ಯ ಮಾರಾಟ ಅಡ್ಡೆಗೆ ಧರ್ಮಸ್ಥಳ ಪೊಲೀಸರ ದಾಳಿ : ಆರೋಪಿಯ ಬಂಧನ

Suddi Udaya

ಬೆಳ್ತಂಗಡಿ ಬ್ಯಾಟರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು: ಅಂಗಡಿ ಶಟರ್ ಮುರಿದು ಒಳಹೋಗಲು ಪ್ರಯತ್ನ, ಗಾಳಿ-ಮಳೆಗೆ ಸಿಸಿ ಕ್ಯಾಮರಾ ಬಂದ್ ಮಾಡಿದ್ದರಿಂದ ಕಳ್ಳರ ಚಹರೆ ಪತ್ತೆಯಾಗಿಲ್ಲ.

Suddi Udaya

ಚಾರ್ಮಾಡಿ ಘಾಟಿಯಲ್ಲಿ ಶವ ಎಸೆದ ಪ್ರಕರಣ: ಫಲ ನೀಡದ ಕಾರ್ಯಚರಣೆ

Suddi Udaya

ಪಟ್ರಮೆ ಹೊಳೆಯಿಂದ ಅಕ್ರಮ ಮರಳು ಸಂಗ್ರಹ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!