ಬೆಳ್ತಂಗಡಿ: ರೋಟರಿ ಕ್ಲಬ್ ಆಫ್ ಚೆನ್ನೈ ಹಾಲ್‌ಮಾರ್ಕ್ ಕರ್ನಾಟಿಕ್ ಮ್ಯೂಸಿಕ್ ಕಂಟೆಸ್ಟ್ ಸೀಸನ್ 4 ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯ ಗೀತಂ ವಿಭಾಗದ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳ್ತಂಗಡಿಯ ಗರ್ಡಾಡಿ ಗ್ರಾಮದ ಮಾಸ್ಟರ್ ಆಕಾಶ್ ಕೃಷ್ಣ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇದೇ ಸ್ಪರ್ಧೆಯ ವರ್ಣಂ ವಿಭಾಗದಲ್ಲಿ ಆಕಾಶ್ ಸೆಮಿ ಫೈನಲ್‌ಗೆ ಆಯ್ಕೆಯಾಗಿದ್ದರು. ಆಕಾಶ್ ಕೃಷ್ಣ ಉಜಿರೆ ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ
. ಈ ಹಿಂದೆ ಮಂಗಳೂರಿನ ಪ್ರೆಸ್ಟೀಜಿಯಸ್ ಸಭಾ ಸಂಗೀತ ಪರಿಷತ್ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯಲ್ಲಿ ಸತತ ಎರಡು ಬಾರಿ ಪ್ರಥಮ ಸ್ಥಾನ ಪಡೆದಿದ್ದು, ಇವರಿಗೆ ಶ್ರೀ ಕೃಷ್ಣಾಪುರ ವೆಂಕಟರಾವ್ ಮತ್ತು ಶ್ರೀಮತಿ ಲೀಲಾವತಿ ಯಂಗ್ ಟಾಲೆಂಟ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು. ಇವರು ಡಾ. ವಿದುಷಿ ಶ್ರೀಮತಿ ಸುಚಿತ್ರಾ ಹೊಳ್ಳ ಪುತ್ತೂರು, ವಿದ್ವಾನ್ ವಿಶ್ವೇಶ್ ಸ್ವಾಮಿನಾಥನ್ ಅಯ್ಯರ್ ಮತ್ತು ವಿದುಷಿ ರಾಜೇಶ್ವರಿ ಸ್ವಾಮಿನಾಥನ್ ಅಯ್ಯರ್ ಚೆನ್ನೈ ಇವರ ಶಿಷ್ಯ. ಪ್ರಸ್ತುತ ವಿದ್ವಾನ್ ವೇಣುಗೋಪಾಲ್ ಶಾನುಭೋಗ್ ಅವರಿಂದ ವಯಲಿನ್ ಹಾಗೂ ಅಖಿಲಾ ಪಜಿಮಣ್ಣು ಅವರಿಂದ ಲೈಟ್ ಮ್ಯೂಸಿಕ್ ತರಬೇತಿ ಪಡೆಯಿತ್ತಿದ್ದಾರೆ. ಆಕಾಶ್ ಕೃಷ್ಣ ಗರ್ಡಾಡಿ ಗ್ರಾಮದ ಪೇರಡ್ಕ ಕೇಶವ ಭಟ್ & ಸಂಧ್ಯಾ ಕೆ ಭಟ್ ಅವರ ಸುಪುತ್ರ.