ಮೈಪಾಲ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರದಿಂದ ರೂ 72 ಕೋಟಿ ಅನುದಾನ

Suddi Udaya

ಬೆಳ್ತಂಗಡಿ: ಬಂದಾರು ಮತ್ತು ಕೊಕ್ಕಡ ಗ್ರಾಮ ಸಂಪರ್ಕಿಸುವ ಮೈಪಾಲ ಎಂಬಲ್ಲಿಗೆ
ಸೇತುವೆ ಬೇಕೆಂಬುದು ಈ ಎರಡು ಗ್ರಾಮಗಳ‌ ಜನರ‌ ಹಲವು ವಷ೯ಗಳ ಬೇಡಿಕೆ. ಇದಕ್ಕಾಗಿ ಈ ಭಾಗದ‌ ಜನರು‌ ಸಲ್ಲಿಸಿದ ಮನವಿಗಳಿಗೆ ಲೆಕ್ಕವಿಲ್ಲ. ಹಲವಾರು ಸರ್ಕಾರಗಳು ಬಂದು ಹೋದರೂ, ಇವರ ಬೇಡಿಕೆ ಈಡೆರಲಿಲ್ಲ. ಇದೀಗ ಹಲವು ವಷ೯ಗಳ ಬಳಿಕ ಗ್ರಾಮಸ್ಥರ ಕನಸು ನನಸಾಗುವ ಹಂತಕ್ಕೆ ಬಂದಿದೆ.


ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕ ಹಾಗೂ ನವಬೆಳ್ತಂಗಡಿ ನಿಮಾ೯ಣದ‌ ಕನಸುಗಾರ ಹರೀಶ್ ಪೂಂಜ ಅವರು ಸರ್ಕಾರದಿಂದ‌ ರೂ. 72 ಕೋಟಿ ಅನುದಾನ ಮಂಜೂರು ಮಾಡಿಸುವ‌ ಮೂಲಕ ನುಡಿದಂತೆ ನಡೆದು, ಎರಡು ಗ್ರಾಮಗಳ ಗ್ರಾಮಸ್ಥರ ಹಲವು ವಷ೯ಗಳ ಬೇಡಿಕೆಯನ್ನು ಈಡೇರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಯೋಜನೆಯಲ್ಲಿ ಬಂದಾರು ಮತ್ತು ಕೊಕ್ಕಡ ಗ್ರಾಮ ಸಂಪರ್ಕಿಸುವ ಮೈಪಾಲ ಎಂಬಲ್ಲಿ ನೇತ್ರಾವತಿ ನದಿಗೆ ರೂ. 72 ಕೋಟಿ ವೆಚ್ಚದಲ್ಲಿ ಸಂಪರ್ಕ ಸೇತುವೆ
ಸಹಿತ ಕಿಂಡಿ ಅಣೆಕಟ್ಟು
ನಿರ್ಮಾಣವಾಗಲಿದೆ.
ಕೊಕ್ಕಡ ಹೋಬಳಿ ಕೇಂದ್ರ, ಕಣಿಯೂರು,ಬಂದಾರು,ಬೆಳಾಲು,ಮೊಗ್ರು ,ಇಳಂತಿಲ,ಬಾರ್ಯ,ತಣ್ಣಿರುಪಂತ ವ್ಯಾಪ್ತಿಯ ಜನರು ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಕೊಕ್ಕಡಕ್ಕೆ ಹೋಗಬೇಕು. ಮೈಪಾಲದಲ್ಲಿ ಸೇತುವೆ ಇಲ್ಲದ್ದರಿಂದ ಸುತ್ತು ಬಳಸಿ, ಮೂರ್ನಕು ಬಸ್ ಬದಲಾಯಿಸಿ ಹೋಗಬೇಕಾದ ಅನಿವಾರ್ಯತೆ ಇದೆ. ಆನೇಕ ವಷ೯ಗಳಿಂದ ಜನರು ಈ ‌ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದ್ದಾರೆ. ಅಲ್ಲಿದೆ ಪುತ್ತೂರು, ಉಪ್ಪಿನಂಗಡಿ ಕಡೆಯ ಶಾಲಾ,‌ ಕಾಲೇಜು ಗಳಿಗೆ ಹೋಗುವ ವಿದ್ಯಾರ್ಥಿಗಳು, ಪುತ್ತೂರಿಗೆ ಅಗತ್ಯ ಕಾಯ೯ಗಳಿಗೆ‌ ಹೋಗಬೇಕಾದ ನಾಗರಿಕರು ನೆಲ್ಯಾಡಿ, ಅಥವಾ ಬೆಳ್ತಂಗಡಿ ಮೂಲಕ ಹೋಗಬೇಕಾಗಿದೆ. ಇದೀಗ ಮೈಪಾಲದಲ್ಲಿ ಸೇತುವೆ ಆಗುವುದರಿಂದ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಶಾಸಕರ ಪ್ರಯತ್ನದಿಂದ ಮೈಪಾಲಕ್ಕೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಮಂಜೂರಾತಿ ಆಗಿರುವುದು ಗ್ರಾಮಸ್ಥರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

1 thought on “ಮೈಪಾಲ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರದಿಂದ ರೂ 72 ಕೋಟಿ ಅನುದಾನ”

Leave a Comment

error: Content is protected !!