33.4 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಶ್ರೀನಾಗ ಬ್ರಹ್ಮ ಸೇವಾ ಸನ್ನಿಧಿ ಕೊಜಪ್ಪಾಡಿ

ಕಳಿಯ:ಶ್ರೀ ನಾಗಬ್ರಹ್ಮ ಸೇವಾ ಸನ್ನಿಧಿ ಶೇಷಗಿರಿ ಕೋಜಪ್ಪಾಡಿ ಕಳಿಯ ಇದರ ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಾಗದರ್ಶನ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಮುಚ್ಚಿನ್ನಾಯ ಇವರ ವೈದಿಕ ವಿಧಾನಗಳೊಂದಿಗೆ ಶ್ರೀ ವೇದಮೂರ್ತಿ ರಾಮಚಂದ್ರ ಕುಂಜಿತ್ತಾಯ ಇವರ ಸಹಯೊಗದೊಂದಿಗೆ ನಾಗಬ್ರಹ್ಮ ದೇವರ ಸೇವಾ ಸನ್ನಿಧಿ ಫೆ 9ರಿಂದ 10 ರವರೇಗೆ ಜರಗಿತು

9ರಂದು ನಾಗ ದೇವರ ಮೂರ್ತಿಯ ಮೆರವಣಿಗೆ ಹಸಿರು, ಹೊರೆಕಾಣಿಕೆ ಭವ್ಯ ಮೆರವಣಿಗೆ ಜರಗಿತು ಸಿರಿಮಜಲು ಮೈದಾನದಲ್ಲಿ ಮನಸ್ವಿ ರತ್ನಗಿರಿ ಉದ್ಯಮಿ ಶೇಖರ ಶೆಟ್ಟಿ ಮೆರವಣಿಗೆ ಉದ್ಘಾಟಿಸಿದರು ನಂತರ ವೈದಿಕ ಕಾರ್ಯಕ್ರಮಗಳು ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು .ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು 10 ರಂದು ನವಗ್ರಹ ಹೋಮ ಕಲಸ ಪ್ರತಿಷ್ಠೆ ಪ್ರಧಾನ ಹೋಮ ನಾಗ ಬಿಂಬ ಪ್ರತಿಷ್ಠೆ ಪ್ರಸನ್ನ ಪೂಜೆ ಪಂಚಾಮ್ರತ ಅಭಿಷೇಕ ಕಲಶಾಬಿಷೇಕ ವೇದಮೂರ್ತಿ ಶ್ರೀ ರಾಮಚಂದ್ರ ಕುಂಜಿತ್ತಾಯ ಇವರಿಂದ ನಾಗದರ್ಶನ ನಂತರ ಅಶ್ಲೇಷ ಬಲಿ ಮಹಾಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು

. ಸಾಯಂಕಾಲ ರಾಜ್ಯ ಪ್ರಸಸ್ತಿ ವಿಜೇತ ಗುರುಮಿತ್ರ ಸಮೂಹ ಬೆಳ್ತಂಗಡಿ ಇವರಿಂದ ನ್ರತ್ಯ ಸಂಗೀತ ವೈಭವ ಧಾರ್ಮಿಕ ಸಭೆ ಜರಗಿತು ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ ವಹಿಸಿದ್ದರು ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡುತ್ತಾ ಇಡೀ ಹಿಂದೂ ಸಮಾಜದ ಅವಲೋಕನ ಮಾಡಿದರೆ ಸಾವಿರಾರು ವರ್ಷ ಈ ದೇಶದ ಚರಿತ್ರೆಯನ್ನು ನಾವು ಮತ್ತೆ ಪುನರ್ ಮನನ ಮಾಡಿದರೆ ಈ ನೆಲ ಮತ್ತೆ ಮೇಲೆದದ್ದು ಈ ನೆಲದ ತತ್ವ ಮತ್ತು ಧರ್ಮ . ಸಮಾಜಕ್ಕೆ ಶಕ್ತಿ ಕೊಟ್ಟದ್ದು ಯಾರು ಎಂದರೆ ಜನಸಾಮಾನ್ಯರು. ರೈತರು ಯುವಕರು .ತಾಯಿಯಂದಿರು. ಎಂದರು ಮುಖ್ಯ ಅತಿಥಿಗಳಾಗಿ ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಇದರ ಅಧ್ಯಕ್ಷ ಸಂಪತ್ ಸುವರ್ಣ. ಬಾರತೀಯ ಮಜ್ದೂರು ಸಂಘ ದ ಕ ಉಪಾಧ್ಯಕ್ಷ ಅನಿಲ್ ಕುಮಾರ್. ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು .ಕಳಿಯ ಗ್ರಾಮ ಪಂ ಅಧ್ಯಕ್ಷೆ ಸುಭಾಷಿಣಿ ಜನಾರ್ಧನ .ಕುವೆಟ್ಟು ಗ್ರಾಮ ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ. ಎಸ್ ಕೆ ಡಿ ಅರ್ ಡಿ ಪಿ ಯೋಜನಧಿಕಾರಿ ಯಶವಂತ .ಆಗಮಿಸಿದ್ದರು. ವೇದಿಕೆಯಲ್ಲಿ ನಾಗಬ್ರಹ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ ಐಸಿರಿ. ಬ್ರಹ್ಮಕಲಶೋತ್ವವ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಮುಗುಳಿ. ಪ್ರಧಾನ ಕಾರ್ಯಧರ್ಶಿ ಚಿದಾನಂದ ಇಡ್ಯ ಉಪಸ್ಥಿತರಿದ್ದರು ಚಿದಾನಂದ ಸ್ವಾಗತಿಸಿ ಚಂದ್ರಹಾಸ ಬಳೆಂಜ ಕಾರ್ಯಕ್ರಮ ನಿರೂಪಿಸಿದರು ನಾಗ ಬ್ರಹ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ ಐಸಿರಿ ಧನ್ಯವಾದ ವಿತ್ತರು .ಈ ಸಂದರ್ಭದಲ್ಲಿ ವೇದಮೂರ್ತಿ ಸುಬ್ರಹ್ಮಣ್ಯ ಮುಚ್ಚಿನ್ನಾಯ ಇವರನ್ನು ಮತ್ತು ಅನ್ನದಾನದ ಸೇವಾಕರ್ತರನ್ನು ದಾನಿಗಳನ್ನು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದವರನ್ನು ಗೌರವಿಸಲಾಯಿತು ಸಾಂಸ್ಕ್ರತಿಕ ಕಾರ್ಯಕ್ರಮ ಶಾರದ ಆರ್ಟ್ಸ ಕಲಾವಿದರು ಮಂಜೇಶ್ವರ ಇವರಿಂದ ಆರ್ ಪನ್ಲೆಕ ಎಂಬ ನಾಟಕ ಪ್ರದರ್ಶನ ಗೊಂಡಿತು

Related posts

ಮಾಲಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಬೆಳಾಲು ಗ್ರಾ.ಪಂ. ವತಿಯಿಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮನೆ ಮನೆ ಜಾಥಾ ಅಭಿಯಾನ ಮತ್ತು ಸ್ವಚ್ಚತಾ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಗಣಿತ ಪ್ರಯೋಗಾಲಯದ ಮಹತ್ವದ ಕುರಿತು ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜನಾ ಸಮಿತಿಯ ಅಧ್ಯಕ್ಷರಾಗಿ ಜಯಾನಂದ ಗೌಡ ಆಯ್ಕೆ

Suddi Udaya

ಮಹಿಳೆಯ ಬ್ಯಾಗ್ ನಲ್ಲಿ ಇರಿಸಿದ್ದ ರೂ. 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಉಜಿರೆ: ಕಾಮಧೇನು ಎಂಟರ್ ಪ್ರೈಸಸ್ ಶುಭಾರಂಭ

Suddi Udaya
error: Content is protected !!