September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿರಾಷ್ಟ್ರೀಯ ಸುದ್ದಿ

ಚೈನೈ: ಶಾಸ್ತ್ರೀಯ ಸಂಗೀತ ಆಕಾಶ್ ಕೃಷ್ಣ ದ್ವಿತೀಯ

ಬೆಳ್ತಂಗಡಿ: ರೋಟರಿ ಕ್ಲಬ್ ಆಫ್ ಚೆನ್ನೈ ಹಾಲ್‌ಮಾರ್ಕ್ ಕರ್ನಾಟಿಕ್ ಮ್ಯೂಸಿಕ್ ಕಂಟೆಸ್ಟ್ ಸೀಸನ್ 4 ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯ ಗೀತಂ ವಿಭಾಗದ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳ್ತಂಗಡಿಯ ಗರ್ಡಾಡಿ ಗ್ರಾಮದ ಮಾಸ್ಟರ್ ಆಕಾಶ್ ಕೃಷ್ಣ ದ್ವಿತೀಯ ಸ್ಥಾನ‌ ಪಡೆದಿದ್ದಾರೆ. ಇದೇ ಸ್ಪರ್ಧೆಯ ವರ್ಣಂ ವಿಭಾಗದಲ್ಲಿ ಆಕಾಶ್ ಸೆಮಿ ಫೈನಲ್‌ಗೆ ಆಯ್ಕೆಯಾಗಿದ್ದರು. ಆಕಾಶ್ ಕೃಷ್ಣ ಉಜಿರೆ ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ

. ಈ ಹಿಂದೆ ಮಂಗಳೂರಿನ ಪ್ರೆಸ್ಟೀಜಿಯಸ್ ಸಭಾ ಸಂಗೀತ ಪರಿಷತ್ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯಲ್ಲಿ ಸತತ ಎರಡು ಬಾರಿ ಪ್ರಥಮ ಸ್ಥಾನ ಪಡೆದಿದ್ದು, ಇವರಿಗೆ ಶ್ರೀ ಕೃಷ್ಣಾಪುರ ವೆಂಕಟರಾವ್ ಮತ್ತು ಶ್ರೀಮತಿ ಲೀಲಾವತಿ ಯಂಗ್ ಟಾಲೆಂಟ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು. ಇವರು ಡಾ. ವಿದುಷಿ ಶ್ರೀಮತಿ ಸುಚಿತ್ರಾ ಹೊಳ್ಳ ಪುತ್ತೂರು, ವಿದ್ವಾನ್ ವಿಶ್ವೇಶ್ ಸ್ವಾಮಿನಾಥನ್ ಅಯ್ಯರ್ ಮತ್ತು ವಿದುಷಿ ರಾಜೇಶ್ವರಿ ಸ್ವಾಮಿನಾಥನ್ ಅಯ್ಯರ್ ಚೆನ್ನೈ ಇವರ ಶಿಷ್ಯ. ಪ್ರಸ್ತುತ ವಿದ್ವಾನ್ ವೇಣುಗೋಪಾಲ್ ಶಾನುಭೋಗ್ ಅವರಿಂದ ವಯಲಿನ್ ಹಾಗೂ ಅಖಿಲಾ ಪಜಿಮಣ್ಣು ಅವರಿಂದ ಲೈಟ್ ಮ್ಯೂಸಿಕ್ ತರಬೇತಿ ಪಡೆಯಿತ್ತಿದ್ದಾರೆ. ಆಕಾಶ್ ಕೃಷ್ಣ ಗರ್ಡಾಡಿ ಗ್ರಾಮದ ಪೇರಡ್ಕ ಕೇಶವ ಭಟ್ & ಸಂಧ್ಯಾ ಕೆ ಭಟ್ ಅವರ ಸುಪುತ್ರ.

Related posts

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಹಬ್ಬ 2026

Suddi Udaya

ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ‘ದಸ್ಕತ್’; ಗ್ರಾಮೀಣ ಭಾಗದ ಸಂಸ್ಕೃತಿ,ಸಂಘರ್ಷ,ಸಂಭ್ರಮದ ಕಥೆ ಹೇಳುವ ದಸ್ಕತ್ ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ

Suddi Udaya

ಪುದುವೆಟ್ಟು: ಶ್ರೀಧ.ಮಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ನ.13: ಬೆಳ್ತಂಗಡಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ ಕಾರ್ಯಕ್ರಮ

Suddi Udaya

ಅಳದಂಗಡಿ ನೂರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ತರಬೇತಿ ಮೇಲ್ವಿಚಾರಕರಿಂದ ಶ್ರಮ ವಿನಿಮಯ ಮಾಡುತ್ತಿರುವ ಮಾಯ ಕಾರ್ಯಕ್ಷೇತ್ರದ ಎಂಜಿರಿಗಿ ಸಂಘದ ಬೇಟಿ

Suddi Udaya
error: Content is protected !!