29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿ

ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆ
ಶಾಸಕ ಹರೀಶ್ ಪೂಂಜರಿಗೆ ದೈವದ ಅಭಯ

ಉಜಿರೆ : ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರಿಗೆ ರಾಜನ್ ದೈವ ಜುಮಾದಿ ಬಂಟ ನೀಡಿರುವ ಅಭಯದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಉಜಿರೆ ಗ್ರಾಮ ಪಂಚಾಯತ್‌ಉಪಾಧ್ಯಕ್ಷ ರವಿಕುಮಾರ್ ಬರೆಮೇಲುರವರ ಮನೆಯಲ್ಲಿ ಜ.6ರಂದು ನಡೆದ ಧರ್ಮ ದೈವಗಳ ನೇಮೋತ್ಸವದ ವೇಳೆ ರಾಜನ್ ದೈವ ಜುಮಾದಿ ಬಂಟನ ನುಡಿಕಟ್ಟಿನ ವೇಳೆ ಶಾಸಕ ಹರೀಶ್ ಪೂಂಜ ಆಗಮಿಸಿದ್ದರು. ಈ ವೇಳೆ ಪ್ರಸಾದ ನೀಡುವಾಗ ಊರಿನ ಅರಸ ಅಂತ ಶಾಸಕರನ್ನು ಸಂಬೋಧಿಸಿದ ದೈವ ಪಟ್ಟದಲ್ಲಿ ಕೂರಿಸಿದ್ದೇನೆ,ಇದ್ರಿಂದ ಕೆಳಗೆ ಇಳಿಯಲು ಬಿಡುವುದಿಲ್ಲ, ಇನ್ನೂ ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆಂದು ಅಭಯ ನೀಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೈವದ ಅಭಯದ ನುಡಿ:
ನೆನಪಂದೆ ಪಟ್ಟೊಡು ಕುಲ್ಲದೆ,ಉಂದೆನ್ ನನ ತಿರ್ತ್ ಜಪ್ಪರೆ ಬುಡ್ಪುಜಿ. ಈ ಕಾಲೋಗು ಕಂಬುಲಗ್ ಜೈದರ್ ಮಂಜೊಟ್ಟಿಗ್ ಯಾನ್ ಎತ್ತವೆ. ಮಂಜೋಟ್ಟಿಗ್ ಎತ್ತದ್ ಇತ್ತೆ ಕುಲ್ದುನ ಸ್ಥಾನಮಾನೋರ್ದು ಏರಿಕೆದ ಸ್ಥಾನಡ್ ಕುಲ್ಲದ್, ಮೂಡಾಯಿ ಕ್ಷೇತ್ರೋಗು ಬೋಡಾಪುನ ಅರಸುಂದ್ ಪನ್ಪವೆ.
(ಹಿಂದಿನ ಬಾರಿ ಪಟ್ಟದಲ್ಲಿ ಕೂರಿಸಿದ್ದೇನೆ,ಇಲ್ಲಿಂದ ಕೆಳಗೆ ಇಳಿಯಲು ನಾನು ಬಿಡುವುದಿಲ್ಲ.ಈ ಸಲ ಮತ್ತೆ ಕಂಬಳಕ್ಕೆ ಇಳಿದಿದ್ದೀರಿ, ಮಂಜೊಟ್ಟಿಗೆ (ಕಂಬಳ ಕೋಣ ಗುರಿ ಮುಟ್ಟುವ ಸ್ಥಳ)ನಾನು ತಲುಪಿಸುತ್ತೇನೆ. ಅಷ್ಟೇ ಅಲ್ಲ ಈಗಿರುವ ಸ್ಥಾನಕ್ಕಿಂತ ಮೇಲಿನ ಸ್ಥಾನದಲ್ಲಿ ಕುಳ್ಳಿರಿಸಿ, ಮೂಡಾಯಿ ಕ್ಷೇತ್ರಕ್ಕೆ ಬೇಕೇ ಬೇಕಾದ ಅರಸ ಅಂತ ಹೇಳಿಸುತ್ತೇನೆ )
ಎಂದು ದೈವ ನೀಡಿದ ಅಭಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Related posts

ಬೆಳ್ತಂಗಡಿಯಲ್ಲಿ ಅಗ್ನಿ ಅನಾಹುತಗಳ ತಡೆಗಟ್ಟುವ ಕುರಿತು ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದಿಂದ ತರಬೇತಿ ಕಾರ್ಯಕ್ರಮ

Suddi Udaya

ಶಿರ್ಲಾಲು ಗ್ರಾ.ಪಂ. ನಲ್ಲಿ ವಿಶೇಷಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ವಾಲಿಬಾಲ್ ಪಂದ್ಯಾಟ: ಬಂದಾರು ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಪ್ರಥಮ

Suddi Udaya

ಅಳದಂಗಡಿ: ಭಜನಾ ಸತ್ಸಂಗ ಕುಣಿತ ಭಜನೆ ಪೂರ್ವಭಾವಿ ಸಭೆ

Suddi Udaya
error: Content is protected !!