25 C
ಪುತ್ತೂರು, ಬೆಳ್ತಂಗಡಿ
May 24, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ವೈದ್ಯಕೀಯ ನೆರವು

ಬಳಂಜ: ಕಳೆದ ಒಂದೂವರೆ ವರ್ಷದಿಂದ ನೂರಾರು ಕಡೆಗಳಲ್ಲಿ ಕುಣಿತಾ ಭಜನೆ ಪ್ರದರ್ಶನೆ ನೀಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ಬ್ರಹ್ಮಶ್ರಿ ಕುಣಿತಾ ಭಜನಾ ಮಂಡಳಿಯು ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ‌ ಇವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ.

ಭಜನೆಯೊಂದಿಗೆ ಹಲವಾರು ಅಶಕ್ತ ಕುಟುಂಬಗಳಿಗೆ ನೆರವು ಕೂಡ ನೀಡುತ್ತ ಬರುತ್ತಿರುವ ತಂಡವು ತನ್ನ 5 ನೇ ಸೇವಾ ಯೋಜನೆಯನ್ನು ಅನಾರೋಗ್ಯದಿಂದ ಬಳಲುತ್ತಿರುವ ಕಡೆಂಗಾಲು ನೋಣಯ್ಯ ಪೂಜಾರಿಯವರಿಗೆ ಹಸ್ತಾಂತರಿಸಲಾಯಿತು.

ನೋಣಯ್ಯ ಪೂಜಾರಿಯವರು ಕಾಲಿನ ಮಣಿಗಂಟಿನ ಸಮಸ್ಯೆಯನ್ನು ಎದುರಿಸುತ್ತಿದ್ದು ನಡೆದಾಡಲು ಕಷ್ಟಪಡುತ್ತಿದ್ದಾರೆ. ಅವರಿಗೆ ವಾಕ್ ಚಯರ್ ಹಾಗೂ ಪೂನಾ ಉದ್ಯಮಿ ಯೋಗೀಶ್ ಪೂಜಾರಿ ಕಾಪಿನಡ್ಕ ಸಹಾಯಾರ್ಥ ಅಕ್ಕಿ ವಿತರಿಸಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲಾಯಿತು. ಇವರ ಮಗಳು ಸುರಕ್ಷಾ ರವರು ಭಜನಾ ತಂಡದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಬಳಂಜ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್,ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಬಳಂಜ, ಭಜನಾ ತಂಡದ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ, ಬಳಂಜ ಬಿಲ್ಲವ ಸಂಘದ ನಿರ್ದೇಶಕರಾದ ಜಗದೀಶ್ ಪೂಜಾರಿ ಬಳ್ಳಿದಡ್ಡ,ಯೋಗೀಶ್ ಪೂಜಾರಿ ಕೊಂಗುಳ,ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಸದಸ್ಯ ಪ್ರಣಾಮ್ ಶೆಟ್ಟಿ, ಹಿರಿಯರಾದ ನಾರಾಯಣ ಪೂಜಾರಿ ಮಜ್ಜೇನಿ,ಭಜನಾ ಮಂಡಳಿ ಅಧ್ಯಕ್ಷೆ ರೂಪಾ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related posts

ವಾಣಿ ಆಂ.ಮಾ. ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ:

Suddi Udaya

ಮದಡ್ಕದಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಶೆಡ್:ಬೆಳ್ತಂಗಡಿ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ ನೇತೃತ್ವದ ತಂಡದಿಂದ ನೆಲಸಮ

Suddi Udaya

ಬೆಳ್ತಂಗಡಿ ನಗರಕ್ಕೆಕುಡಿಯುವ ನೀರು ಸರಬರಾಜು ಮಾಡುವ ಸೋಮಾವತಿ ನದಿಯ ಗುಂಡಿಗೆ ಕಿಡಿಗೇಡಿಗಳಿಂದ ವಿಷ : ಸಾವಿರಾರು ಸಂಖ್ಯೆಯಲ್ಲಿ ಮೀನುಗಳ ಸಾವು

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ಬ್ರಹ್ಮಕಲಶದ ದಿನಾಚರಣೆ

Suddi Udaya

ಧರ್ಮಸ್ಥಳ: ಜೋಡುಸ್ಥಾನದಲ್ಲಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ

Suddi Udaya

ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತಚಲಾಯಿಸಿದ ಮಗ: ಅನಾರೋಗ್ಯದ ನಡುವೆಯೂ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ ರೋಹಿಣಿ

Suddi Udaya
error: Content is protected !!