April 2, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಬಳಂಜ: ಶ್ರೀಗುರುಪೂಜೆ ಪ್ರಯುಕ್ತ ಬಿಲ್ಲವ ಸಂಘದಿಂದ ಕ್ರೀಡಾಕೂಟ

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ,ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ ಶ್ರೀ ಗುರುಪೂಜೆ ಅಂಗವಾಗಿ ಕ್ರೀಡಾಕೂಟವು ಫೆ12 ರಂದು ಅಟ್ಲಾಜೆ ಮೈದಾನದಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಬಳಂಜ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಸಾಂತಪ್ಪ ಸುವರ್ಣ ದೀಪ ಬೆಳಗಿಸುವುದರ ಮೂಲಕ ನೇರವೇರಿಸಿ ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ವಹಿಸಿದ್ದರು.

ವೇದಿಕೆಯಲ್ಲಿ ಬಳಂಜ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್, ಯುವ ಉದ್ಯಮಿ ಪ್ರಶಾಂತ್ ಕೋಟ್ಯಾನ್ ದರ್ಖಾಸು,ಸಂಘದ ಮಾಜಿ ಅಧ್ಯಕ್ಷರಾದ ಸುರೇಶ್ ಪುಜಾರಿ ಜೈಮಾತ, ದಿನೇಶ್ ಕೋಟ್ಯಾನ್ ಕುದ್ರೋಟ್ಟು,ಅಟ್ಲಾಜೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂದೇಶ್ ಪೆರಾಜೆ,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರವೀಣ್ ಕೋಟ್ಯಾನ್, ಕಾರ್ಯದರ್ಶಿ ಶರತ್ ಅಂಚನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಪುಷ್ಪಾ ಗೀರೀಶ್,ಕಾರ್ಯದರ್ಶಿ ಕಲಾವತಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಬಳಂಜ ಸ್ವಾಗತಿಸಿದರು. ಸದಸ್ಯ ಚಂದ್ರಹಾಸ ಬಳಂಜ ನಿರೂಪಿಸಿದರು. ಉಪಾಧ್ಯಕ್ಷ ಯತೀಶ್ ವೈ.ಎಲ್ ವಂದಿಸಿದರು.
ಯುವಕರಿಗೆ ,ಯುವತಿಯರಿಗೆ, ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳು, ಫನ್ನಿ ಗೇಮ್ಸ್ ನಡೆಯಿತು.

Related posts

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

Suddi Udaya

ಜಿಲ್ಲೆಯ ಹಾಸ್ಟೇಲ್‌ಗಳ ಸ್ಥಿತಿಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್‌ ಪ್ರಶ್ನೆ

Suddi Udaya

ಗೇರುಕಟ್ಟೆ :ಸಂವಿಧಾನ ಜಾಗೃತಿ ಜಾಥಾ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ಮಚ್ಚಿನ: ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ್ ಮಚ್ಚಗುರಿ

Suddi Udaya

ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ರಾತ್ರಿ 12 ರವರೆಗೆ ನಿ‍ಷೇಧ: ದ.ಕ. ಜಿಲ್ಲಾಧಿಕಾರಿ ಆದೇಶ

Suddi Udaya
error: Content is protected !!